ಕ್ಯಾಮೆರಾ ಕಂಡೊಡನೆ ಶೌಚಾಲಯಕ್ಕೆ – ಓಡಿ ಅಡಗಿದ ಇಂಜಿನಿಯರ್.
ರೋಣ ಮಾ.10

ಸರ್ಕಾರಿ ಕಚೇರಿಗಳ ಕೆಲಸದ ಅವಧಿ ಮುಗಿದು ಇಡೀ ಊರೇ ಮಲಗಿದ್ದರೂ, ರೋಣದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಕಚೇರಿಯಲ್ಲಿ ಮಾತ್ರ ಭಾನುವಾರ ಮಧ್ಯರಾತ್ರಿ ಅಕ್ರಮ ದೀಪಗಳು ಉರಿಯುತ್ತಿದ್ದವು ಹಗಲಿನಲ್ಲಿ ಸಾರ್ವಜನಿಕರ ಅಹವಾಲು ಕೇಳಲು ಸೀಟಿನಲ್ಲಿ ಇರದ ಅಧಿಕಾರಿಗಳು, ಮಾರ್ಚ್ ತಿಂಗಳ ಕೋಟ್ಯಂತರ ರೂಪಾಯಿ ಬಿಲ್ ಪಾಸ್ ಮಾಡಲು ಮಧ್ಯರಾತ್ರಿ ಕಸರತ್ತು ನಡೆಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.
ದಿನಾಂಕ ಮಾರ್ಚ್ 8 ಭಾನುವಾರ ರಾತ್ರಿ ಸುಮಾರು 11 ಗಂಟೆಯ ಸಮಯ. ಅಧಿಕೃತ ರಜೆ ದಿನವಾಗಿದ್ದರೂ ಕಚೇರಿ ತೆರೆದು ಅಧಿಕಾರಿಗಳು ಬಿಲ್ ಪಾಸ್ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದ್ದರು. ಜಾಗೃತ ನಾಗರಿಕರು ಕ್ಯಾಮೆರಾ ಸಮೇತ ಕಚೇರಿ ಪ್ರವೇಶಿಸಿದಾಗ ಅಧಿಕಾರಿಗಳ ಅಸಲಿ ಬಣ್ಣ ಬಯಲಾಗಿದೆ.

ರಾಘವೇಂದ್ರ ಪುರೋಹಿತ್ (AEE):-
ಕಚೇರಿಯಲ್ಲಿದ್ದ ಫೈಲ್‌ಗಳ ರಾಶಿಯ ಮುಂದೆ ಬಿಲ್ ಸಹಿ ಮಾಡುತ್ತಿದ್ದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಶ್ನೆಗಳಿಗೆ ಉತ್ತರಿಸಲಾಗದೆ, ತಮ್ಮ ಜೊತೆ ಬಂದಿದ್ದ ಅಪರಿಚಿತ ವ್ಯಕ್ತಿಯೊಂದಿಗೆ ಐಷಾರಾಮಿ ಕಾರಿನಲ್ಲಿ ಸ್ಥಳದಿಂದ ಪರಾರಿ ಯಾದರು.
ವಿಜಯಕುಮಾರ್ ಗೌಡರ್ (AE):-
ಕ್ಯಾಮೆರಾ ಕಂಡೊಡನೆ ತಪ್ಪಿಸಿ ಕೊಳ್ಳಲು ದಾರಿ ಕಾಣದೆ ಈ ಇಂಜಿನಿಯರ್ ಕಚೇರಿಯ ಶೌಚಾಲಯದ (Toilet) ಒಳಗೆ ನುಗ್ಗಿ ಅಡಗಿಕೊಂಡಿದ್ದಾರೆ. ಸರ್ಕಾರಿ ಅಧಿಕಾರಿಯೊಬ್ಬರು ಸಾರ್ವಜನಿಕರ ಪ್ರಶ್ನೆಗೆ ಹೆದರಿ ಶೌಚಾಲಯ ಸೇರಿದ್ದು ಇಲಾಖೆಗೆ ನಾಚಿಕೆ ಗೇಡಿನ ಸಂಗತಿ ಯಾಗಿದೆ.

