💥ಲೋಕಾಯುಕ್ತ ಅಧಿಕಾರಿಯ ‘ಖಾಸಗಿ ಫಿರ್ಯಾದಿ’ ಯಲ್ಲಿ ಪತ್ರಕರ್ತೆಯ ಹೆಸರು ದುರ್ಬಳಕೆ – ಸತ್ಯ ಬಯಲಿ ಗೆಳೆದವರ ವಿರುದ್ಧವೇ ದ್ವೇಷದ ಸಂಚು..?💥

ಬೆಂಗಳೂರು/ಉಡುಪಿ ಫೆ.22

ಭ್ರಷ್ಟಾಚಾರ ಮುಕ್ತ ಸಮಾಜದ ಕಾವಲು ಪಡೆಯಂತಿರ ಬೇಕಾದ ಲೋಕಾಯುಕ್ತ ಸಂಸ್ಥೆಯ ಅಧಿಕಾರಿಯೊಬ್ಬರು, ತಮ್ಮ ವೈಫಲ್ಯಗಳನ್ನು ಮುಚ್ಚಿ ಕೊಳ್ಳಲು ಮತ್ತು ಕಾನೂನು ಹೋರಾಟವನ್ನು ಹತ್ತಿಕ್ಕಲು ಪತ್ರಕರ್ತರ ಹೆಸರನ್ನು ದಾಳವಾಗಿ ಬಳಸಿ ಕೊಳ್ಳುತ್ತಿರುವ ಆಘಾತಕಾರಿ ಬೆಳವಣಿಗೆಯೊಂದು ಬಯಲಾಗಿದೆ..! ಉಡುಪಿ ಲೋಕಾಯುಕ್ತ ನಿರೀಕ್ಷಕ ರಾಜೇಂದ್ರ ನಾಯ್ಕ್ ಎಂ.ಎನ್ ಎಂಬುವವರು ದಾಖಲಿಸಿರುವ ಖಾಸಗಿ ದೂರಿನಲ್ಲಿ ಪತ್ರಕರ್ತೆಯ ಹೆಸರನ್ನು ಎಳೆದು ತಂದಿರುವುದು ಈಗ ಪತ್ರಿಕಾ ರಂಗದ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.

🔴 ಪತ್ರಿಕಾ ಸ್ವಾತಂತ್ರ್ಯದ ಹರಣ:-

ಅಧಿಕಾರಿಯ ನಡೆಗೆ ತೀವ್ರ ವಿರೋಧಪ್ರಕರಣದ ಸತ್ಯಾ ಸತ್ಯತೆಯನ್ನು ಕೂಲಂಕುಶವಾಗಿ ಪರಿಶೀಲಿಸಿ, ತನಿಖೆಯ ಲೋಪ ದೋಷಗಳನ್ನು ಸಾರ್ವಜನಿಕವಾಗಿ ಬಯಲು ಮಾಡುವುದು ಪತ್ರಿಕೋದ್ಯಮದ ಧರ್ಮ. ಉಡುಪಿಯಲ್ಲಿ ನಡೆದ ಪ್ರಕರಣವೊಂದರ ಅಸಲಿಯತ್ತನ್ನು ವರದಿ ಮಾಡಿದ ಪತ್ರಕರ್ತೆ ಆರತಿ ಗಿಳಿಯಾರು ಅವರ ಹೆಸರನ್ನು ಬಳಸಿ, “ಅಧಿಕಾರಿಯವರು ಪತ್ರಕರ್ತೆಯನ್ನು ತೋರಿಸಿ ಬೆದರಿಕೆ ಹಾಕಿದ್ದಾರೆ” ಎಂದು ದೂರಿನಲ್ಲಿ ಚಿತ್ರಿಸಿರುವುದು ಸತ್ಯದ ದನಿಯನ್ನು ಅಡಗಿಸುವ ಸಂಚು ಎಂಬ ಸಂಶಯ ದಟ್ಟವಾಗಿದೆ.

