ಹಂಡೇ ವಜೀರ್ ಸಮಾಜದ ತಾಲೂಕ ಅಧ್ಯಕ್ಷರಾಗಿ ಶಂಕರ ಗೌಡ ಶಿವಣಗಿ ಅವಿರೋದ ಆಯ್ಕೆ..?

ಕಂದಗನೂರು ಫೆ.17

ಮುದ್ದೇಬಿಹಾಳ ತಾಲೂಕ ವೀರಶೈವ ಲಿಂಗಾಯತ ಹಂಡೆ ವಜೀರ್ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಶನಿವಾರ ಪಟ್ಟಣದ ಬಿರಾದಾರ ಮಂಗಲ ಭವನದಲ್ಲಿ ಸಮಾಜದ ಹಿರಿಯರಾದ ಆರ್,ಬಿ ಪಾಟೀಲ್, (ವಕೀಲರು) ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಈ ಸಭೆಯಲ್ಲಿ ಸಮಾಜದ ನೂತನ ತಾಲ್ಲೂಕ ಅಧ್ಯಕ್ಷರಾಗಿ ಕಂದಗನೂರು ಗ್ರಾಮದ ಶಂಕರಗೌಡ ಶಿವಣಗಿ ಅವರನ್ನು ಸರ್ವಾನು ಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸಮಾಜದ ಸಂಘಟನೆಯನ್ನು ಬಲ ಪಡಿಸುವ ದೃಷ್ಟಿಯಿಂದ ವಿವಿಧ ಜವಾಬ್ದಾರಿಗಳಿಗೆ ಈ ಕೆಳಗಿನ ವರನ್ನು ಆಯ್ಕೆ ಮಾಡಲಾಗಿದೆ.

ಉಪಾಧ್ಯಕ್ಷರು:- ಮಲ್ಲಿಕಾರ್ಜುನ್ ಹಂಡರಗಲ್ (ನೇಬಗೆರಿ) ಮತ್ತು ಮಲ್ಲನಗೌಡ.ಎಸ್ ಬಿರಾದಾರ್ (ಕುಂಟೋಜಿ ). ಪ್ರಧಾನ ಕಾರ್ಯದರ್ಶಿಗಳು: ಆರ್.ಎಸ್ ಬಿರಾದಾರ್ (ಕೋಳೂರು) ಮತ್ತು ಭೀಮನಗೌಡ ಕೊಡಗಾನೂರ (ಹುಲ್ಲೂರ) ಸಹ ಕಾರ್ಯ ದರ್ಶಿ ಚಂದ್ರು ಡಮನಾಳ (ಯರಗಲ್). ಖಜಾಂಚಿ :ಹುಲ್ಲ ನಗೌಡ ಪಾಟೀಲ (ಮುದ್ದೇಬಿಹಾಳ). ಕಾರ್ಯಕಾರಿ ಸಮಿತಿ ಸದಸ್ಯೆರು : ಈರಣ್ಣ ಗೌಡ ಪಾಟೀಲ್ (ಕುಂಟೋಜಿ) ಮಾನಪ್ಪ ಗೌಡ ಬಿರಾದಾರ್ (ಬನೋಸಿ), ಚಂದ್ರಶೇಖರ್ ಗೋನಾಳ (ತಂಗಡಗಿ) ಗುರು ಸಂಗಪ್ಪಗೌಡ ಬಿರಾದಾರ್ (ಬಿದರಕುಂದಿ) ಸುರೇಶ್ ಸುಳಕೋಡ (ಕಂದಗನೂರ್), ಆರ್, ಎ, ರೂಡಗಿ (ಹಳ್ಳೂರ), ಸದಾನಂದ ಪಾಟೀಲ (ಯರಝರಿ) ಹಾಗೂ ಶೇಷಪ್ಪ ಗೌಡ ಪಾಟೀಲ್ (ವನಕ್ಯಾಳ) ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಯಿತು.

ಗಣ್ಯರಿಂದ ಅಭಿನಂದನೆ :-

ನೂತನ ಅಧ್ಯಕ್ಷರಾಗಿ ಅಧಿಕಾರ ಶಿವಕರಿಸಿದ ಶಂಕರಗೌಡ ಶಿವಣಗಿ ಅವರಿಗೆ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ, ಎಸ್, ಪಾಟೀಲ್, ನಡಹಳ್ಳಿ, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ್ ಪಂಪಣ್ಣವರ. ಗಿರೀಶ್ ಗೌಡ ಪಾಟೀಲ್ ನಾಲತವಾಡ, ಗಿರೀಶ್ ಗೌಡ ಪಾಟೀಲ್ ಮುರಾಳ, ಲಕ್ಷ್ಮಣ ಬಿಜೂರ್ ಹಾಗೂ ಸಮಾಜದ ಮುಖಂಡರಾದ ಎಚ್, ಟಿ,ಬಿರಾದಾರ್, ಎಸ್,ಎಸ್ ಹೊಸಮನಿ, ಪಿ,ಬಿ ಕಾಳಗಿ ಸಂಗನಗೌಡ ಪಾಟೀಲ, ಮಂಗಳಾದೇವಿ ಬಿರಾದಾರ್, ಸಿ,ಎಲ್ ಬಿರಾದಾರ ಸೇರಿದ ಅನೇಕ ಗಣ್ಯರು ಅಭಿನಂದಿಸಿದ್ದಾರೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ ಸಂಕನಾಳ ಮುದ್ದೇಬಿಹಾಳ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button