🚨 ಬ್ರೇಕಿಂಗ್ ನ್ಯೂಸ್, ಲಕ್ಷ್ಮೀ ಎಕ್ಸ್‌ಪ್ರೆಸ್ ಬಸ್ ಮಾಲೀಕ ಹರೀಶ್ ಶೆಟ್ಟಿ ಗೂಂಡಾಗಿರಿ..! ಸಾರ್ವಜನಿಕರು – ಹಾಗೂ ಮಾಧ್ಯಮದವರ ಮೇಲೆ ದಬ್ಬಾಳಿಕೆ.🚨

ಬ್ರಹ್ಮಾವರ/ಮಂದಾರ್ತಿ ಫೆ.14

ಮಂದರ್ತಿ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭಕ್ತರು ಹಾಗೂ ಸಾರ್ವಜನಿಕರಿಗೆ ಲಕ್ಷ್ಮೀ ಎಕ್ಸ್‌ ಪ್ರೆಸ್ ಬಸ್ ಮಾಲೀಕ ಹರೀಶ್ ಶೆಟ್ಟಿ ಎಂಬಾತ ಭಾರಿ ಕಿರುಕುಳ ನೀಡುತ್ತಿರುವ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಠಾಣಾಧಿಕಾರಿಗಳ ಎದುರೇ ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳ ಮೇಲೆ ಈತ ದಬ್ಬಾಳಿಕೆ ನಡೆಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

📌 ಹರೀಶ್ ಶೆಟ್ಟಿಯ ದೌರ್ಜನ್ಯದ ವಿವರ:-

ದೂರದ ಊರುಗಳಿಂದ ಬಂದ ಸಾರ್ವಜನಿಕರು ಹಾಗೂ ರಸ್ತೆ ಬದಿಯ ಸಣ್ಣ ವ್ಯಾಪಾರಸ್ಥರಿಗೆ ಹರೀಶ್ ಶೆಟ್ಟಿ ಮತ್ತು ಆತನ ಸಹಚರರು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ರಸ್ತೆಯಲ್ಲಿ ನಿಂತವರನ್ನು ಪ್ರಶ್ನಿಸುವ ಅಧಿಕಾರ ಪೊಲೀಸರಿಗಿದ್ದರೂ, ತಾನೇ ಒಬ್ಬ ದೊಡ್ಡ ಅಧಿಕಾರಿ ಎಂಬಂತೆ ವರ್ತಿಸುತ್ತಿರುವ ಈತ, ಸಾರ್ವಜನಿಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ, ಸಾರ್ವಜನಿಕರ ಮೇಲೆ ಹಲ್ಲೆ ಮಾಡಲು ಪ್ರಚೋದನೆ ನೀಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಕಂಡು ಬಂದಿದೆ.

📸 ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನ – ಸಿಸಿಟಿವಿಯಲ್ಲಿ ಸೆರೆ:-

ಘಟನೆಯನ್ನು ವರದಿ ಮಾಡಲು ಹೋದ ಮಾಧ್ಯಮ ಮಿತ್ರರ ವಾಹನಗಳನ್ನು ತಳ್ಳಾಡಿ, ವಿಡಿಯೋ ಚಿತ್ರೀಕರಣ ಮಾಡುತ್ತಿದ್ದವರ ಮೇಲೆ ಈತ ದುರ್ವರ್ತನೆ ತೋರಿದ್ದಾನೆ. ಈ ಎಲ್ಲಾ ದೃಶ್ಯಗಳು ಮಂದರ್ತಿ ದೇವಸ್ಥಾನದ ಸರ್ಕಲ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ. ಬ್ರಹ್ಮಾವರ ಪಿಎಸ್‌ಐ ಅವರ ಎದುರಲ್ಲೇ ಈ ಕಿರಿಕಿರಿ ಮುಂದುವರಿದಿರುವುದು ಭಕ್ತರಲ್ಲಿ ಬೇಸರ ಮೂಡಿಸಿದೆ.

