ಅಲ್ಪಸಂಖ್ಯಾತರ ವಸತಿ ನಿಲಯ ಶಾಲೆಗೆ ಮೇಲ್ದರ್ಜೆಗೆ ರಾಜೀವ್ ಗಾಂಧಿ ವಸತಿ ನಿಗಮದ ಅಡಿಯಲ್ಲಿ ಅಂದಾಜು ₹4.58 ರೂ. – ಕಳಪೆ ಕಾಮಗಾರಿಗೆ ಬೇಸತ್ ಸಾರ್ವಜನಿಕರಿಂದ ದೂರು, ಕ್ರಮ ಯಾವಾಗ..?

ಗೂಡುರ/ಅರಸಿಬೀಡ್ ಕೆರೆ ಮಾ.10

ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಗುಡೂರ ಎಸ್.ಸಿ ಗ್ರಾಮದ ಅರಸಿಬೀಡ್ ಕೆರೆ ಹತ್ತಿರ ಇರುವ ಅಲ್ಪಸಂಖ್ಯಾತರ ವಸತಿ ನಿಲಯ ಶಾಲೆಗೆ ರಾಜೀವ ಗಾಂಧಿ ವಸತಿ ನಿಗಮದ ಅಡಿಯಲ್ಲಿ ಅಂದಾಜು ₹5 ಕೋಟಿಗೂ ಹೆಚ್ಚು ಅನುದಾನದಲ್ಲಿ ವಸತಿ ಕಟ್ಟಡ ಕಾಮಗಾರಿ ಮಾಡುತ್ತಿರುವ ಕಾಮಗಾರಿಯು ಸಂಪೂರ್ಣವಾಗಿ ಕಳಪೆ ಮಟ್ಟದಲ್ಲಿ ಕೂಡಿದ್ದು.

ಕ್ಯೂರಿಂಗ್ ದೂರದ ಮಾತಾಗಿದೆ ನಮ್ಮ ಹಾಸ್ಟೇಲ್ ಲಿನ ಸಿಂಟ್ಯಾಕ್ಸ್ ನೀರು ದಿನ ನಿತ್ಯ ಖಾಲಿ ಮಾಡಿ ನಮ್ಮ ವಸತಿ ಶಾಲಾ ಮಕ್ಕಳಿಗೆ ತೀವ್ರ ತೊಂದರೆ ಉಂಟು ಮಾಡಿದ್ದಾರೆ ಎಂದು ಅಲ್ಲಿಯ ಅಡಗಿಯ ಸಹಾಯಕರ ಅಳಲಾಗಿದೆ.

ಕಾಮಗಾರಿ ಮಾಡಿರುವ ಸಿಮೆಂಟ್ ಕೈ ಬೆರಳಿನಿಂದ ಕೆರೆದರೆ ಬೀಳುತ್ತೆ ಅಂದ್ರೆ ನಾಳೆ ದಿನ ನೂರಾರು ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತೀರುವ ಗುತ್ತಿಗೆದಾರರು ಇದಕ್ಕೆ ನೇರ ಹೊಣೆಗಾರರು ಇದಕ್ಕೆ ಸಂಬಧಿಸಿದ ಗುತ್ತಿಗೆದಾರರಿಗೆ ಮತ್ತು ಅಲ್ಪ ಸಂಖ್ಯಾತರ ಉಪ ನಿರ್ದೆಶಕರಿಗೆ ಈ ಕಾಮಗಾರಿ ಕಳಪೆ ಮಟ್ಟದಲ್ಲಿ ಕಾಮಗಾರಿ ಮಾಡುತ್ತಿದಾರೆ. ಅಂತಾ ಅವರಿಗೆ ಪೋನ್ ಮುಖಾಂತರ ಈ ಕಾಮಗಾರಿಯ ಪೊಟೋ ಮತ್ತು ವಿಡಿಯೋ ಹಾಕಿ ಈ ಅಧಿಕಾರಿಗೆ ವಾಟ್ಸಪ್ ಮೂಲಕ ತಿಳಿಸಿದರು.

ಈ ಆಧಿಕಾರಿಯು ನಮಗೆ ಏನು ಉತ್ತರ ನೀಡಿದರು ಅಂದರೆ ನಾನು ಈ ಕಾಮಗಾರಿಯನ್ನು ವೀಕ್ಷಣೆ ಮಾಡಿದ್ದು ಇರುತ್ತದೆ. ಈ ಕಾಮಗಾರಿಯು ಸರಿಯಾಗಿ ಮಾಡುತ್ತಿದ್ದಾರೆ ಅಂತಾ ಈ ಅಧಿಕಾರಿಯು ಬೇಜವ್ದಾರಿಯಿಂದ ಉತ್ತರ ನೀಡಿರುತ್ತಾರೆ ಇದಕ್ಕೆ ಗುಡೂರಿನ ಸಾರ್ವಜನಿಕರು ಮಾನ್ಯ ಜಿಲಾಧಿಕಾರಿಗಳು ನವನಗರ ಬಾಗಲಕೋಟ ಇವರಲ್ಲಿ ವಿನಂತಿಯ ದೂರು ಏನೆಂದರೆ.

ಈ ಕಾಮಗಾರಿಯನ್ನು ಮಾನ್ಯ ಜಿಲ್ಲಾಧಿಕಾರಿಗಳು ಶಾಲಾ ಮಕ್ಕಳ ಹಿತದೃಷ್ಟಿಯಿಂದ ಕೂಲಂಕುಷವಾಗಿ ಪರಿಶೀಲಿಸಿ ತಪ್ಪು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸ ಬೇಕು ಎಂದು ಸಾಮಾಜಿಕ ಕಾರ್ಯಕರ್ತೆಯರಾದ ಸಹನಾ ಅಂಗಡಿ, ಆನಂದ.ಎಚ್ ವಡ್ಡರ, ದುರಗಪ್ಪ ತಳ್ಳಿಕ್ಕೆರಿ, ಚಿದಾನಂದ ಮುರಡಿ, ಕ್ರಿಷ್ಣಾ ಭೊವಿ, ಶಿವರಾಜ ಕಟ್ಟಿಮನಿ, ವೆಂಕಟೇಶ್ ಬಂಗಾಳಿಗಿಡ, ಯಮನೂರು ಚೇಳಗೇರಿ, ತಿಮ್ಮಣ್ಣ ಮುರಡಿ, ಗಣೆಶ ಬಂಗಾಳಿಗಿಡಅಂತಾ ನಮ್ಮ ದೂರು ಇರುತ್ತದೆ.

ಮಾನ್ಯರು ಈ ಕಾಮಗಾರಿಯನ್ನು ವೀಕ್ಷಣೆಗೆ ಬರದೆ ಇದ್ದಲ್ಲಿ ಈ ದೂರನ್ನು ಮಾನ್ಯ ಲೋಕಾಯುಕ್ತ ಪೋಲೀಸ್ ಅಧೀಕ್ಷಕರಲ್ಲಿ ಈ ದೂರನ್ನು ಸಲ್ಲಿಸಲಾಗುವುದು ಎಂದು ದೂರು & ಸಾರ್ವಜನಿಕವಾಗಿ ಪ್ರಕಟಣೆಗೆ ಸಲ್ಲಿಸಲಾಗುವುದು ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button