ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮತ್ತು – ಪೊಲೀಸ್ ಠಾಣೆ ಭೇಟಿ.

ಹುಲಿಕೆರೆ ಫೆ.11

ಕಾನಾ ಹೊಸಹಳ್ಳಿ ಕ್ಷೇತ್ರ ಪ್ರವಾಸ ಹಿನ್ನೆಲೆಯಲ್ಲಿ ಹುಲಿಕೆರೆ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೋಮವಾರ ಕಾನಾ ಹೊಸಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನಿಡಿದರು.

ಈ ಸಂದರ್ಭದಲ್ಲಿ ಪಿ.ಎಸ್.ಐ ಸಿದ್ರಾಮ ಬಿದರಾಣಿ ಅವರು ವಿದ್ಯಾರ್ಥಿಗಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಿದರು.ವಿದ್ಯಾರ್ಥಿ ದಿಸೆಯಲ್ಲಿ ಉತ್ತಮ ಗುರಿಯಿಟ್ಟು ಕೊಂಡು ಮುನ್ನಡೆದರೆ ಉಜ್ವಲ ಭವಿಷ್ಯ ರೂಪಿಸಿ ಕೊಳ್ಳಬಹುದು ಎಂದು ಹೇಳಿದ ಬಿದರಾಣಿ. ಕಾನೂನಿನ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಅರಿವು ಮೂಡಿಸಿ ಕೊಂಡು ತಮ್ಮ ಪೋಷಕರಿಗೂ ಈ ಬಗ್ಗೆ ತಿಳಿಸಿ ಕೊಡಬೇಕು ಎಂದು ಸಲಹೆ ನೀಡಿದರು.

ಪೊಲೀಸರ ಬಗ್ಗೆ ಯಾವುದೇ ಭಯ ಬೇಡ, ಭಯವನ್ನು ಹೋಗಲಾಡಿಸಿ ಪೊಲೀಸರೆಂದರೆ ಜನ ಸ್ನೇಹಿಗಳು ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವವರು ಎಂದರು.

ಈ ವಿದ್ಯಾರ್ಥಿ ಜೀವನವು ತುಂಬಾ ಅಮೂಲ್ಯವಾದದ್ದು ತಾವು ಕಷ್ಟ ಪಟ್ಟು ಓದಿ ಉತ್ತಮವಾದ ಅಂಕಗಳನ್ನು ಪಡೆದು ಉನ್ನತ ಹುದ್ದೆಗಳಲ್ಲಿ ಸೇರಿ ಸಮಾಜದಲ್ಲಿ ತಂದೆ ತಾಯಿಗಳಿಗೆ ಗುರು ಹಿರಿಯರಿಗೆ ವಿದ್ಯಾ ಕಲಿಸಿದ ಶಿಕ್ಷಕರಿಗೆ ಹೆಸರು ತರುವಂತವರಾಗಿರಿ ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದರು.

ಮುಖ್ಯ ಶಿಕ್ಷಕಿ ಡಿ ವಿಮಲಾಕ್ಷಿ ಮಾತನಾಡಿ, ಕ್ಷೇತ್ರ ಪರಿಚಯ ವಿದ್ಯಾರ್ಥಿಗಳಿಗೆ ತರಗತಿಯ ಹೊರಗಿನ ಪ್ರಾಯೋಗಿಕ ಕಲಿಕೆಗೆ ಸಹಕಾರಿ ಯಾಗಿದೆ ಎಂದರು.

40 ಕ್ಕೂ ಹೆಚ್ಚು ಶಾಲಾ ಮಕ್ಕಳು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ. ಪೊಲೀಸರ ದೈನಂದಿನ ಕೆಲಸ, ಗಸ್ತು ತಿರುಗುವಿಕೆ ಮತ್ತು ಇತರ ಕಾರ್ಯಗಳ ಬಗ್ಗೆ ಮಾಹಿತಿ ಪಡೆದು ಕೊಂಡರು.

ಈ ಸಂದರ್ಭದಲ್ಲಿ ಸಿಬ್ಬಂದಿ ತಿಪ್ಪೇರುದ್ರಪ್ಪ, ಸಂದೀಪ್, ಸುರೇಶ್, ಕೊಟ್ರೇಶ್ ಹಾಗೂ ಶಿಕ್ಷಕರಾದ ಬಿ.ಎನ್ ಜನಾರ್ದನ, ಎಂ.ಕೆ ಭಾರ್ಗವಿ ಇದ್ದರು.

ಪೊಲೀಸ್ ಠಾಣೆ ಭೇಟಿಯ ನಂತರ ವಿದ್ಯಾರ್ಥಿಗಳು ಪೂಜಾರಹಳ್ಳಿಯ ಸೋಲರ ಪ್ಲಾಂಟ್ ಮತ್ತು ಸಾವಯವ ಕೃಷಿಕ ತಿಪ್ಪೇಸ್ವಾಮಿ ಅವರ ತೋಟಕ್ಕೆ ಭೇಟಿ ನಿಡಿದರು ಎಂದು ವರದಿಯಾಗಿದೆ.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button