ಒಳ ಮೀಸಲಾತಿ ಗೊಂದಲ ನಿವಾರಿಸದ ರಾಜ್ಯ ಸರ್ಕಾರ – ಸುರೇಶ.ಚಲವಾದಿ ಆರೋಪ.

ಗದಗ ಫೆ.23

ಒಳ ಮೀಸಲಾತಿ ಗೊಂದಲ ನಿವಾರಸದೇ ಸಹೋದರ ಸಮುದಾಯಗಳಲ್ಲಿ ಭಿನ್ನಾಭಿಪ್ರಾಯ ಮೂಡಿಸಿ ರಾಜ್ಯ ಸರ್ಕಾರ ಗೊಂದಲ ಸ್ರಷ್ಟಿಸಿದೆ ಎಂದು ಭಾರತೀಯ ಜನತಾ ಪಕ್ಷ ಎಸ್/ಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ವಾಯ್.ಚಲವಾದಿ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕಳೆದ 2024 ಅಗಷ್ಟ್‌ 1 ರಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರಿದ್ದ 7 ಸದಸ್ಯರನ್ನೊಳ ಗೊಂಡ ಪೀಠ ಒಳ ಮೀಸಲಾತಿ ಆಯಾ ರಾಜ್ಯ ಸರ್ಕಾರ ಜಾರಿ ಗೊಳಿಸ ಬಹುದೆಂದು ತೀರ್ಪು ಪ್ರಕಟಿಸಿತು.

ಅದರಂತೆಯೇ ರಾಜ್ಯ ಕಾಂಗ್ರೆಸ್ ಸರ್ಕಾರ ನಿವೃತ್ತ ನ್ಯಾಯ ಮೂರ್ತಿ H.N ನಾಗಮೋಹನ್ ದಾಸ್ ಅವರ ವರದಿಯನ್ನಾಧರಿಸಿ ಕಳೆದ 26 ಅಗಷ್ಟ್ 2025 ರಂದು ಒಳ ಮೀಸಲಾತಿ ಜಾರಿ ಗೊಳಿಸಿತು.

ಒಳ ಮೀಸಲಾತಿಯಲ್ಲಿ ಅನ್ಯಾಯಕ್ಕೊಳಗಾದ ಅಲೆಮಾರಿ ಸಮುದಾಯ ಕೋರ್ಟ್‌ ಮೊರೆ ಹೋಗಿ ತಡೆಯಾಜ್ಞೆ ತಂದಿರುತ್ತಾರೆ. ಆದರೆ ಸರ್ಕಾರ ಒಳ ಮೀಸಲಾತಿ ವಿಚಾರದಲ್ಲಿ ಬಹಳ ಸೂಕ್ಷ್ಮತೆಯನ್ನು ಅನುಸರಿಸಿ ಪಾರದರ್ಶಕವಾದ ಸಮೀಕ್ಷೆ ಮಾಡಿ ವರದಿ ಪಡೆಯ ಬೇಕಾಗಿತ್ತು.

ಆದರೆ ತಮ್ಮ ರಾಜ್ಯಕೀಯ ಅಸ್ಥಿತ್ವ ಕಾಯ್ದು ಕೊಳ್ಳಲು ಸರಿಯಾದ ಸಮೀಕ್ಷೆ ನಡೆಸದೇ ಎಡಗೈ ಸಮುದಾಯಕ್ಕೆ 6% ಬಲಗೈ ಸಮುದಾಯಕ್ಕೆ 6% ಮೀಸಲಾತಿ ಕಲ್ಪಿಸಿ ಕೈ ತೊಳೆದು ಕೊಂಡಿತು.

ಆದರೂ ಸಹಿತ ಎಡಗೈ ಬಲಗೈ ಬೇಧ ಭಾವ ಸಲ್ಲ ಎಂದರಿತ ಹೋರಾಟಗಾರರು ಸರ್ಕಾರದ ನಿರ್ಧಾರವನ್ನ ಸ್ವಾಗತಿಸಿದರು. ಆದರೆ ವರದಿಯಲ್ಲಿನ ಜನ ಸಂಖ್ಯಾವಾರು ನೋಡುವುದಾದರೆ ಮಾದಿಗ ಸಮುದಾಯ ರಾಜ್ಯದಲ್ಲಿ 36 ಲಕ್ಷ ಜನಸಂಖ್ಯೆಯನ್ನು ಹೊಂದಿದರೆ ಹೊಲೆಯ ( ಚಲವಾದಿ) ಸಮುದಾಯ 33 ಲಕ್ಷ ಜನ ಸಂಖ್ಯೆ ಇರುತ್ತದೆಯೆಂದು ಸಮೀಕ್ಷೆ ಹೇಳುತ್ತದೆ.

