“ನಿತ್ಯ ಸತ್ಯ”…..

ಹೊಸಬರ ಪರಿಚಯ ಹಾವ ಭಾವ ಕಲಿ
ಹಳಬರ ಅನುಭವ ಸವಿಯುತ ನಲಿ
ಪ್ರಯಾಣ ಸಮಯದಲಿ ನವ ನವಮುಖಗಳ
ಅಂದ
ಅವರಾಡುವ ಹರಟೆಯ ಮಾತೆ ಬಲು ಚಂದ
ಮನಸಿಗೆ ಹಿಡಸಿದವಳ ಮೊದಲ ಪ್ರೀತಿ
ಒಲಿದ ಜೀವ ಕೈಬಿಡದವನ ನಿಜ ನೀತಿ
ಒಳ್ಳೆಯತನವ ಬಯಸಿ ಬಂದವರಿಗೆ ಹೇಳು
ಅಪರಿಚಿತರ ಮುಖವ ಕಂಡೊಡನೆ
ಅನುಮಾನಿಸದೇ ಕೇಳು
ಜ್ಞಾನಿಗಳ ಮುಂದೆ ಧೈರ್ಯದಿಂದಲಿ
ಶುದ್ಧತೆಯಿರಲಿ
ಕೆಲವರ ಮಾತು ಕಾಯಕ ನಿಷ್ಠೆ ಇಷ್ಠ
ಹೊಗಳು ಭಟ್ಟರ ನಯ ವಿನಯತೆ
ನಂಬುವುದು ಕಷ್ಟ
ಕಲಿಯುಗದಲಿ ಮಾನವನ ಎಲ್ಲದಕ್ಕೂ
ನಟನೆಯೇ ನಿತ್ಯ
ಸಮಯ ಸಂದರ್ಭದಲ್ಲಿ ಮಂಡೆಯೂರುವುದು
ಸತ್ಯ
ಎಂಥ ಸನ್ನಿವೇಶದಲ್ಲೂ ಸ್ವಾಭಿಮಾನವ
ಬಿಡನೊಲ್ಲ ವೀರ
ಎದುರಾಳಿಗಳು ಮೋಸ ವಂಚಕರಾದರೂ
ಸೋಲು ಒಪ್ಪದಿರುವವ ನಿಜ ದೀರ
ಸಾವಿರಾರು ಹೊಸ ಮುಖಗಳು ಒಮ್ಮೆಲೇ
ಕಂಡೆ
ಎದೆಗುಂದದೆ ಸಂಯಮದಿಂದ ನಾನಿಂದೆ
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
(ದೇಶಂಸು)ದೇವರ ಹಿಪ್ಪರಗಿ

