ದಿನಾಂಕ 22 ರಂದು ಪವಾಡ ಪುರುಷ ಶ್ರೀ ಹುಚ್ಚಲಿಂಗೇಶ್ವರ – ಜಾತ್ರಾ ಮಹೋತ್ಸವ ಜರುಗುವುದು.

ಉಡಚಣ ಫೆ.16

ಅಫಜಲಪುರ ಕಲ್ಯಾಣ ಕರ್ನಾಟಕದ ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಭೀಮಾತೀರದಲ್ಲಿರುವ ಉಡಚಣದ ಪವಾಡ ಪುರುಷ, ಮಹಾ ಮಹಿಮ, ಭಕ್ತರ ಕಾಮಧೇನು, ಶ್ರೀ ಹುಚ್ಚಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ದಿನಾಂಕ 22 ರಂದು ರವಿವಾರ ಮಧ್ಯಾಹ್ನ ಒಂದು ಗಂಟೆಗೆ ಭಂಡಾರಿ ದಂಪತಿಗಳು ಅಗ್ನಿ ಪ್ರವೇಶ ಮಾಡುವರು. ಅಪಾರ ಸಂಖ್ಯೆಯ ಭಕ್ತ ಸಮೂಹದ ಮಧ್ಯೆ ಅಗ್ನಿ ಪ್ರವೇಶ ಕಾರ್ಯಕ್ರಮ ಜರುಗಲಿದೆ.

ಜನವರಿ 19 ರಿಂದ ಫೆಬ್ರುವರಿ 21 ರ ವರೆಗೆ ಪ್ರತಿ ದಿವಸ ಶ್ರೀ ಹುಚ್ಚಲಿಂಗೇಶ್ವರ ಕರ್ತೃ ಗದ್ದುಗೆ ವಿಶೇಷ ಪೂಜೆ ಜರುಗಲಿದೆ. ದಿನಾಂಕ್ 17 ರಂದು ಮಂಗಳವಾರ ಅಮಾವಾಸ್ಯೆಯ ದಿವಸ ಗ್ರಾಮದಲ್ಲಿ ಶ್ರೀ ಹುಚ್ಚಲಿಂಗೇಶ್ವರ ಪಲ್ಲಕ್ಕಿ ಮಹೋತ್ಸವ ಜರುಗಲಿದೆ.

ಶನಿವಾರ ದಿನಾಂಕ 21 ರಂದು ರಾತ್ರಿ 12 ಗಂಟೆಗೆ ಬನ್ನಿ ಕೊರಡು ರಾಸಿಗೆ ಶರಣು ಈರಣ್ಣ ನೀಲಂಗೆ ಅಗ್ನಿ ಸ್ಪರ್ಶ ಮಾಡುವರು, ರವಿವಾರ ದಿನಾಂಕ 22 ರಂದು ಶ್ರೀ ಹುಚ್ಚ ಲಿಂಗೇಶ್ವರ ಪಲ್ಲಕ್ಕಿಯೊಂದಿಗೆ ಗಂಗೆ ಸಿತ್ತಾಳ ಪೂಜೆ ಮಧ್ಯಾಹ್ನ ಭಂಡಾರಿ ದಂಪತಿಗಳಿಂದ ಅಗ್ನಿ ಪ್ರವೇಶ ಕಾರ್ಯಕ್ರಮ ಜರುಗಲಿದೆ. ನಂತರ ಬೃಹತ್ ಪ್ರಮಾಣದಲ್ಲಿ ದನಗಳ ಜಾತ್ರೆ ಜರುಗಲಿದೆ.

