ನಾಡು, ನುಡಿಗೆ ಕ.ಸಾ.ಪ ಕಾರ್ಯ ಶ್ಲಾಘನೀಯ – ಅಂಜುನಾಥ.ಎಸ್ ನಾಯ್ಕಲ್ ಬಣ್ಣನೆ.
ತರಕಸಪೇಠ ಫೆ.15

ಚಿತ್ತಾಪುರ ತಾಲೂಕಿನ ತರಕಸಪೇಠ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಶಾಲಾ ಅವಧಿ ಮುಗಿದ ನಂತರ ನಾಲವಾರ ವಲಯ ಘಟಕ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಬದುಕು ಬರಹ ಕುರಿತು ವಿಶೇಷ ಕಾರ್ಯಕ್ರಮದಲ್ಲಿ ತಾಯಿ ಕನ್ನಡಾಂಭೆ ಭಾವಚಿತ್ರಕ್ಕೆ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರ ಕ್ಕೆ ವಿಶೇಷವಾಗಿ ಪೂಜೆ ಮತ್ತು ಪುಷ್ಪ ನಮನ ಸಲ್ಲಿಸಲಾಯಿತು.
ವಿದ್ಯಾರ್ಥಿಗಳಲ್ಲಿ ಕನ್ನಡ ಆಸಕ್ತಿ ಮೂಡಿಸಲು ಪ್ರಬಂಧ, ಭಾಷಣ, ಮತ್ತು ಕವಿತೆ ವಾಚನ ಸ್ಪರ್ಧೆಗಳನ್ನು . ರಂಗೋಲಿ ಸ್ಪರ್ಧೆ ಏರ್ಪಟ್ಟಿತು.ನಾಲವಾರ ವಲಯ ಘಟಕದ ಕಸಾಪ ಅಧ್ಯಕ್ಷರಾದ ಅಂಜುನಾಥ ಎಸ್ ನಾಯ್ಕಲ್ ಇವರು ತಮ್ಮ ಪ್ರಾಸ್ತಾವಿಕ ಭಾಷಣ ಮಾಡುವ ಮೂಲಕ ಕನ್ನಡ ಸಾಹಿತ್ಯ ಬೆಳೆದು ಬಂದ ರೀತಿ ಕುರಿತು ತಿಳಿಸಿದರು ಮಕ್ಕಳಿಗೆ ಸಾಹಿತ್ಯ ಕೌಶಲ್ಯ ಬರೆಯುವ ಅಭ್ಯಾಸ ವನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು.

ತರಕಸಪೇಠ ಗ್ರಾಮ ಮಟ್ಟದಲ್ಲಿ ಕನ್ನಡದ ಚಟುವಟಿಕೆಗಳನ್ನು ಆಯೋಜಿಸಲಾದ ಆಯಾ ತಾಲ್ಲೂಕು ಮತ್ತು ಹೋಬಳಿ ಘಟಕಗಳ ಅಡಿಯಲ್ಲಿ ಕಾರ್ಯಕಾರಿ ಸಮಿತಿಗಳನ್ನು ರಚಿಸಲಾಗುತ್ತದೆ. ಇದು ಹಳ್ಳಿಗಳಲ್ಲಿ ಸಾಹಿತ್ಯಿಕ ಅಭಿರುಚಿ ಮೂಡಿಸಲು ಮತ್ತು ಸ್ಥಳೀಯ ಪ್ರತಿಭೆಗಳನ್ನು ಗುರುತಿಸಲು ಸಹಕಾರಿಯಾಗಿದೆ ಎಂದರು.
ನಾಡು, ನುಡಿಗೆ ಕಸಾಪ ಕಾರ್ಯ ಶ್ಲಾಘನೀಯ ರಾಷ್ಟ್ರಕವಿ ಕುವೆಂಪು (ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ, 1904-1994) ಕನ್ನಡ ಸಾಹಿತ್ಯದ ‘ಯುಗದ ಕವಿ, ಜಗದ ಕವಿ’ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು. ಮಲೆನಾಡಿನ ಪ್ರಕೃತಿಯ ಮಡಿಲಲ್ಲಿ ಬೆಳೆದ ಇವರು, ‘ವಿಶ್ವಮಾನವ’ ಸಂದೇಶ, ಮಂತ್ರ ಮಾಂಗಲ್ಯ (ಸರಳ ವಿವಾಹ) ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದರು. ಶ್ರೀರಾಮಾಯಣ ದರ್ಶನಂ, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಇವರ ಪ್ರಮುಖ ಕೃತಿಗಳು. ಕುವೆಂಪು ಅವರ ಬದುಕು (ಜೀವನ) ಜನನ ಡಿಸೆಂಬರ್ 29, 1904, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ.ಶಿಕ್ಷಣ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡದಲ್ಲಿ ಎಂ.ಎ. ಪದವಿ.ವೃತ್ತಿ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ,ನಂತರ ಉಪಕುಲಪತಿಯಾಗಿ (1956-1960) ನಿವೃತ್ತರಾದರು.ಕುಟುಂಬ: ಪತ್ನಿ ಹೇಮಾವತಿ.ಮಕ್ಕಳು ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದು ಕಲಾ, ತಾರಿಣಿ ನಿಧನ ನವೆಂಬರ್ 11, 1994. ಪ್ರಾರ್ಥಮಿಕ ಶಾಲಾ ಮುಖ್ಯ ಗುರುಗಳು ಸೋಮಶೇಖರ್ ಹೂಗಾರ. ತರಕಸಪೇಠ ಅವರು ಅಧ್ಯಕ್ಷತೆ ವಹಿಸಿದ್ದರು.

