ಕ.ದ.ಸಂ.ಸ ಮಂಗಳೂರು ಜಿಲ್ಲಾ ಸಂಚಾಲಕರಾಗಿ – ಯಾದವ್ ಆಯ್ಕೆ.
ಮಂಗಳೂರು ಮಾ.04

ಶೋಷಿತರ ಧ್ವನಿ ಅಂಬೇಡ್ಕರ್ ಮತ್ತು ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ರ ಹಾದಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೆಲಸ ಮಾಡುತ್ತಿದೆ ಎಂದು ರಾಜ್ಯ ಸಂಚಾಲಕರಾದ ತರೀಕೆರೆ ಎನ್.ವೆಂಕಟೇಶ್ ಹೇಳಿದರು.
ಅವರು ಭಾನುವಾರ ಮಂಗಳೂರು ವಿಶ್ವವಿದ್ಯಾನಿಲಯದ ಕಾವೇರಿ ಗೆಸ್ಟ್ ಹೌಸ್ ನಲ್ಲಿ ಮಂಗಳೂರು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಮಾತನಾಡಿದರು ಆಸೈಗೊಳಿ ಡಾ, ಬಿ.ಆರ್ ಅಂಬೇಡ್ಕರ್ ವಿದ್ಯಾನಿಧಿ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಯಾದವ್ ರವರನ್ನು ಜಿಲ್ಲಾ ಸಂಚಾಲಕರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಜಿಲ್ಲಾ ಸಂಘಟನಾ ಸಂಚಾಲಕರಾಗಿ ಶಿವರಾಜ್ ಪಾಟೀಲ್, ಜೆ.ಎಂ ರಾಜೇಶ್, ಸದಾ ನಂದ ಮಾಡೂರು, ಸಂತೋಷ್ ದೇರಲಕಟ್ಟೆ, ಹೂವಪ್ಪ ಕೊಣಾಜೆ, ರೆಹಮಾನ್ ಕೊಣಾಜೆ, ಮತ್ತು ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕರಾಗಿ ಶೋಭಾ, ಕರ್ನಾಟಕ ದಲಿತ ಕಲಾ ಮಂಡಳಿಯ ಜಿಲ್ಲಾ ಸಂಚಾಲಕರಾಗಿ ಪುನೀತ್ ಆರ್.ತೋಕ್ಕೊಟ್ಟು ರವರನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕರಾದ ಬಾಗಲಕೋಟೆಯ ಮಾರುತಿ.ಬಿ ಹೊಸಮನಿ, ಬೆಂಗಳೂರಿನ ರಾಜಶೇಖರ್ ಜಾಪನೂರ್, ಕೋಲಾರದ ವೆಂಕಟರಾಮಪ್ಪ ರಾಜ್ಯ ಖಜಾಂಚಿಯಾದ ಮಹದೇವ್ ಪ್ರಸಾದ್ ರಾಜ್ಯ ಸಮಿತಿ ಸದಸ್ಯರಾದ ಚಿಕ್ಕಮಗಳೂರಿನ ಎಸ್ ರಾಜೇಶ್, ನ್ಯಾಯವಾದಿ ನವೀನ್ ಕುಮಾರ್, ಬೆಳಗಾವಿ ವಿಭಾಗಿಯ ಸಂಚಾಲಕರಾದ ಹನುಮಂತ ಹಿರೇಮನಿ, ಮೈಸೂರು ವಿಭಾಗೀಯ ಸಂಚಾಲಕರಾದ ಸಿ.ಎಸ್ ಜಗದೀಶ್, ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಎಂ.ವಿ ಭವಾನಿ, ರಾಜ್ಯ ಸಂಘಟನಾ ಸಂಚಾಲಕಿ, ವಿಜಯಲಕ್ಷ್ಮಿ.ಪಿ ಭಾರತಿ, ಬಾಗಲಕೋಟೆ ಜಿಲ್ಲಾ ಸಂಚಾಲಕ ಯಮನೂರ.ಸಿ ಹಲಗಿ, ಬೆಂಗಳೂರು ಜಿಲ್ಲಾ ಸಂಚಾಲಕರಾದ ಪ್ರವೀಣ್ ಕುಮಾರ್, ಬೆಳಗಾವಿ ಜಿಲ್ಲಾ ಸಂಚಾಲಕರಾದ ಗೋವಿಂದ ಸಣ್ಣಕ್ಕಿ, ಚಿಕ್ಕಮಗಳೂರು ಜಿಲ್ಲಾ ಸಂಘಟನಾ ಸಂಚಾಲಕರಾದ ಅಬ್ದುಲ್ ರೆಹಮಾನ್, ಬಾಗಲಕೋಟೆ ಜಿಲ್ಲಾ ಸಂಘಟನಾ ಸಂಚಾಲಕರಾದ ಯಮನೂರ.ಎಫ್ ಭಜಂತ್ರಿ, ಮೈಸೂರು ಜಿಲ್ಲಾ ಸಂಘಟನಾ ಸಂಚಾಲಕರಾದ ಮಲ್ಲಿಕಾರ್ಜುನ, ಎನ್.ಆರ್ ಪುರದ ತಾಲೂಕು ಸಂಚಾಲಕರಾದ ಸಿ.ಜು ಮುಂತಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು

