ದಲಿತರಿಗೆ ಭೂಮಿ ಕೊಡಿ ಇಲ್ಲಾ ವಿಷ ಕೊಡಿ – ಸರ್ಕಾರಕ್ಕೆ ಸಿಜು ಆಗ್ರಹ.
ನರಸಿಂಹರಾಜಪುರ ಫೆ.21

ಅನೇಕ ವರ್ಷಗಳಿಂದ ಶೋಷಣೆಗೆ ಒಳಗಾಗಿರುವವರ ಪರ ದಲಿತ ಸಂಘರ್ಷ ಸಮಿತಿ ಹೋರಾಟ ಮಾಡುತ್ತಿದೆ ದಲಿತರಿಗೆ ಭೂಮಿ ಕೊಡಿ ಎಂದು ಸತತವಾಗಿ ಇಂದಿಗೆ ಆರನೇ ದಿನ ಅಹೋರಾತ್ರಿಯ ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ತರೀಕೆರೆ ಏನ್ ವೆಂಕಟೇಶ್ ನೇತೃತ್ವದ ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕರಾದ ಎಂ.ಜೆ ಸಿಜು ಹೇಳಿದರು.
ಅವರು ಇಂದು ಪಟ್ಟಣದ ತಾಲೂಕು ಆಡಳಿತ ಕಚೇರಿ ಎದುರು ನಡೆಸುತ್ತಿರುವ ಪ್ರತಿಭಟನೆ ನಿರತರನ್ನು ಉದ್ದೇಶಿಸಿ ಮಾತನಾಡಿದರು. ದಲಿತರಿಗೆ ಭೂಮಿ ಕೊಡಿ ಇಲ್ಲಾ ವಿಷ ಕೊಡಿ ಎಂದು ಸರ್ಕಾರವನ್ನು ಒತ್ತಾಯಿಸಿದರು.
ದಲಿತ ಮುಖಂಡರಾದ ಆಡುವಳ್ಳಿ ಸಂದೀಪ ಮಾತನಾಡಿ ಭೂ ಕಂದಾಯ ಕಾಯ್ದೆ 1961 ನಿಯಮ ಐದರ ಅಡಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಭೂಮಿ ಮೀಸಲಿಡ ಬೇಕಾಗಿತ್ತು. ಸರ್ಕಾರ ಭೂಮಿ ಮೀಸಲಿಟ್ಟಿಲ್ಲಾ ಹಾಗೂ ದಲಿತರು ಆಡುವಳ್ಳಿಯಲ್ಲಿ 94/ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು ಸಹ ಮನೆ ನಿವೇಶನಗಳು ಕೊಟ್ಟಿಲ್ಲಾ ನಮಗೆ ಭೂಮಿ ಸಿಗುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಹೇಳಿದರು.
ಜಿಲ್ಲಾ ಸಂಘಟನಾ ಸಂಚಾಲಕರಾದ ಅಬ್ದುಲ್ ರೆಹಮಾನ್ ರವರು ಮಾತನಾಡಿ ದಲಿತರು ಅಲ್ಪಸಂಖ್ಯಾತರು ಭೂಮಿ ಉಳುಮೆ ಮಾಡಲು ಹೋದರೆ ಅರಣ್ಯ ಇಲಾಖೆಯವರು ತೊಂದರೆ ಕೊಡುತ್ತಾರೆ ಬಲಾಡ್ಯರಿಗೆ ಮಾತ್ರ ಅವಕಾಶ ಕೊಡುತ್ತಾರೆ ತಾಲೂಕು ಆಡಳಿತ ಜಿಲ್ಲಾ ಆಡಳಿತ ದಲಿತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ವೆನ್ನಿಲಾ ರವರು ಮಾತನಾಡಿ ಮೀನು ಕ್ಯಾಪಿನಲ್ಲಿ ವಾಸವಾಗಿರುವ ದಲಿತರಿಗೆ ಮನೆ ನಿವೇಶನ ಇಲ್ಲ, ಶೌಚಾಲಯ ಇಲ್ಲ, ಬಚ್ಚಲು ಮನೆ ಇಲ್ಲ, ಉಳುಮೆ ಮಾಡಲು ತುಂಡು ಭೂಮಿ ಇಲ್ಲ, ಆದ್ದರಿಂದ ನಮಗೆ ಭೂಮಿ ಬೇಕೇ ಬೇಕು ಭೂಮಿ ಕೊಡುವ ವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ. ಎಂದು ಹೇಳಿದರು.
ಇಂದು ಆರನೇ ದಿನದ ಪ್ರತಿಭಟನಾ ಧರಣಿ ಸತ್ಯಾಗ್ರಹದಲ್ಲಿ ರಾಜ್ಯ ಸಂಚಾಲಕರಾದ ತರೀಕೆರೆ.ಎನ್ ವೆಂಕಟೇಶ್ ರವರು ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಎಂ.ವಿ ಭವಾನಿ ರವರು ರಾಜ್ಯ ಸಮಿತಿ ಸದಸ್ಯರಾದ ಎಸ್ ರಾಜೇಶ್ ತಾಲೂಕು ಸಂಘಟನಾ ಸಂಚಾಲಕರಾದ ಮೃತ್ಯುಂಜಯ, ಎಸ್ ರಾಜು, ಸಿದ್ದಪ್ಪ ಮುಳುವಳ್ಳಿ ಜಯರಾಮ್, ನಾಗರಾಜ್, ಮೀನ್ ಕ್ಯಾಂಪ್ ರವಿ, ರಮೇಶ, ಕುಮಾರ, ಮಂಜು, ರಾಜೇಶ್, ಶ್ಯಾಮ್, ಬಿಲಾಲ್ಕೊಪ್ಪ ಶೇಷ, ಹಂದೂರು ತಿಮ್ಮಯ್ಯ ಪಂಜು, ವಾಸಂತಿ, ಪ್ರೇಮ, ಶೋಭಾ, ಕಾವೇರಿ, ಮಂಗಳ, ಪದ್ಮ, ರೇಣುಕಾ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್.ವೆಂಕಟೇಶ್. ತರೀಕೆರೆ ಚಿಕ್ಕಮಗಳೂರು