ಇದೇ ಸೈಯದ್ ಹುಸೇನ್ ಸಹ ಶಿಕ್ಷಕರು. ಮಂಜುನಾಥ ಪಾಟೀಲ್ ಸಹ ಶಿಕ್ಷಕರು ರಾಜೇಂದ್ರ ಗುತ್ತೆದಾರ ಸಹ ಶಿಕ್ಷಕರು. ಸ್ವಾಗತ ಭಾಷಣ -ಮಧುಶ್ರೀ ಮೇಡಂ. ವಂಧನಾರ್ಪಣೆ ಮಲ್ಲಣ್ಣ ಶಿಕ್ಷಕರು. ನಿರೂಪಣೆ- ಶಶಿಕುಮಾರ ವಿಶ್ವಕರ್ಮ. ರಾಜ್ಮಾ ಮೇಡಂ. ಶಾಂತಯ್ಯ ಗುತ್ತೆದಾರ, ರಾಯಪ್ಪ ಪೂಜಾರಿ . ಎಸ್.ಡಿ ಎಮ್ ಸಿ ಅಧ್ಯಕ್ಷರು ರಶೀದ್ ಪಟೇಲ್. ಮಲ್ಲಿಕಾರ್ಜುನ ತಳವಾರ ಸಹ ಸಂಘಟನಾ ಕಾರ್ಯದರ್ಶಿ. ಸಿದ್ದರಾಜ ಮಳಬಾ ನಾಲವಾರ ವಲಯ ಘಟಕ ಕಸಾಪ ಕೋಶಾಧ್ಯಕ್ಷ. ಅರುಣ ಸುಣಗಾರ ನಾಲವಾರ ವಲಯ ಘಟಕ ಕಸಾಪ ಕಾರ್ಯದರ್ಶಿ ಅವರು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಸೇವೆಯಲ್ಲಿ ಶಿಕ್ಷಕರ ಪಾತ್ರ ಹಿರಿದು. ಜೊತೆಗೆ ರಾಜ್ಯದ ಮೂಲೆಮೂಲೆಗಳಲ್ಲೂ ಶಿಕ್ಷಣ ಸೇವೆಯ ಜೊತೆಗೆ ಕನ್ನಡನಾಡಿನ ಸೇವೆಯನ್ನು ಕೂಡ ಸಾಹಿತ್ಯ ಪರಿಷತ್ತಿನ ಮೂಲಕ ಮಾಡುತ್ತಿರುವುದು ಅಭಿನಂದನಾರ್ಹ ಎಂದರು. ಹಾಗೂ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ನಾಲವಾರ ವಲಯ ಘಟಕ ಕಸಾಪ ಸಂಘಟನಾ ಕಾರ್ಯದರ್ಶಿ. ಮಹಿಳಾ ಪ್ರತಿನಿಧಿ ಶಿವಲೀಲಾ ತುನ್ನೂರು. ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು.
ಈ ಸಂಧರ್ಭದಲ್ಲಿ ಶಾಲಾ ಮಕ್ಕಳು ಪ್ರಬಂಧ ಸ್ಪರ್ಧೆ. ಮತ್ತು ರಂಗೋಲಿ ಸ್ಪರ್ಧೆ. ಭಾಷಣ ಸ್ಪರ್ಧೆ. ಹಾಗೂ ಕುವೆಂಪು ಅವರ ಕವಿತೆ ವಾಚನ ಮಾಡಿದರು. ಮತ್ತು ರಾಷ್ಟ್ರಕವಿ ಕುವೆಂಪು ಅವರ ಬದುಕು ಬರಹ ಬಗ್ಗೆ ವಿಶೇಷ ಉಪನ್ಯಾಸ ನಾಗೇಶ ಶಿಕ್ಷಕರು ವಿಶ್ವಕರ್ಮ ಅವರು ಶಾಲಾ ಮಕ್ಕಳಿಗೆ ಉಪನ್ಯಾಸ ಮಾಡುವುದರ ಜೊತೆಗೆ ಮಾತನಾಡಿ, ಯಾವುದು ಕನ್ನಡ ಜ್ಞಾನವನ್ನು ಯುವ ಜನತೆಯಲ್ಲಿ ಹೆಚ್ಚಿಸುವ ದೃಷ್ಟಿಯಿಂದ ನಾಡು-ನುಡಿಗಾಗಿ ಎಲ್ಲರನ್ನು ಕೂಡ ಒಟ್ಟಾಗಿ ಸೇರಿಸುವ ಪ್ರಯತ್ನವನ್ನ ಈ ನಾಲವಾರ ವಲಯ ಘಟಕ ಕನ್ನಡ ಸಾಹಿತ್ಯ ಪರಿಷತ್ ಪ್ರಾರಂಭಿಸಿದೆ ಎಂದರು.

ಇದೇ ಸಂಧರ್ಭದಲ್ಲಿ ಶಾಲಾ ಮಕ್ಕಳಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮತ್ತು ದ್ವಿತೀಯ ಸ್ಥಾನ ಪಡೆದ ಮಕ್ಕಳಿಗೆ ನಾಲವಾರ ವಲಯ ಘಟಕ ಕಸಾಪ ವತಿಯಿಂದ ಪ್ರಮಾಣ ಪತ್ರ ಮತ್ತು ಪುಸ್ತಕ. ಪೆನ್ನುಗಳು. ನೀಡಲಾಯಿತು ಎಂದು ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ನಾಲವಾರ ವಲಯ ಘಟಕ ಕನ್ನಡ ಸಾಹಿತ್ಯ ಪರಿಷತ್ತು ಸಂಘಟನಾ ಕಾರ್ಯದರ್ಶಿ ಅವರು ತಿಳಿಸಿದರು.
