ಬೇಕು ಎನ್ನುವವನೇ ಬಡವ, ಸಾಕು ಎನ್ನುವವನೇ ಶ್ರೀಮಂತ – ಶ್ರೀಮತಿ ಜಿ.ಯಶೋಧಾ ಪ್ರಕಾಶ್.

ಚಳ್ಳಕೆರೆ ಫೆ.12

ಶ್ರೀಮಾತೆ ಶಾರದಾದೇವಿಯವರು ತಿಳಿಸಿದಂತೆ ಬೇಕು ಎನ್ನುವವನೇ ಬಡವ ಸಾಕು ಎನ್ನುವವನೇ ಶ್ರೀಮಂತ ಎಂದು ಚಳ್ಳಕೆರೆಯ ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ತಿಳಿಸಿದರು.

ಶಿವ ನಗರದ ತಮ್ಮ ಜಿ.ವಿ.ಎಸ್ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ ‘ಮುನ್ನಡೆಸುವ ಮಹಾಶಕ್ತಿ” ಎಂಬ ಅಧ್ಯಾಯವನ್ನು ಓದಿ ಅರ್ಥ ವಿವರಣೆ ನೀಡಿದರು.

ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ವಿಶೇಷ ಭಜನೆ ಮತ್ತು ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಕಲಿಕಾ ತರಗತಿ ನಡೆಯಿತು.

ಕಾರ್ಯಕ್ರಮದಲ್ಲಿ ಶಿಲ್ಪಾ ಮಹೇಶ್, ಶೈಲಜಾ, ಕೃಷ್ಣವೇಣಿ , ಸಂಗೀತ, ರಶ್ಮಿ ವಸಂತ, ರಶ್ಮಿ ರಮೇಶ್, ಗೀತಾವಕ್ಷ್ಮೀ, ಭಾಗ್ಯಲಕ್ಷ್ಮೀ, ಕವಿತಾ ಗುರುಮೂರ್ತಿ, ಸೌಮ್ಯ ಪ್ರಸಾದ್, ಯತೀಶ್.ಎಂ ಸಿದ್ದಾಪುರ, ಸರಸ್ವತಿ, ಶಾರದಮ್ಮ, ಜಯಮ್ಮ ಪಾಲ್ಗೊಂಡಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button