ಅನಿಲಕುಮಾರ್ ಗಾಢಗೊಳ್ಳಿ (ಆಪರೇಟರ್):-
ಇವರು ದಾಖಲೆಗಳನ್ನು ಮುಚ್ಚಿಡುವ ಹರಸಾಹಸ ಮಾಡುತ್ತಿದ್ದರು. ಇನ್ನು ಸ್ಥಳದಲ್ಲಿದ್ದ ಸಿಪಾಯಿ ಈರಣ್ಣ ಮಣ್ಣೇರಿ ಅವರು ಅಧಿಕಾರಿಗಳೇ ನಮ್ಮನ್ನು ಕೆಲಸಕ್ಕೆ ಕರೆಸಿದ್ದಾರೆ ಎಂದು ಅಸಲಿ ಸತ್ಯವನ್ನು ಬಾಯಿಬಿಟ್ಟಿದ್ದಾರೆ.
ದೂರು ನೀಡಿದರೂ ಎಚ್ಚೆತ್ತು ಕೊಳ್ಳದ ಜಿಲ್ಲಾ ಆಡಳಿತದ ವ್ಯವಸ್ಥೆಗೆ ತೀವ್ರ ಖಂಡನೆ:-
ವಿಶೇಷವೆಂದರೆ, ಈ ಅಧಿಕಾರಿಗಳ ನಿರಂತರ ಗೈರು ಹಾಜರಿಯ ಬಗ್ಗೆ ಕಳೆದ ಜನವರಿ 8 ಮತ್ತು ಫೆಬ್ರವರಿ 27 ರ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿ.ಪಿ.ಎಸ್ ಆಧಾರಿತ 20 ಫೋಟೋಗಳ ಸಮೇತ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು. ಇಷ್ಟಾದರೂ ಯಾವುದೇ ಕ್ರಮ ಜರುಗದಿರುವುದು ಅಧಿಕಾರಿಗಳಿಗೆ ಭ್ರಷ್ಟಾಚಾರ ನಡೆಸಲು ಮತ್ತಷ್ಟು ಕುಮ್ಮಕ್ಕು ನೀಡಿದಂತಾಗಿದೆ.

ಬಡ ರೈತರು ದಿನವಿಡೀ ಕಚೇರಿ ಮುಂದೆ ಕಾದರೂ ಸಿಗದ ಅಧಿಕಾರಿಗಳಿಗೆ, ಮಾರ್ಚ್ ಅಂತ್ಯದ ಕಮಿಷನ್ ಬಿಲ್ ಪಾಸ್ ಮಾಡಲು ಭಾನುವಾರ ಮಧ್ಯ ರಾತ್ರಿಯೇ ಸಮಯ ಸಿಗುತ್ತದೆಯೇ..?
ಈ ಕುರಿತಾದ ಅಖಂಡ ವಿಡಿಯೋ ಮತ್ತು ಜಿ.ಪಿ.ಎಸ್ ಸಾಕ್ಷ್ಯಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳು ತಕ್ಷಣವೇ ಮಧ್ಯ ಪ್ರವೇಶಿಸಿ ಈ ಭ್ರಷ್ಟ ತಂಡವನ್ನು ಅಮಾನತ್ ಗೊಳಿಸ ಬೇಕಿದೆ.

ಬಾಕ್ಸ್ ನ್ಯೂಸ್:-
ರೋಣದ ಇಂಜಿನಿಯರಿಂಗ್ ಕಚೇರಿ ಭ್ರಷ್ಟರ ಅಡ್ಡವಾಗಿದೆಯೇ..? ಮಧ್ಯರಾತ್ರಿಯೇ ಈ ಬಿಲ್ ಬಾಜಿ ದರ್ಬಾರ್ ಯಾರ ಹಿತಕ್ಕಾಗಿ..?ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಕಚೇರಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಸರ್ಕಾರಿ ವ್ಯವಸ್ಥೆಯ ನೈತಿಕತೆಗೆ ಹಿಡಿದ ಕನ್ನಡಿಯಂತಿವೆ. ಹಗಲಿನಲ್ಲಿ ರೈತರು, ಬಡವರು ಕೆಲಸಕ್ಕಾಗಿ ಬಂದಾಗ ಸೀಟಿನಲ್ಲಿ ಇಲ್ಲದ ಅಧಿಕಾರಿಗಳು, ಭಾನುವಾರ ಮಧ್ಯರಾತ್ರಿ ಕಚೇರಿಯಲ್ಲಿ ಕಳ್ಳರಂತೆ ಮಾಡುತ್ತಿದ್ದ ಕೆಲಸವಾದರೂ ಏನು..?
ಕತ್ತಲಲ್ಲಿ ಬಿಲ್ ಪಾಸ್:-
ಮಾರ್ಚ್ 8 ರ ಭಾನುವಾರ ರಜೆ ಇದ್ದರೂ, ರಾತ್ರಿ 11 ಗಂಟೆಗೆ ಕಚೇರಿ ತೆರೆದು ಬಿಲ್ ಪಾಸ್ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದ್ದು ಯಾರ ಅನುಮತಿ ಯಿಂದ..?