ಗಮನಾರ್ಹ ಅಂಶ:-

ತನ್ನ ವಿರುದ್ಧದ ಕಾನೂನು ಹೋರಾಟವನ್ನು ಹತ್ತಿಕ್ಕಲು ಮತ್ತು ನ್ಯಾಯಾಲಯದ ದಾರಿ ತಪ್ಪಿಸಲು ಪತ್ರಕರ್ತರ ಹೆಸರನ್ನು ದೂರಿನಲ್ಲಿ ಉಲ್ಲೇಖಿಸುವುದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಗಧಾ ಪ್ರಹಾರವಾಗಿದೆ. ಇಂತಹ ಕೃತ್ಯಗಳು ಸಾರ್ವಜನಿಕ ಸೇವಕರ ನೈತಿಕ ಪತನವನ್ನು ತೋರಿಸುತ್ತವೆ.

⚖️ ಪತ್ರಕರ್ತರ ಹೆಸರನ್ನು ದುರ್ಬಳಕೆ ಮಾಡಿದರೆ ಶಿಕ್ಷೆ ಏನು..?

ಒಬ್ಬ ಪತ್ರಕರ್ತರು ತಮ್ಮ ವೃತ್ತಿ ಧರ್ಮದ ಭಾಗವಾಗಿ ಮಾಹಿತಿ ಸಂಗ್ರಹಿಸಿದಾಗ ಅಥವಾ ವರದಿ ಮಾಡಿದಾಗ, ಅವರನ್ನು ದ್ವೇಷದ ಕಾರಣಕ್ಕೆ ದೂರಿನಲ್ಲಿ ಸಿಲುಕಿಸುವುದು ಅಥವಾ ಅವರ ಹೆಸರನ್ನು ದುರ್ಬಳಕೆ ಮಾಡಿ ಕೊಳ್ಳುವುದು ಗಂಭೀರ ಅಪರಾಧ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳ ಮೇಲೆ ಈ ಕೆಳಗಿನ ಕ್ರಮಗಳು ಜರುಗಬಹುದು.

ಕರ್ತವ್ಯ ಲೋಪದಡಿ ಅಮಾನತು:-

ಅಧಿಕಾರ ದುರ್ಬಳಕೆ ಮತ್ತು ಸುಳ್ಳು ಮಾಹಿತಿ ನೀಡಿದ ಆರೋಪದಡಿ ಇಲಾಖಾ ವಿಚಾರಣೆ ನಡೆಸಿ ಅಧಿಕಾರಿಯನ್ನು ಅಮಾನತು ಗೊಳಿಸಬಹುದು.

ಮಾನಹಾನಿ ಮೊಕದ್ದಮೆ:-

ಪತ್ರಕರ್ತರ ಘನತೆಗೆ ಕುಂದು ತಂದಿದ್ದಕ್ಕಾಗಿ ಅವರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಮಾನಹಾನಿ ದೂರು ದಾಖಲಿಸಲು ಅವಕಾಶವಿದೆ.

ಸತ್ಯಕ್ಕೆ ದೂರವಾದ ದೂರು (False FIR):-

ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸುವುದು ಅಥವಾ ದಾರಿತಪ್ಪಿಸುವ ದೂರು ನೀಡಿದರೆ ಬಿಎನ್ಎಸ್ (BNS) ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸಲು ನ್ಯಾಯಾಲಯಕ್ಕೆ ಅಧಿಕಾರವಿದೆ.

📍 ನಕಲಿ ಟ್ರ್ಯಾಪ್ ಜಾಲದ ಅಸಲಿ ಮುಖವಾಡ..!

ಗಂಗೊಳ್ಳಿ ಗ್ರಾಮ ಪಂಚಾಯತ್ ಪಿಡಿಓ ಹೆಚ್. ಉಮಾಶಂಕರ್ ಮತ್ತು ಶೇಖರ್ ಜಿ. ಅವರ ಮೇಲೆ ನಡೆದಿದೆ ಎನ್ನಲಾದ ಲೋಕಾಯುಕ್ತ ಟ್ರ್ಯಾಪ್ ಈಗ ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.

ಸಂಭಾಷಣೆಯೇ ಇರಲಿಲ್ಲ:-

ದಿನಾಂಕ 22/01/2025 ರ ಟ್ರ್ಯಾಪ್ ವೇಳೆ ಲಂಚದ ಬೇಡಿಕೆಯ ಯಾವುದೇ ಆಡಿಯೋ ರೆಕಾರ್ಡ್ ಆಗಿರದಿದ್ದರೂ, ಸುಳ್ಳು ಮಾಹಿತಿ ನೀಡಲಾಗಿದೆಯೇ?

