ಫೆಬ್ರುವರಿ 24 ರಂದು ಶ್ರೀ ಭೋಜಲಿಂಗೇಶ್ವರ – ಜಾತ್ರಾ ಮಹೋತ್ಸವ.

ಸುಗೂರ.ಎನ್ ಫೆ.19

ಚಿತ್ತಾಪುರ ತಾಲೂಕಿನ ಸುಕ್ಷೇತ್ರ ಸೂಗೂರು (ಎನ್) ಗ್ರಾಮದ ಪವಾಡ ಪುರುಷ ಸಚ್ಚಿದಾನಂದ ನಿತ್ಯ ನಿರಂಜನ ಮೂರ್ತಿ, ಸ್ವಯಂಸಿದ್ಧ ಶರಣರಾದ ಸದ್ಗುರು ಶ್ರೀ ಭೋಜಲಿಂಗೇ ಶ್ವರ ಜಾತ್ರಾ ಮಹೋತ್ಸವ ಫೆಬ್ರುವರಿ ಮಂಗಳವಾರ 24-02-2026 ರಂದು ಸಾವಿರಾರು ಭಕ್ತರ ಮಧ್ಯೆ ಅದ್ಧೂರಿಯಾಗಿ ನಡೆಯಲಿದೆ ಎಂದು ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಶ್ರೀ ಹಿರಗಪ್ಪ ತಾತಾನವರು ಹೇಳಿದರು.

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಾಂಕ 20-02-2026 ಶುಕ್ರವಾರ ದಿನದಂದು ರಾತ್ರಿ 7.30 ಕ್ಕೆ ಶಿವ ಕೀರ್ತನೆ ಪ್ರಾರಂಭವಾಗಲಿದ್ದು, ನಂತರ 10 ಗಂಟೆಗೆ ದಾವಲ್ ಮಲ್ಲಿಕ್ ದರ್ಗಾಕ್ಕೆ ಗಂಧ ಮೆರವಣಿಗೆ, ಫೆ. 22-02-2026 ರಂದು ಶ್ರೀಭೋಜಲಿಂಗೇಶ್ವರರ 33 ನೇ. ಪುಣ್ಯಾರಾಧನೆ ಮತ್ತು ಫೆ.23 ರಂದು ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯಲಿದೆ ಎಂದರು.

ಫೆ.24 ರಂದು ಬೆಳಿಗ್ಗೆ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ ಹಾಗೂ ಮಹಾ ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ನಂತರ ಸಂಜೆ 7:05 ಕ್ಕೆ ಭವ್ಯ ರಥೋತ್ಸವ ಹಾಗೂ ಮುಂಬೈ ಉದ್ಯಮಿ ಲಾಲಾಸೇಠ್ ಅವರಿಂದ ಮದ್ದು (ಪಟಾಕಿ) ಸುಡುವ ಕಾರ್ಯಕ್ರಮ ನಡೆಯಲಿದೆ ಎಂದರು.

ರಾತ್ರಿ 8 ಕ್ಕೆ ಶ್ರೀ ಹಿರಗಪ್ಪ ತಾತಾನವರ ಅಧ್ಯಕ್ಷತೆಯಲ್ಲಿ ಧರ್ಮಸಭೆ ನಡೆಯಲಿದ್ದು. ಸಾನಿಧ್ಯ ಶ್ರೀ.ಷ.ಬ್ರ ಡಾ, ಶಿವಕುಮಾರ್ ಶಿವಾಚಾರ್ಯ ಮಹಾ ಸ್ವಾಮಿಗಳು ಚರಂತಿಮಠ ಕೆರೂರ, ಹಾಗೂ ಉದ್ಘಾಟನೆ ಶ್ರೀ.ಷ.ಬ್ರ ಅಭಿನವ ಕಾಡಸಿದ್ಧೇಶ್ವರ ಶಿವಾಚಾರ್ಯ ಮಹಾ ಸ್ವಾಮಿಗಳು ಮರಡಿಮಠ ಗುಳೇದಗುಡ್ಡ ಪೂಜ್ಯರು ಅವರು ಸಾನಿಧ್ಯ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಜನ ಪ್ರತಿನಿಧಿಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಇದೇ ಸಂಧರ್ಭದಲ್ಲಿ ಶಿವ ಕೀರ್ತನೆ ಪ್ರವಚನಕಾರರು ಪಂಡಿತ ಪುಟ್ಟರಾಜ ಗುರುಗಳ ಹಾಗೂ ಶ್ರೀ ಕಲ್ಲಯ್ಯಜ್ಜನವರ ಶಿಷ್ಯಂದಿರಾದ ಯುವ ಪ್ರವಚನಕಾರ ಶ್ರೀ ದೊಡ್ಡಬಸಯ್ಯ ಶಾಸ್ತ್ರಿಗಳು ಖರಾಬದಿನ್ನಿ ಮಾನ್ವಿ ತಾಲೂಕ ಸಂಗೀತಗಾರರು ಗಾನಕೋಗಿಲೆ ಶರಣಯ್ಯ ಗವಾಯಿಗಳು ಸಾ ಸೋಮನಾಳ. ತಬಲವಾದಕಾರು ತಬಲ ಚತುರ ಶಂಕರಯ್ಯಾ ಸ್ವಾಮಿ ಮಠಮಾರಿ ಭಾಗ ವಹಿಸಲಿದ್ದಾರೆ. ನಂತರ 11 ಗಂಟೆಗೆ ರಾತ್ರಿ ರಸ ಮಂಜರಿ ಹಾಸ್ಯ ಕಾರ್ಯಕ್ರಮದಲ್ಲಿ ಪ್ರಭಾ ಕಂಬಾರ ಎದೆ ತುಂಬಿ ಹಾಡುವೆನು ಗಾಯಕಿ ರಾಯಚೂರು. ಮತ್ತು ದೇವರಾಜ್ ಯಲಿ ಹಾಸ್ಯಮಯ ಕಾಮಿಡಿ ಕಲಾವಿದರು ಗೊಬ್ಬುರ‌. ಚನ್ನಬಸವ ಗಾಯಕರು ಸಿಂಧನೂರು. ರಾಜು ಜಾದುಗಾರ ವಿಜಯಪುರ. ದೀಪಿಕಾ ಮಂಗಳೂರು ಕಾಮಿಡಿ ಕಿಲಾಡಿ ಖ್ಯಾತಿಯ ಹಾಸ್ಯ ಕಲಾವಿದೆ. ಮತ್ತು ಪ್ರವೀಣ್ ಗಸ್ತಿ ಕಾಮಿಡಿ ಕಿಲಾಡಿಯ ಖ್ಯಾತಿ ಯ ಹಾಸ್ಯ ಕಲಾವಿದರ ಮನರಂಜನಾ ಕಾರ್ಯಕ್ರಮಗಳನ್ನು ನಡೆಯಲಿದೆ.

