ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ತಾಲೂಕ ಅಧ್ಯಕ್ಷರಾಗಿ – ಸಿದ್ದಲಿಂಗ ಸುಬೇದಾರ ಆಯ್ಕೆ.

ಆಲಮೇಲ ಫೆ.15

ತಾಲೂಕಿನ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ನೂತನ ತಾಲೂಕು ಅಧ್ಯಕ್ಷರಾಗಿ ಸಿದ್ಧಲಿಂಗ ಸುಬೇದಾರ ಅವಿರೋಧ ಆಯ್ಕೆ.

ಶನಿವಾರ ಪಟ್ಟಣ್ಣದ ಅಳ್ಳೊಳ್ಳಿ ಮಠದಲ್ಲಿ ಆಲಮೇಲ ತಾಲೂಕಿನ ಬಣಜಿಗ ಸಮಾಜದ ಸಭೆಯಲ್ಲಿ ರಾಜ್ಯ ಮತ್ತು ಜಿಲ್ಲಾ ಪದಾದಿಕಾರಿಗಳ ಸಮ್ಮುಖದಲ್ಲಿ ತಾಲೂಕು ಘಟಕದ ಅಧ್ಯಕ್ಷರ ಆಯ್ಕೆ ಜರುಗಿತು.

ನೂತನ ತಾಲೂಕ ಅಧ್ಯಕ್ಷರಾಗಿ ಸಿದ್ದಲಿಂಗ ಸುಬೇದಾರ, ಗೌರವ ಅಧ್ಯಕ್ಷರಾಗಿ ದೇವಣಗಾಂವ ಗ್ರಾಮದ ಶರಣ್ಣಪ್ಪ ಗುಬ್ಬೆವಾಡ, ಉಪಾಧ್ಯಕ್ಷರಾಗಿ ಗುರುಸಂಗ ಕತ್ತಿ, ತಾಲೂಕು ಯುವ ಘಟಕದ ಅದ್ಯಕ್ಷರಾಗಿ ವಿಶ್ವನಾಥ ಕೊರಹಳ್ಳಿ ಇವರನ್ನು ಅವಿರೋದ ಆಯ್ಕೆಗೊಂಡಿದ್ದಾರೆ. ಹಾಗೂ ಜಿಲ್ಲಾ ಉಪಾಧ್ಯಕ್ಷರಗಿ ರವಿಂದ್ರ ವಾರದ ಅವರನ್ನು ರಾಜ್ಯ ಮತ್ತು ಜಿಲ್ಲಾ ಬಣಜಿಗ ಸಮಾಜದ ಪದಾಧಿಕಾರಿಗಳು ಆಯ್ಕೆ ಮಾಡಿದ್ದಾರೆ.

ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ‌ ಬಿದರಿ, ಜಿಲ್ಲಾ ಪದಾಧಿಕಾರಿಗಳಾದ ಮುತ್ತು ಕಿಣಗಿ, ರಮೇಶ ಸಾಲಕ್ಕಿ, ತಾಲೂಕಿನ ಹಿರಿಯರಾದ ಶಿವುಕುಮಾರ ಗುಂದಗಿ, ಭಸವರಾಜ ಧನಶ್ರೀ, ತಾರಾಪೂರದ ಮಲ್ಲಿಕಾರ್ಜುನ ಜೋಗೂರು, ಬಸವರಾಜ ಗುಣಾರಿ, ನೀಲಕಂಠ ಜೋಗೂರ, ವಿಶ್ವನಾಥ ಮಹಾಜನ, ದೇವಣಗಾಂವ ಗ್ರಾಮದ ಶಿಕ್ಷಕ ಶಿವಾನಂದ ಕಲಬುರಗಿ, ರಮೇಶ ಸೊಡ್ಡಿ, ಡಾ. ಪ್ರಮೋದ ಮಹಾಜನ, ಶಿವಶರಣ ಗುಂದಗಿ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮದ ಬಣಜಿಕ ಸಮಾಜದವರು ಸಭೆಯಲ್ಲಿ ಪಾಲ್ಕೊಂಡಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button