“ಗಾನ ಸುಧೆಯ ಶಿಯೋಗಿ ಡಾ, ಪಂಚಾಕ್ಷರಿ ಪುಟ್ಟರಾಜ ಗವಾಯಿ”…..

ದೇವಗಿರಿ ಕಂದ ಜಗದಲಿ ಸಂಗೀತ

ಚಂದನವ ತಂದರು

ಶ್ರೀ ವೀರೇಶ್ವ ಪುಣ್ಯಾಶ್ರಮದಲಿ ನೆಲೆನಿಂತರು

ಗಾನಗಂಧರ್ವ ಅಂಧರ ಅನಾಥರ ಬಾಳ

ಸಂಗೀತಮಯಿಯು

ಹಿಂದೂಸ್ತಾನಿ ಕರ್ನಾಟಕ ಸಂಗೀತ

ಗಾನಯೋಗಿಯು

ಜಗದಲಿ ಸುಳಿದಾಡುವ ತಂಗಾಳಿಯ

ಗಾನ ಸುಧೆ ಶಿವಯೋಗಿಯು

ನಡೆದಾಡುವ ದೇವರು ಪಂಡಿತ

ಪುಟ್ಟರಾಜ ಗವಾಯಿ ಗಾನಮಾಂತ್ರಿಕರು

ತಬಲಾ ಹಾರ್ಮೋನಿಯಂ ಪಿಟೀಲು ಸಾರಂಗಿ

ಶಹನಾಯಿ ಪಂಚವಾದ್ಯ ಪ್ರವೀಣರು

ಮಹಾ ಮಹಿಮರ ಪುರಾಣ ನಾಟಕ ಸಂಗೀತ

ತ್ರೀಭಾಷಾ ಕವಿರತ್ನರು

ಶ್ರೀ ಗುರು ದಿವ್ಯ ವಾಣಿ ಮಹಿಮೆ ಅಪಾರ

ಕಿರ್ತಿಯು

ತುಲಾಭಾರ ಮೌಲ್ಯವ ಅಂಧರ ಅನಾಥರ

ಬಾಳ ಬೆಳಗಿದ ಧರ್ಮಭೂಷಣರು

ತ್ರಿಕಾಲ ಇಷ್ಟಲಿಂಗ ಪೂಜೆ ಅರ್ಚನೆ ದ್ಯಾನ

ಮೂರ್ತಿಯು

ಶಿವ ಜ್ಞಾನವ ನೋಡುವ ಕಣ್ಣುಗಳಿಗೆ

ಸೌಭಾಗ್ಯವ ಕಲ್ಪತರು

ಪಂಚಾಕ್ಷರ ವಾಣಿ ಕರುನಾಡ ಸುಭಾಷಿತ

ಗರಿಮೆ

ನವರಸಗಳ ಜೇನ ಸುಧೆ ಭಾವದಲಿ ಪ್ರವಚನ

ಬೋಧಕರು

ಸೃಷ್ಟಿಕರ್ತನ ಜಪ ತಪದ ಮುಗ್ಧ ಮಗು

ಮನದವರು

ನಾಡ ದೇಶ ಜನಮನವು ಮರೆಯದ

ಗಾನಗಂಧರ್ವ ಮಾಣಿಕ್ಯವು

ದೇಶಂಸು

ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ

ದೇವರ ಹಿಪ್ಪರಗಿ/ಅಮೀನಗಡ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button