ಇಂದಿನಿಂದ ಗಾಣಗಟ್ಲೆ ಕೆರೆ ಮಾಯಮ್ಮ ಜಾತ್ರೆ – ಗ್ರಾಮದಲ್ಲಿ ಸಡಗರ ಸಂಭ್ರಮ.
ಹೂಡೇಂ ಫೆ.17

ಕಾನಾ ಹೊಸಹಳ್ಳಿ ಹೋಬಳಿಯ ಹೂಡೇಂ ಗ್ರಾಮ ದೇವತೆ ಪುರಾತನ ಪ್ರಸಿದ್ಧ ಶ್ರೀ ಗಾಣಗಟ್ಲೆ ಕೆರೆ ಮಾಯಮ್ಮ ದೇವಿಯ ಜಾತ್ರಾ ಮಹೋತ್ಸವ ಫೆ.17 ಮಂಗಳವಾರದಂದು ರಾತ್ರಿ 8 ರಿಂದ ದೇವಿಯ ನೂತನ ಉತ್ಸವ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ, ಗಂಗಾ ಪೂಜೆ, ಅಮ್ಮನವರ ಅದ್ಧೂರಿ ಮೆರವಣಿಗೆ ಜರುಗಲಿದೆ.
ಫೆ.18 ರ ಬುದುವಾರ ಬೇವಿನ ಸೀರೆ, ತುಲಾಭಾರ ಸೇವೆ, ಹರಕೆ ಸೇವೆ, ಮತ್ತು ಜಾನಪದ ಕೋಲಾಟ. ಫೆ. 19 ಗುರುವಾರ ಮಧ್ಯಾಹ್ನ 2 ರಿಂದ ಗಾವು ಕಾರ್ಯಕ್ರಮ, ನಂತರ ದೇವಿಯ ಪಠ ಮತ್ತು ಹೂವಿನ ಹಾರ ಹರಾಜು ಕಾರ್ಯಕ್ರಮ ನಡೆಯಲಿದೆ.

ಗುರುವಾರ ಮಧ್ಯಾಹ್ನ ದಿಂದ ಬೆನಕಶೆಟ್ಟಿ ತಿಪ್ಪೇಸ್ವಾಮಿ ಹಾಗೂ ಅವರ ಮಕ್ಕಳ ವತಿಯಿಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಜರಗಲಿದೆ.
ನಾಟಕ ಪ್ರದರ್ಶನ:-
ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ರಾತ್ರಿ 9 ಗಂಟೆಗೆ ಹೂಡೇಂ ಗ್ರಾಮದಲ್ಲಿ ಜೋಡಿ ಹಕ್ಕಿಗಳ ಸಂಗಮ ಎಂಬ ಸಾಮಾಜಿಕ ನಾಟಕ ಪ್ರದರ್ಶನವಿದೆ ಎಂದು ದೇವಸ್ಥಾನದ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ.ಹೊಸಹಳ್ಳಿ

