ಸದೃಢ ದೇಹದ ಬೆಳವಣಿಗೆಯಲ್ಲಿ ಪೌಷ್ಟಿಕ ಆಹಾರದ ಪಾತ್ರ ಮಹತ್ವದ್ದು – ಯತೀಶ್.ಎಂ ಸಿದ್ದಾಪುರ ಅಭಿಪ್ರಾಯ.
ಚಳ್ಳಕೆರೆ ಫೆ.10

ಸದೃಢವಾದ ದೇಹದ ಬೆಳವಣಿಗೆಯಲ್ಲಿ ಪೌಷ್ಟಿಕ ಆಹಾರದ ಪಾತ್ರ ಅತ್ಯಂತ ಮಹತ್ವದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಯತೀಶ್ ಎಂ ಸಿದ್ದಾಪುರ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ”ದಲ್ಲಿ ಭಾಗವಹಿಸಿ ಭಜನೆ ನಡೆಸಿಕೊಟ್ಟ ಅವರು “ಸಮರ್ಥ ವ್ಯಕ್ತಿತ್ವ ನಿರ್ಮಾಣದಲ್ಲಿ ಭೋಜನದ ಮಹತ್ವ” ಎಂಬ ವಿಷಯವಾಗಿ ಉಪನ್ಯಾಸ ನೀಡಿದರು.

ಬದುಕುವ ಸಲುವಾಗಿ ಊಟ ಮಾಡಬೇಕೇ ಹೊರತು ಊಟಕ್ಕಾಗಿ ಬದುಕಬಾರದು. ನಿಯಮಿತ ವೇಳೆಯಲ್ಲಿ ಅವಶ್ಯವಿದ್ದಷ್ಟು ಪ್ರಮಾಣದ ಪುಷ್ಟಿಕರವಾದ ಆಹಾರವನ್ನು ವಿದ್ಯಾರ್ಥಿಗಳು ತೆಗೆದು ಕೊಳ್ಳಬೇಕು. ಮನೆ ಅಥವಾ ಸಾರ್ವಜನಿಕವಾಗಿ ಆಹಾರ ತೆಗೆದು ಕೊಳ್ಳುವಾಗ ಶಿಷ್ಟಾಚಾರವನ್ನು ಪಾಲಿಸ ಬೇಕು ಎಂದರು.
ಈ ಶಿಬಿರದ ಪ್ರಯುಕ್ತ ಮಕ್ಕಳಿಂದ ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ, ಶ್ರೀರಾಮಕೃಷ್ಣರ ನಾಮಸ್ಮರಣೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ, ಸ್ವದೇಶ ಮಂತ್ರ ಮತ್ತು ಅಮ್ಮಾ ಶಾರದಾಮಾತೆ ಪಠಣ ನಡೆಯಿತು.
ಕಾರ್ಯಕ್ರಮದಲ್ಲಿ ಸಂತೋಷ್ ಕುಮಾರ್, ಚೇತನ್, ಸುದೀಪ್, ಬಿಂದು, ಹಂಸ, ವೈಷ್ಣವಿ, ಚರಣ್ಯ, ಶ್ರೀನಿಹಾಂತ್, ಕೋಮಲಾಸಿರಿ, ವಿವಿಕ್ತ, ವಿಷ್ಣು, ಪ್ರಣವ್, ಯಶಸ್, ಮನ್ವಿತ್, ನಮ್ರತಾ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