ಹಾಗಿದ್ದರೆ 3 ಲಕ್ಷ ಹೆಚ್ಚು ಜನ ಸಂಖ್ಯೆಯನ್ನು ಹೊಂದಿರುವ ಮಾದಿಗ ಸಮುದಾಯಕ್ಕೆ ಅನ್ಯಾಯ ವಾಗುವುದಿಲ್ಲವೇ ಎಂದು ಪ್ರಶ್ನಿಸಿದರು. ಆದರೆ ವರದಿಯ ಅಂಶಗಳನ್ನ ಸರಿಯಾದ ರೀತಿಯಲ್ಲಿ ಅವಲೋಕಿಸಿದಾಗ ಚಲವಾದಿ ಸಮುದಾಯದಲ್ಲಿ ಆದಿ ಕರ್ನಾಟಕ 4 ಲಕ್ಷ ಹಾಗೂ ಆದಿ ದ್ರಾವಿಡ 4 ಲಕ್ಷ ದಷ್ಟು ಜನಸಂಖ್ಯೆಯನ್ನು ಹೊಂದಿರುತ್ತದೆ.

ಹಾಗಾದರೆ ಒಟ್ಟಾರೆಯಾಗಿ 41 ಲಕ್ಷ ಚಲವಾದಿ ಸಮುದಾಯದ ಜನ ಸಂಖ್ಯೆ ಇದೆಯೆಂದು ಅಂದಾಜಿಸಲಾಗುತ್ತದೆ. ಅಂದರೆ ಸಮೀಕ್ಷೆ ಪಾರದರ್ಶಕ ವಾಗಿಲ್ಲವೆಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ವರದಿ ಪಾರದರ್ಶಕ ವಾಗಿಲ್ಲವೆಂದು ಅರಿತು ಕೊಂಡಾಗ್ಯೂ ಕೂಡಾ ಸರ್ಕಾರ ಒಳ ಮೀಸಲಾತಿ ಹೋರಾಟಗಾರರ ಭಯದಿಂದ ಈ ಆದಿ ಕರ್ನಾಟಕ ಮತ್ತು ಆದಿ ದ್ರಾವಿಡ ಎಂಬ ಜಾತಿಯನ್ನು ಬೇರ್ಪಡಿಸದೇ ಎರೆಡು ಸಮುದಾಯದಲ್ಲಿ ಹಂಚಿಕೆ ಮಾಡಿ ಎಡಗೈ ಬಲಗೈ ಸಮುದಾಯಗಳ ಜನ ಸಂಖ್ಯೆಯನ್ನು ಸರಿ ದೂಗಿಸಿ ಎರಡೂ ಸಮುದಾಯಳಿಗೆ ಅನ್ಯಾಯವಾಗ ಬಾರದೆಂದು ಸಮಾನವಾಗಿ 6% ಮೀಸಲಾತಿಯನ್ನ ಕಲ್ಪಿಸಿದ್ದನ್ನು ಎರೆಡೂ ಸಮುದಾಯಗಳು ಒಪ್ಪಿ ಕೊಂಡಿರುತ್ತವೆ.

ಅದನ್ನು ನಾನೂ ಕೂಡಾ ಸ್ವಾಗತಿಸುತ್ತೇನೆ. ಆದರೆ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಹೊರಡಿಸಿರುವ ಅಧಿಸೂಚನೆಯ ರೋಸ್ಟರ್ ಬಿಂದುವಿನಲ್ಲಿ ಮಾದಿಗ ಸಮುದಾಯ ಪ್ರವರ್ಗ ಎ. ಚಲವಾದಿ ಸಮುದಾಯ ಪ್ರವರ್ಗ ಬಿ ಇತರೆ ಸಮುದಾಯ ಸಿ.ಡಿ ಹೀಗೆ ವರ್ಗಿಕರಿಸಿರುತ್ತದೆ.

ಆದರೆ ಇರುವ ಕೆಲವು ಹುದ್ದೆಗಳಲ್ಲಿ ಎ ಗೆ ಜಾಸ್ತಿ ಅವಕಾಶ ಕಲ್ಪಿಸಿ ಇನ್ನೊಂದು ಸಮುದಾಯವನ್ನು ಕೆರಳುವಂತೆ ಮಾಡಿ ಸಹೋದರ ಸಮುದಾಯಗಳ ಒಗ್ಗಟ್ಟನ್ನ ಮುರಿಯುವಂತಹ ಪ್ರಯತ್ನ ಮಾಡುತ್ತಿರುವದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.