ಫೆ.25 ರಂದು ಸಾಯಂಕಾಲ 6 ಗಂಟೆಯಿಂದ ಗ್ರಾಮೀಣ ಕ್ರೀಡೆಯಾದಕ್ಕೆ ಕುಸ್ತಿ ಪಂದ್ಯಾವಳಿ ಕಾರ್ಯಕ್ರಮ ಜರುಗಲಿದ್ದು, ನೂರಾರು ಕುಸ್ತಿ ಪಟುಗಳು ತಮ್ಮ ಸಾಮರ್ಥ್ಯ ತೋರಲಿದ್ದಾರೆ ಎಂದರು.

ಪತ್ರಿಕಾ ಗೋಷ್ಟಿಯಲ್ಲಿ ನಿವೃತ್ತ ಪ್ರಾಂಶುಪಾಲ ಎಸ್.ಎಸ್ ಜ್ಯುಗೇರಿ, ಸರ‌ ಮತ್ತು ಶ್ರೀ ಈರಣ್ಣ ಬಲಕಲ್ ಎಲ್.ಐ.ಸಿ ಯಾದಗಿರ. ಶ್ರೀ ಶರಣಗೌಡ ಬೆನಕನಹಳ್ಳಿ. ಶ್ರೀ ಭೀಮರೆಡ್ಡಿ ಗೌಡ ಕುರಾಳ ಸುಗೂರ ಎನ್. ವಿಶ್ವನಾಥ ರೆಡ್ಡಿ ಪಾಟೀಲ ಸುಗೂರ ಎನ್‌.ಸಿದ್ರಾಮರೆಡ್ಡಿ ಗೌಡ ಬೆನಕನಹಳ್ಳಿ. ಶರಣಗೌಡ ತುಮಕೂರು. ಸಂಗಾರೆಡ್ಡಿ ಗೌಡ ಮಾಲಿ ಪಾಟೀಲ. ಮಹಿಪಾಲ ರೆಡ್ಡಿ ಕರಣಗಿ. ಮಹಾದೇವರೆಡ್ಡಿ ಗೌಡ ತುಮಕೂರು. ಪ್ರಭು ಹೂಗಾರ ಯಾದಗಿರ. ಮಲ್ಲಿಕಾರ್ಜುನ ಕಾರ್ಪೆಟರ್ ಯಾದಗಿರ. ಸುರೇಶ್ ಕೋಟಿ ಮನಿ ಯಾದಗಿರ. ಮಲ್ಲಪ್ಪ ಅರಿಕೇರಿ ಮಾಸ್ತರ, ಶಂಕರಗೌಡ ಮಾಸ್ತರ ಲಿಂಗಸುಗೂರ,ನರೇಂದ್ರ ಗುತ್ತಿ. ಮಹಾಂತೇಶ ಗೌಡರು ಹಿರೇಮಠ ಲಿಂಗಸುಗುರ, ಡಾ, ಸುರೇಶ ಮಾಘಾನೂರ‌.ಮಹಾದೇವಪ್ಪ ಸಾಹುಕಾರ್ ಕುರಕುಂದಿ. ಬಸವರಾಜ್ ಪಾಟೀಲ. ಮಲ್ಲಿನಾಥ ಚಿನ್ನಾ ಪೋಟೊ ಸ್ಟುಡಿಯೋ. ಭಾಬು ಪಾಟೀಲ ಸುಗೂರ ಎನ್. ಸಿದ್ದು ಗೌಡ ಕುರಾಳ. ಭೋಜು ಚಿಗರಳ್ಳಿ. ಅವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಎಂದು ಪತ್ರಿಕೆ ಪ್ರಕಟಣೆಯ ಮೂಲಕ ಮಲ್ಲಿಕಾರ್ಜುನ.ಬಿ ಹಡಪದ ಸುಗೂರ.ಎನ್ ಅವರು ತಿಳಿಸಿದರು ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button