ಐದನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಪಿ.ಎಸ್ ಸಜ್ಜನ ಕಾಲೇಜು ವಿದ್ಯಾರ್ಥಿನಿಯರ ಉತ್ತಮ ಸಾಧನೆ.
ಬೇವೂರು ಫೆ.15

ಬಾಗಲಕೋಟೆ ವಿಶ್ವವಿದ್ಯಾನಿಲಯದ ಇತ್ತೀಚಿಗೆ ನಡೆದ ಐದನೇ ಸೆಮಿಸ್ಟರನ ಪರೀಕ್ಷಾ ಫಲಿತಾಂಶ ಬರಲಾಗಿದ್ದು ಬೇವೂರಿನ ಆದರ್ಶ ವಿದ್ಯಾ ವರ್ಧಕ ಸಂಘದ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಗೈದಿದ್ದಾರೆ. ೯೬.೧೪% ಅಂಕಗಳನ್ನು ಪಡೆದು ವಿಜಯಲಕ್ಷ್ಮೀ. ಯ ಬಂಡಿವಡ್ಡರ ಕಾಲೇಜಿಗೆ ಪ್ರಥಮ, ೯೫.೮೫% ಅಂಕಗಳನ್ನು ಪಡೆದು ಪವಿತ್ರಾ.ಮ. ಮಾಗನೂರ ದ್ವಿತೀಯ, ೯೩.೪೨% ಅಂಕಗಳನ್ನು ಪಡೆದು ಫಾತಿಮಾ ಅ.ನಧಾಪ ತೃತೀಯ ಸ್ಥಾನ ಪಡೆದು ಕೊಂಡಿದ್ದಾರೆ. ೧೦೦ ಕ್ಕೆ ೧೦೦ ಅಂಕಗಳ ಪಡೆದ ವಿದ್ಯಾರ್ಥಿನಿಯರು ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯರಾದ ವಿಜಯಲಕ್ಷ್ಮೀ ಯ. ಬಂಡಿವಡ್ಡರ. ಅಭಿವೃದ್ಧಿ ಅರ್ಥಶಾಸ್ತ್ರ ವಿಷಯದಲ್ಲಿ ೧೦೦ ಕ್ಕೆ ೧೦೦, ಪವಿತ್ರಾ.ಮ ಮಾಗನೂರ ಇದೇ ವಿಷಯದಲ್ಲಿ ೧೦೦ ಕ್ಕೆ ೧೦೦ ಹಾಗೂ ಫಾತಿಮಾ.ಅ ನಧಾಪ ೧೦೦ ಕ್ಕೆ ೧೦೦ ಅಂಕಗಳನ್ನು ಪಡೆದು ಕೊಂಡಿದ್ದಾರೆ. ವಿದ್ಯಾರ್ಥಿನಿ ಜ್ಯೋತಿ.ಸಿ ಗೌಡರ ಅಭಿವೃದ್ಧಿ ಅರ್ಥಶಾಸ್ತ್ರ ಹಾಗೂ ಭಾರತೀಯ ಬ್ಯಾಂಕೋದ್ಯಮ ಮತ್ತು ಹಣಕಾಸು ಎರಡು ವಿಷಯಗಳಲ್ಲಿ ೧೦೦ ಕ್ಕೆ ೧೦೦ ಅಂಕಗಳನ್ನು ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಆದರ್ಶವಿದ್ಯಾವರ್ಧಕ ಸಂಘದ ಅಧ್ಯಕ್ಷ ನ್ಯಾಯವಾದಿ ಜಿ.ಜಿ ಮಾಗನೂರ ಆಡಳಿತ ಮಂಡಳಿಯ ಸದಸ್ಯರು ಬಾಗಲಕೋಟೆ ವಿಶ್ವವಿದ್ಯಾಲಯದ ಸಿಂಡಿಕೇಟ ಸದಸ್ಯರು, ಕಾಲೇಜಿನ ಪ್ರಾಚಾರ್ಯರಾದ ಡಾ, ಜಗದೀಶ.ಗು ಭೈರಮಟ್ಟಿ ಅರ್ಥಶಾಸ್ತ ವಿಭಾಗದ ಉಪನ್ಯಾಸಕರಾದ ಶ್ರೀ ಎಸ್.ಎಸ್ ಆದಾಪೂರ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗ ವಿದ್ಯಾರ್ಥಿನಿಯರ ಸಾಧನೆಗ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