🚫 ಆರ್.ಟಿ.ಓ ನಿಯಮಗಳ ಗಾಳಿಗೆ – ಗಂಭೀರ ಆರೋಪ:-

ಅಕ್ರಮ ಸಂಚಾರ:-

ಲಕ್ಷ್ಮೀ ಎಕ್ಸ್‌ಪ್ರೆಸ್ ಬಸ್‌ಗಳು ಆರ್‌ಟಿಓ ನೀಡಿದ ಸಮಯವನ್ನು ಮೀರಿ ಸಂಚರಿಸುತ್ತಿದ್ದು, ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತಿವೆ.

ದಾಖಲೆ ರಹಿತ ವಾಹನಗಳು:-

ಕೆಲವು ಬಸ್‌ಗಳು ಆರ್‌ಟಿಓದಲ್ಲಿ ನೋಂದಣಿಯೇ ಆಗಿಲ್ಲ ಎಂಬ ಮಾಹಿತಿ ಕೇಳಿ ಬಂದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಸರ್ಕಾರಿ ಬಸ್‌ಗಳಿಗೆ ಅಡ್ಡಿ:-

ಸರ್ಕಾರಿ ಬಸ್‌ಗಳಿಗೆ ಜನರನ್ನು ಹತ್ತದಂತೆ ತಡೆಯೊಡ್ಡಿ, ತನ್ನ ಖಾಸಗಿ ಕಾರನ್ನು ರಸ್ತೆಗೆ ಅಡ್ಡವಿಟ್ಟು ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದಾನೆ ಎಂದು ಜನರು ದೂರಿದ್ದಾರೆ.

⚖️ ಹೊಸ ಕಾನೂನು ಬಿಎನ್ಎಸ್ಎಸ್ (BNSS) ಅಡಿಯಲ್ಲಿ ಕ್ರಮಗಳು:-

ಈತನ ಉದ್ಧಟತನದ ಮೇಲೆ ಹೊಸ ಕಾನೂನು ಸಂಹಿತೆಗಳ ಅಡಿಯಲ್ಲಿ ಕಠಿಣ ಕ್ರಮ ಜರುಗಿಸಲು ಅವಕಾಶವಿದೆ:

BNS Section 126 & 296:-

ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸುವುದು ಮತ್ತು ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಬೈಗುಳಗಳಿಂದ ನಿಂದಿಸುವುದು.

BNS Section 221:-

ಕರ್ತವ್ಯ ನಿರತ ಮಾಧ್ಯಮದವರಿಗೆ ಅಡ್ಡಿಪಡಿಸುವುದು ಮತ್ತು ಬೆದರಿಕೆ ಹಾಕುವುದು.

BNS Section 204:-

ಸಾರ್ವಜನಿಕ ಅಧಿಕಾರಿಯ ಸೋಗು ಹಾಕಿ ದಬ್ಬಾಳಿಕೆ ನಡೆಸುವುದು.

BNSS Section 126:-

ಇಂತಹ ವ್ಯಕ್ತಿಯಿಂದ ಶಾಂತಿ ಭಂಗ ಉಂಟಾಗುತ್ತಿರುವುದರಿಂದ ಪೊಲೀಸರು ಈತನನ್ನು ವಶಕ್ಕೆ ಪಡೆದು ಮುಚ್ಚಳಿಕೆ ಬರೆಸಿ ಕೊಳ್ಳಬಹುದು.

📢 ಸಾರ್ವಜನಿಕರ ಆಗ್ರಹ:-

ಪ್ರತಿ ವರ್ಷವೂ ಹರೀಶ್ ಶೆಟ್ಟಿಯ ಈ ಕಿರುಕುಳ ಮಿತಿ ಮೀರುತ್ತಿದೆ. ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಕ್ಷಣವೇ ಮಧ್ಯ ಪ್ರವೇಶಿಸಿ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಈತನ ಮೇಲೆ ಕಾನೂನು ಕ್ರಮ ಜರುಗಿಸ ಬೇಕು ಹಾಗೂ ಈತನ ಬಸ್‌ಗಳ ಪರವಾನಗಿಯನ್ನು ರದ್ದು ಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button