ದಲಿತರ ಹೋರಾಟ ನಿಲ್ಲದು ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬರಬೇಕು – ರಾಜ್ಯ ಸಮಿತಿಯ ಸದಸ್ಯ ಎಸ್.ರಾಜೇಶ್ ಒಕ್ಕೊರಲಿನಿಂದ ಆಗ್ರಹ.

ನರಸಿಂಹರಾಜಪುರ ಫೆ.22

ದಲಿತ ಸಂಘರ್ಷ ಸಮಿತಿಯ ಶ್ರೇಯಾ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಜಮೀನನ್ನು ದಲಿತರಿಗೆ ಮಂಜೂರಿ ಮಾಡಿ ಕೊಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯರಾದ ಎಸ್ ರಾಜೇಶ್ ರವರು ಹೇಳಿದರು ಅವರು ಇಂದು ಪಟ್ಟಣದ ತಾಲೂಕ ಆಡಳಿತ ಕಚೇರಿ ಎದುರು ನಡೆಯುತ್ತಿರುವ ಅಹೋ ರಾತ್ರಿ ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿದರು.

ಜಿಲ್ಲಾಧಿಕಾರಿಗಳು ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ಬರಬೇಕು ದಲಿತರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ತರೀಕೆರೆ ಎನ್ ವೆಂಕಟೇಶ್ ರವರ ನೇತೃತ್ವದ ನಮ್ಮ ಸಂಘಟನೆಯು ರಾಜ್ಯದಾದ್ಯಂತ ಇರುವ ಪದಾಧಿಕಾರಿಗಳು ಧರಣಿ ಸ್ಥಳಕ್ಕೆ ಬರುತ್ತಿದ್ದು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ಅಂಗ ಸಂಸ್ಥೆಯ ರಾಜ್ಯ ಸಂಚಾಲಕಿಯಾದ ಎಂ.ವಿ ಭವಾನಿ ರವರು ಮಾತನಾಡಿ ಜಿಲ್ಲೆಯಲ್ಲಿ ದಲಿತರಿಗೆ ಮನೆ ನಿವೇಶನಗಳಿಲ್ಲ ಭೂಮಿ ಇಲ್ಲ ಆದ್ದರಿಂದ ಈ ಹೋರಾಟ ಮಾಡುತ್ತಿದ್ದೇವೆ ಈ ಹೋರಾಟಕ್ಕೆ ಜಿಲ್ಲಾಡಳಿತ ಕೂಡಲೇ ಸ್ಪಂದಿಸಬೇಕು ಎಂದು ಅವರು ಕರೆ ನೀಡಿದರು.

ತಾಲೂಕ ಸಂಘಟನಾ ಸಂಚಾಲಕರಾದ ಎಸ್.ರಾಜು ಮಾತನಾಡಿ ದಲಿತರು ಉಳುಮೆ ಮಾಡಿರುವ ಜಾಗವನ್ನು ಅರಣ್ಯ ಇಲಾಖೆಯವರು ನಮ್ಮಿಂದ ಬಿಡಿಸಿ ಸದರಿ ಜಾಗವನ್ನು ಬಲಾಡ್ಯರಿಗೆ ನೀಡಿದ್ದು ಖಾತೆಯೂ ಸಹ ಮಾಡಿರುತ್ತಾರೆ ಕಂದಾಯ ಇಲಾಖೆಯವರು ಬಡವರಿಗೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯವರಿಂದ ಅನ್ಯಾಯವಾಗಿದೆ ನಮ್ಮ ಭೂಮಿ ನಮಗೆ ಕೊಡಿ ಎಂದು ಆಗ್ರಹಿಸಿದರು.

ನಗರ ಸಂಚಾಲಕರಾದ ಗೋಪಾಲ್ ಮಾತನಾಡಿ ಕಳೆದ 20 ವರ್ಷಗಳಿಂದ ಈ ಭೂಮಿಗಾಗಿ ಹೋರಾಟ ಮಾಡುತ್ತಿದ್ದೇವೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲೆಯ ಉಸ್ತುವಾರಿ ಸಚಿವರು ಬಂದು ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.

