ಡಾ, ಬಾಬಾ ಸಾಹೇಬ್ ಅಂಬೇಡ್ಕರ್ & ಬಾಬು ಜಗಜೀವನ್ ರಾಮ್ ನಾಮ ಫಲಕಕ್ಕೆ ಅಪಮಾನ ಮಾಡಿರುವ – ದುಷ್ಕರ್ಮಿಯನ್ನು ರಾಜ್ಯದಿಂದ ತತಕ್ಷಣ ಜಾರಿ ಗೊಳಿಸುವಂತೆ ತಾಲೂಕ ದಂಡಾಧಿಕಾರಿ ಯವರಲ್ಲಿ ದಲಿತ ಸಮುದಾಯದಿಂದ ಆಗ್ರಹ.
ಗಜೇಂದ್ರಗಡ ಮಾ.04

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಗುಳಗುಳ್ಳಿ ಗ್ರಾಮದಲ್ಲಿ ವಿಶ್ವದ ಬೆಳಕು ಜ್ಞಾನದ ಬೆಳಕು ದಿವ್ಯ ಬೆಳಕು ವಿಶ್ವದಲ್ಲಿ ದೊಡ್ಡ ಸಂವಿಧಾನ ಶಿಲ್ಪಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಎಂದು ಖ್ಯಾತಿ ಪಡೆದಿರುವ ಬಾಬು ಜಗಜೀವನ್ ರಾಮ್ ಅವರಿಬ್ಬರು ಇರುವ ನಾಮ ಫಲಕಕ್ಕೆ ರಾಷ್ಟ್ರದ್ರೋಹಿ ಅಶೋಕ ರಂಗಾಪುರ ಎಂಬ ದುಷ್ಟ ವ್ಯಕ್ತಿಯಿಂದ ಸಮುದಾಯಗಳ ಮದ್ಯೆ ಕಂದಕ ಸೃಷ್ಟಿ ಮಾಡಿ ಕೋಮು ಗಲಭೆ ಜಾತಿ ಜಾತಿಗಳ ನಡುವೆ ಜಗಳ ಹಚ್ಚುವ ಹುನ್ನಾರದಿಂದ ಪೂರ್ವ ನಿಯೋಜಿತ ಗೊಂಡು ಉದ್ದೇಶ ಪೂರ್ವಕವಾಗಿ ಈ ದೇಶ ಕಂಡ ಅಪ್ರತಿಮ ನಾಯಕರಾದ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ & ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ರವರಿಗೆ ಅಪಮಾನ ಮಾಡುವ ಉದ್ದೇಶದಿಂದಲೇ ನಾಮ ಫಲಕಕ್ಕೆ ಚಪ್ಪಲಿ ಹಾರ ಹಾಕಿ ದಲಿತ ಸಮುದಾಯದ ವಿರುದ್ಧ ಅವ್ಯಾಚ್ಯ ಮತ್ತು ಅಶ್ಲೀಲ ಪದಗಳಿಂದ ಬರೆದಿಟ್ಟ ಚೀಟಿ ಸಮಸ್ತ ದಲಿತ ಬಾಂಧವರಿಗೆ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಯಾಯಿಗಳಿಗೆ ಘಾಸಿ ಗೊಳಿಸಿದ್ದು ಅತೀವ ನೋವಿನ ಸಂಗತಿ ಯಾಗಿದ್ದು.

ಇಂತಹ ದುಷ್ಟ ವ್ಯಕ್ತಿಗಳನ್ನ ನಮ್ಮ ರಾಜ್ಯದಿಂದ ತತಕ್ಷಣವಾಗಿ ಗಡಿಪಾರು ಮಾಡಿ ರೌಡಿ ಶೀಟ್ ದಾಖಲಿಸಿ ಇಂತಹ ಘಟನೆಗಳು ಯಾವುದೇ ಗ್ರಾಮದಲ್ಲಿ ಮರುಕಳಿಸದಂತೆ ಸೂಕ್ತವಾಗಿ ಕಾರ್ಯ ನಿರ್ವಹಿಸಲು ಪೋಲಿಸ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿಯಾಗಿ ಕಾರ್ಯ ನಿರ್ವಹಿಸಲು ರಾಜ್ಯಪಾಲರು ನಿರ್ದೇಶನ ನೀಡಬೇಕು ಎಂದು ಗದಗ ಜಿಲ್ಲಾ ದಲಿತ ಸಮುದಾಯದ ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ ಎಂದು ವರದಿ ಆಗಿದೆ ಹಾಗೂ ಗದಗ ಜಿಲ್ಲಾ ಪೋಲಿಸ್ ಇಲಾಖೆಗೆ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ದಿಂದ ಬೇಸ್ಟ್ ಆಫ್ ಲಕ್ ಹೇಳಬಯಸುತ್ತದೆ.

