🚨 BREAKING NEWS,ಅಲೆಲೆಲೇ ಸುಕುಮಾರ- ಕತರ್ನಾಕ್ ಲೂಟಿ ವೀರ..!🚨 ಮಾಜಿ ಶಾಸಕನ ‘ಮರಳು’ ದೌಲತ್ತಿಗೆ ಬೆಚ್ಚಿಬಿದ್ದ ಕುಂದಾಪುರ – ಅಕ್ರಮಗಳ ವಿರುದ್ಧ ಅಜಿತ್ ಶೆಟ್ಟಿ ಕಿಡಿ..!

ಉಡುಪಿ/ಬೈಂದೂರು ಫೆ.11

ಕರಾವಳಿಯ ಶಾಂತಿಯುತ ಪರಿಸರದಲ್ಲಿ ಈಗ ಅಕ್ರಮ ಮರಳುಗಾರಿಕೆಯ ರಣ ರಕ್ಕಸ ಅಟ್ಟಹಾಸ ಶುರುವಾಗಿದೆ. ಜನ ಪ್ರತಿನಿಧಿಯಾಗಿ ರಕ್ಷಣೆ ನೀಡ ಬೇಕಾದವರೇ ಭಕ್ಷಕರಾದರೆ ಹೇಗೆ? ಎನ್ನುವುದಕ್ಕೆ ಈ ವರದಿಯೇ ಸಾಕ್ಷಿ. ಬೈಂದೂರಿನ ಮಾಜಿ ಶಾಸಕ ಸುಕುಮಾರ್ ಶೆಟ್ಟಿ ಮತ್ತು ಯುವ ಕಾಂಗ್ರೆಸ್ ರಾಜ್ಯ ಪ್ರಧಾನಕಾರ್ಯದರ್ಶಿ ಅಜಿತ್ ಶೆಟ್ಟಿ ನಡುವಿನ ಆಡಿಯೋ ಸಂಭಾಷಣೆ ಈಗ ಇಡೀ ಕರಾವಳಿಯಲ್ಲಿ ಸಂಚಲನ ಮೂಡಿಸಿದೆ.

🔴 ವರದಿಯ ಮುಖ್ಯಾಂಶಗಳು:-

📌 ಪ್ರಶ್ನೆ ಮಾಡಿದರೆ ಫಿನಿಶ್..!

ಅಕ್ರಮ ಮರಳುಗಾರಿಕೆ ವಿರುದ್ಧ ಧ್ವನಿ ಎತ್ತಿದ ಯುವಕನಿಗೆ ಮಾಜಿ ಶಾಸಕರಿಂದ ನೇರ ಧಮ್ಕಿ ಬಂದಿದೆ. “ಪ್ರಶ್ನೆ ಮಾಡಿದರೆ ಕಲಾಸ್” ಎಂಬ ಅಹಂಕಾರದ ಮಾತುಗಳು ಆಡಿಯೋದಲ್ಲಿ ಬಹಿರಂಗವಾಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

📌 ಖಾಕಿ ಮೌನಕ್ಕೆ ಆಕ್ರೋಶ:-

ಈ ಬಗ್ಗೆ ದೂರು ನೀಡಿದರೂ ಪೊಲೀಸ್ ಇಲಾಖೆ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಭಾವಿಗಳ ಒತ್ತಡಕ್ಕೆ ಮಣಿದಿದೆಯೇ ಕಾನೂನು ರಕ್ಷಕ ಪಡೆ? ಎಂಬ ಪ್ರಶ್ನೆ ಕಾಡುತ್ತಿದೆ.

📌 ಕೊಜೆಮಣ್ಣು ಗಣಿಗಾರಿಕೆ ಹಗರಣ:-

ಬೈಂದೂರು ಭಾಗದಲ್ಲಿ ಅಕ್ರಮವಾಗಿ ತೆಗೆಯುತ್ತಿರುವ ಕೊಜೆಮಣ್ಣು ನೇರವಾಗಿ ಮಾಜಿ ಶಾಸಕರ ಹಂಚಿನ ಕಾರ್ಖಾನೆಗೆ ಸರಬರಾಜು ಆಗುತ್ತಿರುವ ಗಂಭೀರ ಆರೋಪ ಕೇಳಿ ಬಂದಿದೆ.

📌 ಬೇಲಿಯೇ ಎದ್ದು ಹೊಲ ಮೇಯ್ದಂತೆ:-

ಅಧಿಕಾರ ಹೋದರೂ ಬಿಡದ ದೌಲತ್ತು! ತನ್ನ ವೈಯಕ್ತಿಕ ಲಾಭಕ್ಕಾಗಿ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಿರುವ ‘ಲೂಟಿ ವೀರ’ನ ಕರಾಮತ್ತು ಇದೀಗ ಬಯಲಾಗಿದೆ.

⚖️ ಕಾನೂನಾತ್ಮಕ ವಿವರಣೆ ಮತ್ತು ಪರಿಣಾಮಗಳು:-

ಈ ಪ್ರಕರಣದಲ್ಲಿ ನಡೆದಿರುವ ಅಕ್ರಮಗಳು ಕೇವಲ ನೈತಿಕವಾಗಿ ಮಾತ್ರವಲ್ಲ, ಕಾನೂನಾತ್ಮಕವಾಗಿಯೂ ಶಿಕ್ಷಾರ್ಹ ಅಪರಾಧಗಳಾಗಿವೆ.

ಗಣಿ ಮತ್ತು ಖನಿಜ ಕಾಯ್ದೆ (MMDR Act 1957):-

ಪರವಾನಗಿ ಇಲ್ಲದೆ ಗಣಿಗಾರಿಕೆ ಮಾಡುವುದು ಜೈಲು ಶಿಕ್ಷೆ ಮತ್ತು ದಂಡಾರ್ಹ ಅಪರಾಧ.

ಐಪಿಸಿ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) :-

ಪ್ರಾಣ ಬೆದರಿಕೆ ಹಾಕುವುದು ಗಂಭೀರ ಪ್ರಕರಣವಾಗಿದ್ದು, ಆಡಿಯೋ ಸಾಕ್ಷ್ಯವು ಮಾಜಿ ಶಾಸಕರಿಗೆ ಕಾನೂನು ಉರುಳಾಗುವುದು ಗ್ಯಾರಂಟಿ. ಅಧಿಕಾರ ದುರುಪಯೋಗ:-ವ್ಯವಸ್ಥೆಯ ಮೇಲೆ ಪ್ರಭಾವ ಬೀರಿ ಅಕ್ರಮಕ್ಕೆ ಸಾಥ್ ನೀಡುವುದು ಪ್ರಜಾಪ್ರಭುತ್ವ ವಿರೋಧಿ ಕೆಲಸ.

🗣️ ರಾಜಕೀಯ ಪ್ರಭಾವದ ದುರುಪಯೋಗ:-

ಅಜಿತ್ ಶೆಟ್ಟಿ ಕಿಡಿ ಸಾಮಾಜಿಕ ಕಾರ್ಯಕರ್ತ ಅಜಿತ್ ಶೆಟ್ಟಿ ಅವರು ಈ ಬಗ್ಗೆ ಗಂಭೀರವಾಗಿ ಪ್ರತಿಕ್ರಿಯಿಸಿದ್ದು, “ರಾಜಕೀಯ ಪ್ರಭಾವ ಬಳಸಿ ನನ್ನ ಮೇಲೆ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲಾಗುತ್ತಿದೆ. ಸತ್ಯದ ಪರವಾಗಿ ಧ್ವನಿ ಎತ್ತಿದ್ದಕ್ಕಾಗಿ ದ್ವೇಷ ಸಾಧನೆಯ ಉದ್ದೇಶದಿಂದ ಎಫ್‌.ಐ.ಆರ್ ದಾಖಲಿಸಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಆದರೆ ಈ ದಮನಕಾರಿ ನೀತಿಯ ವಿರುದ್ಧ ಹೋರಾಟ ಮುಂದುವರಿಯಲಿದೆ” ಎಂದು ಎಚ್ಚರಿಸಿದ್ದಾರೆ.

ಸಾರ್ವಜನಿಕರ ಪ್ರಶ್ನೆ:-

ಅಕ್ರಮದ ವಿರುದ್ಧ ಧ್ವನಿಯೆತ್ತಿದರೆ ಜೈಲು ಫಿಕ್ಸ್ ಎನ್ನುವ ವಾತಾವರಣ ನಿರ್ಮಾಣವಾಗಿದೆಯೇ? ಹಿರಿಯ ರಾಜಕಾರಣಿಯಿಂದಲೇ ಈ ‘ಮಣ್ಣು ತಿನ್ನುವ ಕೆಲಸ’ ನಡೆಯುತ್ತಿರುವುದು ಎಷ್ಟು ಸರಿ?

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button