ದಲಿತ ಸಂಘರ್ಷ ಸಮಿತಿ (ಮಹಾತ್ಮ ಪ್ರೊ, ಬಿ. ಕೃಷ್ಣಪ್ಪ.ಬಣ) – ಗ್ರಾಮ ಶಾಖೆ ಉದ್ಘಾಟನೆ ಜರುಗಿತು.

ಎಕ್ಕೆಗೊಂದಿ ಫೆ.11

ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಹಿಂದುಳಿದ ದಲಿತ ಸಮುದಾಯದವರು ಸರ್ಕಾರದ ಸೌಲಭ್ಯ ಪಡೆಯಲು ಮಕ್ಕಳಿಗೆ ಶಿಕ್ಷಣ ಕೊಡಿಸಿ ಜಾಗೃತರಾಗ ಬೇಕಾಗಿದೆ ಎಂದು ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ ಎಸ್. ದುರುಗೇಶ್ ಕಿವಿಮಾತು ಹೇಳಿದರು.

ಕೂಡ್ಲಿಗಿ ತಾಲೂಕಿನ ಎಕ್ಕೆಗೊಂದಿ ಗ್ರಾಮದ ದಲಿತ ಕಾಲೋನಿಯಲ್ಲಿ ನಡೆದ ಮಂಗಳವಾರ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೂತನ ಗ್ರಾಮ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ದಲಿತರು ಮುಖ್ಯ ವಾಹಿನಿಗೆ ಬರಲು ಪ್ರೊ.ಕೃಷ್ಣಪ್ಪ ಅವರೇ ಕಾರಣರಾಗಿದ್ದಾರೆ. ಸಂವಿಧಾನ ಬದ್ಧವಾಗಿ ಹೋರಾಟ ಮಾಡಲು ನಮ್ಮ ಸಂಘಟನೆ ಸದಾ ಸಿದ್ಧವಿದೆ. ಗ್ರಾಮೀಣ ಭಾಗದಲ್ಲಿ ಶಾಖೆಗಳನ್ನು ತೆರೆಯುವ ಮೂಲಕ ಕೃಷ್ಣಪ್ಪ ಬಣದ ಕಾರ್ಯಕರ್ತರನ್ನು ತಳ ಮಟ್ಟದಲ್ಲಿ ಗಟ್ಟಿ ಮಾಡುತ್ತಿದ್ದೇವೆ‌.

ಮುಂದಿನ ದಿನಗಳಲ್ಲಿ ದಲಿತರು ಶಿಕ್ಷಣದಿಂದ ವಂಚಿತರಾಗ ಬಾರದು ಎಂದು ಸಂವಿಧಾನದಲ್ಲಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದ್ದರು. ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಮುಂದೆ ಅವರೇ ಸಮಾಜದ ಆಸ್ತಿಯಾಗುತ್ತಾರೆ. ಈ ನಿಟ್ಟಿನಲ್ಲಿ ದಲಿತ ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಪ್ರಯತ್ನಿಸಬೇಕು. ನಿಮಗೆ ಏನಾದರೂ ಅನ್ಯಾಯವಾದರೆ ಪ್ರೊ.ಕೃಷ್ಣಪ್ಪ ಬಣದ ಡಿ.ಎಸ್‍.ಎಸ್ ಸಂಘಟನೆ ಸದಾ ನಿಮ್ಮೊಂದಿಗೆ ಇರಲಿದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಡಿ.ಎಸ್.ಎಸ್ ತಾಲೂಕು ಸಂಚಾಲಕ ಎಚ್ ದುರುಗೇಶ್ ಬಡೇಲಡುಕು ಮಾತನಾಡಿ, ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಉನ್ನತ ಮಟ್ಟದ ಶಿಕ್ಷಣ ಪಡೆದಿದ್ದರು. ಅವರು ಹಲವಾರು ಭಾಷೆ ಕಲಿತಿದ್ದು ನೂರಾರು ಗ್ರಂಥಗಳನ್ನು ಅಧ್ಯಯನ ಮಾಡಿದ್ದರು. ಮುಂದಿನ ದಿನಗಳಲ್ಲಿ ದಲಿತರು ಶಿಕ್ಷಣದಿಂದ ವಂಚಿತರಾಗ ಬಾರದು ಎಂದು ಸಂವಿಧಾನದಲ್ಲಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದ್ದರು.

ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಮುಂದೆ ಅವರೇ ಸಮಾಜದ ಆಸ್ತಿಯಾಗುತ್ತಾರೆ ಎಂದರು. ಡಿ.ಎಸ್.ಎಸ್ ಸಂಘಟನೆ ನಿಮ್ಮ ಬೆಂಬಲಕ್ಕೆ ನಿಲ್ಲಲಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಡಿ.ಎಸ್.ಎಸ್ ಜಿಲ್ಲಾ ಸಂಘಟನಾ ಸಂಚಾಲಕರಾದ ದುರುಗೇಶ್ ಬಿ.ಟಿ ಗುದ್ದಿ, ಕಂದಗಲ್ ಪರಶುರಾಮ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಬಿ ಹನುಮೇಶ್ ಗೆದ್ದಲಗಟ್ಟೆ, ಕಾಂಗ್ರೆಸ್ ಮುಖಂಡ ಎಕ್ಕೆಗುಂದಿ ನಾಗರಾಜ್, ಕರಿಬಸಪ್ಪ ಲೋಕಿಕೆರೆ, ತಾಲೂಕು ಸಂಘಟನಾ ಸಂಚಾಲಕರಾದ ಎನ್ ಫಕೀರಪ್ಪ ಕಾನಮಡುಗು, ಜಿ ಮಹೇಶ್ ಕೂಡ್ಲಿಗಿ, ಸಿಎಸ್ ಪುರ ಮಹೇಶ್, ಚೌಡಾಪುರ ಬಸವರಾಜ್, ಐಗಳು ಮಲ್ಲಾಪುರ ರಮೇಶ್, ಅಜಯ್ ಕೂಡ್ಲಿಗಿ, ಮಡ್ಲಕನಹಳ್ಳಿ ನಾಗರಾಜ್, ಯಲ್ಲಪ್ಪ ಕುಮತಿ, ಮಂಜಣ್ಣ ಮಳೆಹಳ್ಳಿ, ಹೊಸಹಳ್ಳಿ ಅಜಯ್, ಪೂಜಾರಹಳ್ಳಿ ತಿಪ್ಪೇಶ್, ಲೋಕಿಕೆರೆ ದುರ್ಗೇಶ್, ತಿಪ್ಪೆಹಳ್ಳಿ ತಿಪ್ಪೇಶ್ ಹಾಗೂ ಕಾಂಗ್ರೆಸ್ ಮುಖಂಡರು ನಾಗರಾಜ್, ಗ್ರಾಮದ ಮುಖಂಡ ಸಿದ್ದಣ್ಣ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಾಘವೇಂದ್ರ, ತಿಮ್ಮಾರೆಡ್ಡಿ, ಆಡಿವಿಪ್ಪ, ಬಸವರಾಜ್ ಬಿ, ಮಲ್ಲೂರಹಳ್ಳಿ ರಮೇಶ್ ಸೇರಿದಂತೆ ದಲಿತ ಹಿರಿಯ ಮುಖಂಡರು, ಗ್ರಾಮಸ್ಥರು, ಮಹಿಳೆಯರು, ಪೊಲೀಸ್ ಇಲಾಖೆ ಸಿಬ್ಬಂದಿಗಳು ಇತರರು ಉಪಸ್ಥಿತರಿದ್ದರು‌.

ಎಕ್ಕೆಗೊಂದಿ ನೂತನ ಗ್ರಾಮ ಶಾಖೆ ಸಂಚಾಲಕ ತಿಪ್ಪೇಶ್, ಸಂಘಟನಾ ಸಂಚಾಲಕರಾದ ಓಬಳೇಶ್, ನಾಗರಾಜ್, ಟಿ ಓಬಳೇಶ್, ನಾಗರಾಜ್ ಜಾಕಿ, ಸಿದ್ದಮೂರ್ತಿ, ಪಿ ರವೀಂದ್ರ, ಕುಬೇರ, ಓ ತಿಪ್ಪೇಶ್, ಬಡಗಿ ಶಾಂತಪ್ಪ, ಬೋರಣ್ಣ, ಕಂಚೋಬಳೇಶ್, ಭೀಮಣ್ಣ, ಬೋರೇಶ್, ಕರಿಬಸವ, ಚನ್ನಪ್ಪ ಹಾಗೂ ಖಜಾಂಚಿಯಾಗಿ ಶಾಂತಪ್ಪ ಆಯ್ಕೆ ಮಾಡಲಾಯಿತು.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button