ಶ್ರೀ ಹುಚ್ಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ವತಿಯಿಂದ ದನಗಳ ಜಾತ್ರೆಯಲ್ಲಿ ನೀರಿನ ವ್ಯವಸ್ಥೆ ಮಾಡಲಾಗುವುದು, ದನಗಳ ಉಚಿತ ಆರೋಗ್ಯ ತಪಾಸಣಾ ಶಿಬಿರ, ಹಾಗೂ ದಾಸೋಹ ಸೇವೆ ಜರುಗಲಿದೆ ಎಂದು ಕಮಿಟಿಯ ಅಧ್ಯಕ್ಷರಾದ ಸಿದ್ದಾರ್ಥ್ ಮೈಂದರಗಿ, ಉಪಾಧ್ಯಕ್ಷರಾದ ಗಡ್ಡದೆಪ್ಪ ಕಡ್ಲಾಜಿ, ಕಾರ್ಯದರ್ಶಿಗಳಾದ ಖಾಜಪ್ಪ ನಾಲ್ಕು ಮನ, ಖಜಾಂಚಿ ವಿಠಲ್ ಕಡ್ಲಾಜಿ, ಸದಸ್ಯರಾದ ಚಂದ್ರಶೇಖರ್ ಇಬ್ರಾಹಿಂಪುರ್, ಶರಣು ದೊಡ್ಡಮನಿ, ಖಾಜಪ್ಪ ಸಿಂಗೆ, ಸಂಗಪ್ಪ ಕೋಟೆ, ಶಂಕರಲಿಂಗ್ ಕಡ್ಲಾಜಿ, ಪಾರ್ವತಿ ಮನೋಹರ್, ಸೇವಂತಿ ಸಿದ್ದಲಿಂಗ ತಿಳಿಸಿದ್ದಾರೆ.

ಶ್ರೀ ಹುಚ್ಚಲಿಂಗೇಶ್ವರ ಜೀರ್ಣೋದ್ಧಾರ ನಿಮಿತ್ಯ ಭಕ್ತರು ವಿಶೇಷ ದೇಣಿಗೆ ಸಲ್ಲಿಸಿ ದೇವರ ಕೃಪೆಗೆ ಪಾತ್ರ ರಾಗಬೇಕೆಂದು ಜಾತ್ರಾ ಕಮಿಟಿಯವರು ವಿನಂತಿಸಿದ್ದಾರೆ. ಜಾತ್ರೆಗೆ ಆಗಮಿಸುವ ಭಕ್ತರಿಗಾಗಿ ಅಫಜಲಪುರ, ಇಂಡಿ, ಅಕ್ಕಲಕೋಟ್ ಮುಂತಾದ ಸ್ಥಳಗಳಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.

ಈ ಜಾತ್ರಾ ಕಾರ್ಯಕ್ರಮದಲ್ಲಿ ಸಮಸ್ತ ಭಕ್ತ ವೃಂದ ದವರು ಭಾಗವಹಿಸಿ ಶ್ರೀ ಹುಚ್ಚ ಲಿಂಗೇಶ್ವರರ ಕೃಪೆಗೆ ಪಾತ್ರ ರಾಗಬೇಕೆಂದು ಶ್ರೀ ಹುಚ್ಚ ಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಕಮಿಟಿ ಹಾಗೂ ಸಮಸ್ತ ಉಡಚಣ ಗ್ರಾಮಸ್ಥರು ವಿನಂತಿಸಿದ್ದಾರೆ.

ಶ್ರೀ ಹುಚ್ಚಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಹುಚ್ಚಲಿಂಗೇಶ್ವರ ಕಲಾ ಪೋಷಿತ ನಾಟ್ಯ ಸಂಘದ ವರಿಂದ ಮಗ ಹೋದರು ಮಾಂಗಲ್ಯ ಬೇಕು ಎಂಬ ಸುಂದರ ಸಾಮಾಜಿಕ ನಾಟಕ ದಿನಾಂಕ 22 ಹಾಗೂ 24 ರಂದು ರಾತ್ರಿ 10.30 ಗಂಟೆಗೆ ಜರುಗಲಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ. ಜಿ ಹಿರೇಮಠ ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button