🚨BREAKING NEWS, ಬ್ರಹ್ಮಾವರ ತಹಶೀಲ್ದಾರ ರಿಂದ – ಮಹತ್ವದ ಆದೇಶ..!🚨

ಬ್ರಹ್ಮಾವರ ಫೆ.13

ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡುವ ನಿಟ್ಟಿನಲ್ಲಿ ತಹಶೀಲ್ದಾರರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

📌 ಪ್ರಮುಖ ಮುಖ್ಯಾಂಶಗಳು:-

ದಿನಾಂಕ: ಫೆಬ್ರವರಿ 18, 2026 (ಬುಧವಾರ) ಸಮಯ: ಬೆಳಗ್ಗೆ 11:00 ಗಂಟೆಗೆ ಸ್ಥಳ: ವಾರಂಬಳ್ಳಿ ಗ್ರಾಮ ಪಂಚಾಯತ್ ಸಭಾಂಗಣ ಅಧ್ಯಕ್ಷತೆ: ಮಾನ್ಯ ತಹಶೀಲ್ದಾರರು, ಬ್ರಹ್ಮಾವರ ತಾಲೂಕು.

ಸಭೆಯ ಉದ್ದೇಶ:-

2026 ನೇ. ಸಾಲಿನ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದವರ (ST) ಹಿತರಕ್ಷಣೆ ಹಾಗೂ ಕುಂದು ಕೊರತೆಗಳ ಕುರಿತು ಸಮಾಲೋಚನೆ ನಡೆಸಲು ಈ ವಿಶೇಷ ಸಭೆಯನ್ನು ಕರೆಯಲಾಗಿದೆ. ಈ ಹಿಂದೆ ಸಮುದಾಯದವರಿಂದ ಸ್ವೀಕರಿಸಲಾದ ಅಹವಾಲುಗಳಿಗೆ ಸಂಬಂಧಪಟ್ಟ ಇಲಾಖೆಗಳು ಏನು ಕ್ರಮ ಕೈಗೊಂಡಿವೆ ಎಂಬ ಬಗ್ಗೆ ವರದಿ ಕೇಳಲಾಗುವುದು.

ಅಧಿಕಾರಿಗಳಿಗೆ ಖಡಕ್ ಸೂಚನೆ:-

ಈ ಸಭೆಗೆ ತಾಲೂಕು ಮಟ್ಟದ ಎಲ್ಲಾ ಪ್ರಮುಖ ಇಲಾಖಾ ಅಧಿಕಾರಿಗಳು (ಪೊಲೀಸ್, ಸಮಾಜ ಕಲ್ಯಾಣ, ಕೃಷಿ, ತೋಟಗಾರಿಕೆ, ಲೋಕೋಪಯೋಗಿ ಮತ್ತು ಮೆಸ್ಕಾಂ) ಕಡ್ಡಾಯವಾಗಿ ಪೂರ್ಣ ಮಾಹಿತಿಯೊಂದಿಗೆ ಖುದ್ದಾಗಿ ಹಾಜರಿರಬೇಕು ಎಂದು ತಹಶೀಲ್ದಾರರು ಆದೇಶಿಸಿದ್ದಾರೆ.

ಜನತೆಗೆ ಸುವರ್ಣಾವಕಾಶ:-

ಬ್ರಹ್ಮಾವರ ತಾಲೂಕು ವ್ಯಾಪ್ತಿಯ SC/ST ಸಮುದಾಯದವರು ತಮ್ಮ ಯಾವುದೇ ಸಮಸ್ಯೆಗಳು ಅಥವಾ ದೂರುಗಳಿದ್ದಲ್ಲಿ ಈ ಸಭೆಯ ಪ್ರಯೋಜನವನ್ನು ಪಡೆದು ಕೊಳ್ಳಬಹುದಾಗಿದೆ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button