ಸಾಕ್ಷಿಗಳ ದಾರಿ ತಪ್ಪಿಸುವಿಕೆ:-

ಸಾಕ್ಷಿಗಳಾದ ಡಾ, ರವಿಕುಮಾರ್ ಹುಕ್ಕೇರಿ ಮತ್ತು ರಾಮಚಂದ್ರ ಮಯ್ಯ ಅವರಿಗೆ ಸಂಭಾಷಣೆ ಕೇಳಿಸದಿದ್ದರೂ, “ಧ್ವನಿ ಗುರುತಿಸಿದ್ದಾರೆ” ಎಂದು ಮಹಜರ್‌ನಲ್ಲಿ ಬರೆಸಿಕೊಳ್ಳಲಾದ ಅಸಲಿ ಗುಟ್ಟೇನು?

ವಿಳಂಬಿತ ದೂರು:-

ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದರೆ ಅಂದೇ ದೂರು ನೀಡ ಬೇಕಿತ್ತು. ಆದರೆ, ಒಂದು ವರ್ಷದ ನಂತರ ಲೋಕಾಯುಕ್ತ ನಿರೀಕ್ಷಕರೇ ಖಾಸಗಿ ಫಿರ್ಯಾದಿ ನೀಡಿರುವುದು ‘ಸೇಡಿನ ಕ್ರಮ’ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

🚫 ಸಂವಿಧಾನ ಮತ್ತು ನಿಯಮಗಳ ಉಲ್ಲಂಘನೆ:-

ಪಿಡಿಓ ಉಮಾಶಂಕರ್ ಅವರು ಸಲ್ಲಿಸಿರುವ SC/ST ದೌರ್ಜನ್ಯ ವಿಶೇಷ ಪ್ರಕರಣದ ತನಿಖೆಯಿಂದ ಪಾರಾಗಲು ಲೋಕಾಯುಕ್ತ ಅಧಿಕಾರಿಗಳು ಇಂತಹ ತಂತ್ರಗಳನ್ನು ಬಳಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸಿ.ಸಿ.ಎ ನಿಯಮ 1957 ರ ಅಡಿ ಯಾವುದೇ ಅಧಿಕೃತ ವಿಚಾರಣೆ ನಡೆಸದೆ ದಂಡನಾತ್ಮಕ ಕ್ರಮಗಳಿಗೆ ಶಿಫಾರಸ್ಸು ಮಾಡಿರುವುದು ಸಂವಿಧಾನ ವಿರೋಧಿ ನಡೆ ಯಾಗಿದೆ.

📉 ಸಂತ್ರಸ್ತರಿಗೆ ಕಿರುಕುಳ – ನ್ಯಾಯದ ಕೊಲೆ..?

ಸತ್ಯದ ಪರ ನಿಂತ ಅಧಿಕಾರಿ ಡಾ, ರವಿಕುಮಾರ್ ಅವರಿಗೆ ಬೆಳಗಾವಿಗೆ ವರ್ಗಾವಣೆ ಶಿಕ್ಷೆ! ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ರಾಮಚಂದ್ರ ಮಯ್ಯ ಅವರನ್ನು ಹುದ್ದೆಯಿಂದಲೇ ಕಿತ್ತೊಗೆಯಲಾಗಿದೆ!

ರಾಜ್ಯ ಸರ್ಕಾರಕ್ಕೆ ಸಾರ್ವಜನಿಕರ ಆಗ್ರಹ:-

ತನ್ನ ಇಲಾಖೆಯ ಲೋಪಗಳನ್ನು ಮುಚ್ಚಿ ಕೊಳ್ಳಲು ಪತ್ರಕರ್ತರ ಹೆಸರನ್ನು ಬಳಸಿ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಯತ್ನಿಸುತ್ತಿರುವ ಲೋಕಾಯುಕ್ತ ನಿರೀಕ್ಷಕ ರಾಜೇಂದ್ರ ನಾಯ್ಕ್ ಮತ್ತು ತಂಡದ ವಿರುದ್ಧ ರಾಜ್ಯ ಸರ್ಕಾರ ಕೂಡಲೇ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ಸತ್ಯ ವರದಿ ಮಾಡುವ ಪತ್ರಕರ್ತರಿಗೆ ಮತ್ತು ದಲಿತ ಅಧಿಕಾರಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button