“ಶ್ರೀಸದ್ಗುರು ಸಂತ ಸೇವಾಲಾಲ್ ಮಹಾರಾಜರು ಅಜ್ಞಾನ ಅಳಸಿ ಸುಜ್ಞಾನ ಅರಳಿಸಿದ ಅರಸ”…..

ವಿಶ್ವ ಬಂಜಾರ ಕುಲ ತಿಲಕ

ನ್ಯಾಮತಿಯಲಿ ಜನಸಿದ ಜ್ಞಾನ ಜ್ಯೋತಿಯು

ಲಂಬಾಣಿಯ ಮಹಾನ್ ಗುರು

ಆಧ್ಯಾತ್ಮಿಕ ದೇವ ಸ್ವರೂಪನು

ಸತ್ಯ ಅಹಿಂಸೆ ತ್ಯಾಗ ಮಹತ್ವ ಸಾರಿದರು

ಶುದ್ಧತೆ ಸರಳತೆ ಶಿಸ್ತು ಅರಳಿಸಿದ ಅರಿವಿನ

ಪರಮ ಗುರು

ಮೂಢನಂಬಿಕೆ ತಮವ ಅಳಸಿ ನೈಜತೆಯ

ರೂಢಿಸಿದ ಮಹಾನ್ ಸಂತರು

ವ್ಯಸನ ಮುಕ್ತ ಜೀವನ ಕಲಿಸಿದ ಮಹಾನ್

ಯೋಗಿವರ್ಯರು

ದೈವಿಕ ಶಕ್ತಿ ಪವಾಡ ಮಹಾ ಪುರುಷರು

ಸಕಲ ಭಾಗ್ಯ ಕರುಣಿಪ ಸಾಕ್ಷಾತ್ ದೇವ ಸಂಭೂತರು

ಜಗದ ಬಂಜಾರ ಜನಮನದ ಕರುಣಾಕರ

ಭಾಗ್ಯದಾತರು

ಸಂತ ಸೇವಾಲಾಲ್ ಜನಸಿದ ದಿನ ಅಮೃತ

ಘಳಿಗೆಯು

ಸರ್ವ ಮಾನವ ಕುಲಜರಿಗೆ ಶುಭ ಹರುಷ

ತರಲಿ

ಸರ್ವಜನ ಹಿತ ಸಂತ ಸೇವಾಲಾಲ್

ಮಹಾರಾಜರ ದೇವರ ಶುಭಾಶೀರ್ವಾದವು

ಸರ್ವಜನರಿಗೆ ಸಂತ ಸೇವಾಲಾಲ್ ಗುರು

ಕರುಣಿಸಲಿ ಅನವರತವು

ಭಕ್ತಿ ಪೂರ್ವಕ ತನು ಮನದಿ ಶಿರಬಾಗಿ

ನಮಿಸುವೆ ಪುಷ್ಪವನಿರಸಿ

ಸಂತ ಸೇವಾಲಾಲ್ ಮಹಾರಾಜರು ಜನಸಿ

ಅಮೃತ ಘಳಿಗೆಯು

ಶ್ರೀಸದ್ಗುರು ಸಂತ ಸೇವಾಲಾಲ್

ಮಹಾರಾಜರು ಅಜ್ಞಾನ ಅಳಸಿ ಸುಜ್ಞಾನ

ಅರಳಿಸಿದ ಅರಸ

ಶುಭ ಹರುಷ ತರಲಿ ಸರ್ವರಿಗೂ.

ಶ್ರೀಸುರೇಶ ಶಂಕ್ರೆಪ್ಪ ಅಂಗಡಿ

ದೇಶಂಸು ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button