ತಾಲೂಕು ಸಂಘಟನಾ ಸಂಚಾಲಕರಾದ ಮೀನು ಕ್ಯಾಂಪ್ ರವಿ ಮಾತನಾಡಿ ದಲಿತರಿಗೆ ಭೂಮಿ ಇಲ್ಲದೆ ಕೂಲಿ ಕೆಲಸ ಮಾಡಿ ಬದುಕುತ್ತಿದ್ದೇವೆ ಸ್ವಾಭಿಮಾನದ ಜೀವನಕ್ಕೆ ನಮಗೆ ಭೂಮಿ ಕೊಡಬೇಕು ಇಲ್ಲವಾದರೆ ಭೂಮಿಗಾಗಿ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.

ಮೀನ ಕ್ಯಾಂಪಿನ ರಮೇಶ್ ರವರು ಮಾತನಾಡಿ ಎಷ್ಟೇ ದಿನಗಳಾದರೂ ಭೂಮಿ ಕೊಡುವ ವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಹೇಳಿದರು.

ಕುಮಾರ್ ರವರು ಮಾತನಾಡಿ 7 ದಿನಗಳಿಂದ ನಾವು ಪ್ರತಿಭಟನೆ ಮಾಡುತ್ತಿದ್ದರೆ ಯಾವ ಅಧಿಕಾರಿಗಳು ನಮ್ಮ ಕಷ್ಟ ಕೇಳುತ್ತಿಲ್ಲಾ ಭೂಮಿಗಾಗಿ ಹೋರಾಟ ಮಾಡುತ್ತಿದ್ದೇವೆ ಯಾವುದೇ ಕಾರಣಕ್ಕೂ ಈ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದರು.

ಹೊನ್ನ ಕೂಡಿಗೆ ಗ್ರಾಮ ಸಂಚಾಲಕರಾದ ಎಸ್.ಎಂ ಶೇಷ ಮಾತನಾಡಿ ತರೀಕೆರೆ ವೆಂಕಟೇಶ್ ರವರ ನಾಯಕತ್ವದ ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಾವು ಭೂಮಿಗಾಗಿ ಹೋರಾಟ ಮಾಡುತ್ತಿದ್ದೇವೆ ನಮಗೆ ಭೂಮಿ ಕೊಡಿ ಇಲ್ಲಾ ನಮಗೆ ವಿಷವನ್ನಾದರೂ ಕೊಡಿ ಎಂದು ಹೇಳಿದರು.

ಇಂದು 7 ನೇ. ದಿನದ ಪ್ರತಿಭಟನೆಯಲ್ಲಿ ರಾಜ್ಯ ಸಂಚಾಲಕರಾದ ತರೀಕೆರೆ.ಎನ್ ವೆಂಕಟೇಶ್ ರವರು ಭಾಗವಹಿಸಿದ್ದು ಬಾಗಲಕೋಟೆ ಯಿಂದ ರಾಜ್ಯ ಸಂಘಟನಾ ಸಂಚಾಲಕರಾದ ಮಾರುತಿ.ಬಿ ಹೊಸಮನಿ ರವರು ಹಾಗೂ ಬೆಳಗಾವಿ ವಿಭಾಗೀಯ ಸಂಚಾಲಕರಾದ ಹನುಮಂತ.ಎಚ್ ಹಿರೇಮನಿ, ಬಾಗಲಕೋಟೆ ಜಿಲ್ಲಾ ಸಂಚಾಲಕರಾದ ಯಮನೂರಪ್ಪ.ಸಿ ಹಲಗಿ, ಮತ್ತು ಬಾಗಲಕೋಟೆ ಜಿಲ್ಲಾ ಸಂಘಟನಾ ಸಂಚಾಲಕರಾದ ಯಮನಪ್ಪ. ಫಕೀರಪ್ಪ. ಭಜಂತ್ರಿ ರವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎನ್.ವೆಂಕಟೇಶ್. ತರೀಕೆರೆ ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button