ರಾಷ್ಟೀಯ ಜಂತು ಹುಳು ನಿವಾರಣೆ ದಿನಾಚರಣೆಯೆಂದು – ಜಂತು ಹುಳು ನಾಶ ಮಾತ್ರೆ ವಿತರಣೆ.
ಅಮೀನಗಡ ಫೆ.11

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ ವತಿಯಿಂದ, ಪ್ರಾಥಮಿಕ ಆರೋಗ್ಯ ಕೇಂದ್ರ ಅಮೀನಗಡ ಹಾಗೂ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ಪ್ರಾಥಮಿಕ ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ ಆಯೋಜಿಸಲಾಗಿತ್ತು. ಪ್ರೌಢ ಶಾಲಾ ದೖಹಿಕ ಶಿಕ್ಷಕರಾದ ಎಸ್.ಎಚ್ ಬೀರಕಬ್ಬಿ, ಸಹ ಶಿಕ್ಷಕರಾದ ಎಚ್.ಎಲ್ ಹೆಬ್ಬಾಳ, ಎಸ್.ಪಿ ಬೆಣ್ಣೂರ ವಿದ್ಯಾರ್ಥಿಗಳಿಗೆ ಜಂತು ಮಾತ್ರೆ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಾಸ್ತಾವಿಕವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಮೀನಗಡದ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು, ಜಂತು ರಹಿತ ಮಕ್ಕಳು ಆರೋಗ್ಯವಂತ ಮಕ್ಕಳು, ಸ್ವಚ್ಛತೆ ಶುದ್ಧ ನೀರು ಬಳಕೆಯಿಂದ ಜಂತು ಹುಳು ತಡೆಯಬಹುದು, 1 ವರ್ಷ ದಿಂದ 19 ವರ್ಷ ವಯೋ ಮಾನದವರಿಗೆ ಜಂತು ನಾಶಕ ಅಲ್ಬೆಂಡಾಜೋಲ್ ಮಾತ್ರೆ ಎಲ್ಲಾ ಶಾಲಾ ಮಕ್ಕಳಿಗೆ ಊಟದ ನಂತರ ಸೇವಸ ಬೇಕು ಮಕ್ಕಳಲ್ಲಿ ಜಂತು ಹುಳು ಬಾಧೆಯಿಂದ ಅಪೌಷ್ಠಿಕತೆ ಮಕ್ಕಳ ಬೆಳವಣಿಗೆ ಕುಂಠಿತ ವಾಗುವುದು ರಕ್ತ ಹೀನತೆ, ಪೋಷಕಾಂಶಗಳ ಕೊರತೆ ಯಿಂದ ಮಕ್ಕಳು ಅನಾರೋಗ್ಯ ಪೀಡಿತರಾಗುವರು. ಜಂತು ಹುಳು ತಡೆಗೆ, ತರಕಾರಿ ತೊಳೆದು ಉಪಯೋಗಿಸುವುದು, ಆಹಾರ ಸೇವನ ಮುಂಚೆ ಕೈಗಳ ಸ್ವಚ್ಚವಾಗಿ ತೋಳೆಯುವುದು.
ಪಾದರಕ್ಷೆ ಉಪಯೋಗಿಸುವುದು. ಮತ್ತು ಪ್ರತಿ ಆರು ತಿಂಳಿಗೊಮ್ಮೆ ಆರೋಗ್ಯ ಇಲಾಖೆ ವಿತರಿಸುವ ಅಲ್ಬೆಂಡಾಜೋಲ್ ಮಾತ್ರೆ ಸೇವಿಸುವದರಿಂದ ಜಂತು ಹುಳು ತಡೆಗಟ್ಟ ಬಹುದೆಂದರು. ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮದಲ್ಲಿ, ಆರೋಗ್ಯ ಇಲಾಖೆಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸಿ.ಎಸ್ ಕೊಲ್ಕಾರ, ಅಮೀನಗಡ ಆಶಾ ಕಾರ್ಯಕರ್ತೆಯರು, ಶಾಲಾ ಗುರು ವೃಂದವರು ಶಾಲಾ ಮಕ್ಕಳು ಭಾಗವಹಿಸಿದ್ದರು.