ಶೌಚಾಲಯದಲ್ಲಿ ಅಡಗಿದ್ದೇಕೆ..?:-
ನಮ್ಮ ರಾಷ್ಟ್ರ ಕ್ರಾಂತಿ ನ್ಯೂಸ್ ಕ್ಯಾಮೆರಾ ಕಂಡೊಡನೆ ಸಹಾಯಕ ಅಭಿಯಂತರ ವಿಜಯಕುಮಾರ್ ಗೌಡರ್ ಅವರು ಇಲಾಖೆಯ ಶೌಚಾಲಯದಲ್ಲಿ ಅಡಗಿ ಕುಳಿತದ್ದೇಕೆ..? ಸತ್ಯದ ಹಾದಿಯಲ್ಲಿ ನಡೆಯುವವರಿಗೆ ಈ ಭೀತಿ ಏತಕ್ಕೆ..?
ನಿಗೂಢ ವ್ಯಕ್ತಿಯ ಪ್ರವೇಶ:-
ಎ.ಇ.ಇ ರಾಘವೇಂದ್ರ ಪುರೋಹಿತ್ ಅವರೇ, ರಾತ್ರಿ ಹೊತ್ತು ನಿಮ್ಮ ಜೊತೆಯಲ್ಲಿದ್ದ ಆ ಬಿಳಿ ಬಟ್ಟೆಯ ವ್ಯಕ್ತಿ ಯಾರು? ಆತ ಗುತ್ತಿಗೆದಾರರ ಅಥವಾ ಗುತ್ತೇದಾರರ ಏಜೆಂಟ್ ನಾ..?

ದೂರಿಗೆ ಬೆಲೆಯಿಲ್ಲವೇ?:-
ಈಗಾಗಲೇ ಫೆಬ್ರವರಿ 27 ರ ಜನತಾ ದರ್ಶನದಲ್ಲಿ ನಿಮ್ಮ ನಿರಂತರ ಗೈರು ಹಾಜರಿಯ ಬಗ್ಗೆ 20 ಜಿ.ಪಿ.ಎಸ್ ಸಾಕ್ಷ್ಯಗಳ ಸಮೇತ ದೂರು ನೀಡಿದ್ದರೂ, ನೀವು ಬದಲಾಗದೆ ಮತ್ತೆ ರಾತ್ರಿ ಹೊತ್ತು ಇಂತಹ ಅಕ್ರಮ ದಂಧೆಗೆ ಇಳಿದಿರುವುದು ಜನ ದ್ರೋಹವಲ್ಲವೇ..?
ಸಾರ್ವಜನಿಕರ ಹಣದಲ್ಲಿ ಲಕ್ಷ ಲಕ್ಷ ಸಂಬಳ ಪಡೆಯುವ ಅಧಿಕಾರಿಗಳು, ಕೇವಲ ಕಮಿಷನ್ ಆಸೆಗಾಗಿ ಮಾರ್ಚ್ ಅಂತ್ಯದಲ್ಲಿ ಇಂತಹ ಹೈಡ್ರಾಮಾ ಮಾಡುತ್ತಿರುವುದು ಅಕ್ಷಮ್ಯ. ಸಾಕ್ಷ್ಯ ನಾಶ ಪಡಿಸಲು ಸಂಚು ರೂಪಿಸುತ್ತಿರುವ ಈ ಭ್ರಷ್ಟ ತಂಡವನ್ನು ಜಿಲ್ಲಾಧಿಕಾರಿಗಳು ಕೂಡಲೇ ಅಮಾನತ್ ಗೊಳಿಸ ಬೇಕು. ಭ್ರಷ್ಟರ ವಿರುದ್ಧದ ನಮ್ಮ ಈ ಕ್ರಾಂತಿ ನಿಲ್ಲದು. ಅಂದಪ್ಪ ರಾಮಪ್ಪ ಮಾದರಸಂಪಾದಕರು, ರಾಷ್ಟ್ರ ಕ್ರಾಂತಿ ನ್ಯೂಸ್, ರೋಣ.

