“ಭಕ್ತಿಗೆ ಹೆಸರಾದ ಬೇವೂರ ನಮ್ಮೂರು”…..

ಭಕ್ತಿಗೆ ಹೆಸರಾದ ಬೇವೂರ ನಮ್ಮೂರುಗ್ಯಾನಪ್ಪಜ್ಜನ ಶ್ರೀಪಾದ | ಗ್ಯಾನಪ್ಪಜ್ಜನ ಶ್ರೀಪಾದ ನೆನೆದರಭಕ್ತರ ಬಾಳು ಬಂಗಾರ ||೧||
ಬೇವೂರ ಬಸವಣ್ಣಗ ಭಕ್ತಿಲೆ ಬಂದರತೊಟ್ಟಿಲ ಕಾಯಿ ಒಡದಾನತೊಟ್ಟಿಲ ಕಾಯ ಒಡದಾನ ಮಾರಾಯ ಬೇಡಿದ ವರಗಳ ಕೊಟ್ಟಾನ|| ೨||
ಭವರೋಗ ಕಳಿಯಾಕ ಕೈವಲ್ಯ ಪಡಿಯಾಕಶರಣಾಗು ಬೇವೂರ ರುದ್ರಮುನಿಗೆಶರಣಾಗು ಬೇವೂರ ರುದ್ರಮುನಿಗೆ ಪಾದಪಡೆದವರಿಗೆ ಪಾವನ ||೩||
ಹಠಯೋಗಿ ಹುಚ್ಚಯ್ಯ ಮಠದಾಗ ಕುಂತಾನಆರೂಢ ಸುಖದ ಶೆಲೆಯಾಗಿಆರೂಢ ಸುಖದ ಶೆಲೆಯಾಗಿ ಬೇವೂರಭಾಗ್ಯದ ಬುತ್ತಿಯ ಬಿಚ್ಚ್ಯಾನ ||೪||
ಬೇವೂರ ದರ್ಗಾ ದಾವಲಮಲೀಕ ಫೀರಾಹರಕಿ ಹೊತ್ತವಗ ಬೆಳಕಾಗಿ ಫೀರಾಹರಕಿ ಹೊತ್ತವಗ ಬೆಳಕಾಗಿ ಫೀರಾನಾಡಿಗೆ ದೊಡ್ಡವನು ಆಗ್ಯಾನ ಫೀರಾ ||೫||
ಕಲಗುಡಿ ಕಾಳಮ್ಮ,ದುಗ್ಗಮ್ಮ,ದುರಗಮ್ಮದೇಗುಲದ ಈಶ್ವರದೇಗುಲದ ಈಶ್ವರ ಹನಮಂತ ದೇವರುಬೇವೂರ ಸೀಮಿಯ ಕಾದಾರೋ ||೬||
ಕೂಡಲಕ ಹೊಂಟ ಸಂಗಯ್ಯನ ಕಳಸ ಬೇವೂರಾಗ ನಿಂತ ಮೆರವಣಿಗಿಬೇವೂರಾಗ ನಿಂತ ಮೆರವಣಿಗಿ ಮಾಡಿದರಭಕ್ತರ ಬಾಳು ಸಾರ್ಥಕ ||೭||
ಬೇವೂರ ಗಂಡು ಮಹಾದಂಡನಾಯಕನಾಗಿ ದೇಶ ರಕ್ಷಣೆ ಮಾಡ್ಯಾನ ದೇಶ ರಕ್ಷಣೆ ಮಾಡ್ಯಾನಬಹದ್ದೂರ ಬೇವೂರ ಹೆಸರ ಮೆರಸ್ಯಾನ ||೮||
ಕೈಲಾಸ ಸಾರುದಕ ಬೇವೂರ ಸಾಕುಕಾಶಿ ಶ್ರೀಶೈಲ ಮತ್ಯಾಕಕಾಶಿ ಶ್ರೀಶೈಲ ಮತ್ಯಾಕ ಹುಚ್ಚಪ್ಪ ಮನದಾಗ ಗ್ಯಾನಯ್ಯ ನಿಂತಾನ ||೯||

ಕವನ ರಚನೆ:ಶ್ರೀ ಸಂಗನಗೌಡ.ರಾಮನಗೌಡ.
ತೆಗ್ಗಿನಮನಿ.
(ಪ್ರಗತಿಪರ ರೈತರು ಬೇವೂರ ತಾ.ಜಿ.ಬಾಗಲಕೋಟೆ.)