ರೋಸ್ಟರ್ ಬಿಂದುವಿನಲ್ಲಿ ಪ್ರವರ್ಗ ಎ ಮತ್ತು ಪ್ರವರ್ಗ ಬಿ ಗಳಿಗೆ ಸಮಾನವಾದ ಅವಕಾಶ ಕಲ್ಪಿಸಿ ಪ್ರವರ್ಗ ಸಿ ಮತ್ತು ಡಿ ಗಳಿಗೆ ಜನ ಸಂಖ್ಯೆಗನು ಗುಣವಾಗಿ ಅವಕಾಶಗಳನ್ನ ಕಲ್ಪಿಸಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯ ಬೇಕಾಗಿತ್ತು ಆದರೆ ಸೈದ್ದಾಂತಿಕವಾಗಿ ಪ್ರಜಾಪ್ರಭುತ್ವವನ್ನು ನಂಬದ ಕಾಂಗ್ರೆಸ್ ರಾಜ್ಯಕೀಯವಾಗಿ ಒ ಳಮೀಸಲಾತಿಯೆಂಬ ಸಾಂಸ್ಥಿಕ ಸಮಸ್ಯೆಯನ್ನು ಜೀವಂತವಾಗಿಡಲು ಬಯಸುತ್ತದೆ.

ಏಕೆಂದರೆ ಎಡಗೈ ಬಲಗೈ ಸಮುದಾಯಗಳು ಒಂದಾದರೆ ಮುಂದೊಂದು ದಿನ ದಲಿತರಿಗೆ ರಾಜ್ಯದ ಮುಖ್ಯಮಂತ್ರಿ ಯಾಗುವ ಅವಕಾಶ ಒದಗಿ ಬಂದರೂ ಬರಬಹುದೆಂಬ ಭಯದಿಂದ ಸನ್ಮಾನ್ಯ ಮುಖ್ಯಮಂತ್ರಿಗಳು ಎರೆಡು ಸಮುದಾಯಗಳ ನಡುವೆ ಇಂತಹ ಗೊಂದಲಗಳನ್ನ ಸ್ರಷ್ಟಿಸುತ್ತಿದ್ದಾರೆ.

ಇವರ ರಾಜ್ಯಕೀಯ ಸ್ವ ಹಿತಕ್ಕಾಗಿ ರಾಜ್ಯದಲ್ಲಿ ಸಹೋದರ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯಗಳು ತಾರಕಕ್ಕೇರುತ್ತಿದೆ. ಈ ದೇಶದ ಮೂಲ ಅಸ್ಪ್ರಷ್ಯ ಸಮುದಾಯಗಳಾದ ಎಡ ಬಲ ಸಮುದಾಯಗಳು ಸುಮಾರು ದಶಕಗಳ ಕಾಲ ಸಹೋದತ್ವ ಬಾಂಧವ್ಯದಿಂದ ಸಾಮರಸ್ಯದ ಬದುಕನ್ನ ಕಟ್ಟಿಕೊಂಡು ಬಂದಿದ್ದವು. ಇಂತಹ ಸಹೋದರ ಸಂಭಂಧದ ಸಮುದಾಯಳ ನಡುವೆ ರಾಜ್ಯ ಸರ್ಕಾರ ಧ್ವೇಷ ಭಾವನೆ ಮೂಡುವಂತೆ ಮಾಡಿ ರಾಜ್ಯದಲ್ಲಿ ಶಾಂತಿ ಕದಡುವಂತಹ ವಾತಾವರಣ ಸ್ರಷ್ಟಿಸಿರುವುದು ವಿಪರ್ಯಾಸದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಸಂವಿಧಾನ ಪ್ರಜಾಪ್ರಭುತ್ವದ ಪಾಠ ಮಾಡುವ ಸನ್ಮಾನ್ಯ ಸಿದ್ದರಾಮಯ್ಯನವರು ಒಳ ಮೀಸಲಾತಿಯಲ್ಲಿನ ಗೊಂದಲಗಳನ್ನ ನಿವಾರಿಸಿ ರೋಸ್ಟರ್ ಬಿಂದುವಿನಲ್ಲಿ ಒಳಮೀಸಲಾತಿ ಪ್ರಕಾರ ಮೀಸಲಾತಿ ಹಂಚಿಕೆ ಮಾಡಿ ಸರಿಯಾದ ರೀತಿಯಲ್ಲಿ ಉದ್ಯೋಗ ಅವಕಾಶಗಳನ್ನ ಕಲ್ಪಿಸಬೇಕು. ಸಹೋದರ ಸಮುದಾಯಗಳಲ್ಲಿ ನಡೆಯುತ್ತಿರುವ ತಾರತಮ್ಯವನ್ನು ನಿವಾರಿಸ ಬೇಕು.

ಸಮುದಾಯಗಳಲ್ಲಿನ ಭಿನ್ನತೆಗೆ ತಂತ್ರಗಳನ್ನ ರೂಪಿಸಿ ತಮ್ಮ ರಾಜ್ಯಕೀಯ ಬೇಳೆ ಬೇಯಿಸಿ ಕೊಳ್ಳಲು ಮುಂದಾದರೆ ಮುಂಬರುವ ದಿನ ಮಾನದಲ್ಲಿ ಎಡ ಬಲ ಸಮ ಬಲವಾಗಿ ರಾಜ್ಯದ ದಲಿತ ಸಮುದಾಯಗಳು ಒಂದಾಗಿ ನಿಮಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button