ಎಸ್.ಎನ್.ಡಿ ಪಬ್ಲಿಕ್ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ – ಬೀಳ್ಕೊಡುವ ಸಮಾರಂಭ ಜರುಗಿತು.

ಹುಲ್ಲೂರು ಫೆ.22

ಮುದ್ದೇಬಿಹಾಳ ತಾಲೂಕಿನ ಹುಲ್ಲೂರು ಗ್ರಾಮದ ಎಸ್.ಎನ್.ಡಿ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಎಸ್,ಎಸ್,ಎಲ್,ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಕಾರ್ಯಕ್ರಮ ಉದ್ಘಾಟಿಸಿ ನಿರ್ಣಾಯಕ ಹಂತದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಮೊಬೈಲ್, ಟಿವಿಗಳಿಂದ ದೂರ ಇದ್ದು ಪುಸ್ತಕ ದತ್ತ ಹೆಚ್ಚು ಗಮನ ಕೊಡಬೇಕು ಎಂದು ಶಿಕ್ಷಕ ಕೆ,ಎಸ್ ಚಿಮ್ಮಲಗಿ ಅವರು ಮಾತನಾಡಿದರು.

ಇಂದಿನ ಮಕ್ಕಳು ಸತತ ಪರಿಶ್ರಮದಿಂದ ಏನೂ ಬೇಕಾದರೂ ಸಾಧಿಸುವ ಅವಕಾಶಗಳಿವೆ, ಸಮಯವನ್ನು ನಿಗದಿ ಮಾಡಿ ಅಧ್ಯಯನ ಕೈಗೊಳ್ಳ ಬೇಕು ಎಂದರು. ಸಮೂಹ ಸಂಪನ್ಮೂಲ ವ್ಯಕ್ತಿ ಬಿ,ಡಿ, ಕಪತನೂರ್ ಮಾತನಾಡಿ. ಎಸ್, ಎಸ್,ಎಲ್,ಸಿ ಪರೀಕ್ಷೆಯಲ್ಲಿ ಶೇ, 100 ರಷ್ಟು ಫಲಿತಾಂಶ ದಾಖಲಿಸಿ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಎಂ,ಎಸ್ ಕೊಪ್ಪ ಮಾತನಾಡಿ. ಶಿಕ್ಷಣ ಸಂಸ್ಥೆ ಕಟ್ಟಬೇಕು, ಪ್ರತಿಭಾವಂತ ಮಕ್ಕಳು ಪ್ರೌಢ ಶಿಕ್ಷಣ ಪಡೆದು ಕೊಳ್ಳಬೇಕು ಎಂಬ ಉದ್ದೇಶದಿಂದ ಆರಂಭಿಸಿದ್ದ ಶಾಲೆಯಲ್ಲಿ ಇಂದು ಮೊದಲನೆಯ ಬ್ಯಾಚಿನ್ ಮಕ್ಕಳು ನನ್ನ ಕನಸನ್ನು ನನಸು ಮಾಡಿದ್ದಾರೆ ಎಂದು ಭಾವುಕರಾಗಿ ಹೇಳಿದರು.

ಅತಿಥಿಗಳಾಗಿ ಎಸ್,ಎಸ್ ಪಾಟೀಲ್, ಗುರಪ್ಪ ಉಳ್ಳಾಗಡ್ಡಿ, ಸಂಸ್ಥೆಯ ಉಪಾಧ್ಯಕ್ಷ ಸುಮಿತ್ರ ಕೊಪ್ಪ, ಮುಖ್ಯ ಗುರು ಮಾತೇ ರೇಖಾ ಎಂ,ಎಸ್ ಇದ್ದರು. ಶಿಕ್ಷಕ ದಶರತ್ ಸ್ವಾಗತಿಸಿದರು. ಎಚ್.ಆರ್ ಬಾಗಲಕೋಟೆ ನಿರೂಪಿಸಿದರು. ಶಿಕ್ಷಕ ಮುದ್ದಾಪೂರ ವಂದಿಸಿದರು. ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹೇಳಿದರು. ಹಾಗೂ ಶಾಲಾ ಸಿಬ್ಬಂದಿಗಳು ವಿದ್ಯಾರ್ಥಿಗಳು ಇದ್ದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್‌ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button