ಶ್ರೀಶಾರದಾಶ್ರಮದಿಂದ ಕೊರಮ ಜನಾಂಗದ – ಅಲೆಮಾರಿಗಳಿಗೆ ದಿನಸಿ ಕಿಟ್ ವಿತರಣೆ.

ಚಳ್ಳಕೆರೆ ಮಾ.14

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮ ದಿಂದ ನಗರದ ಹೊರ ವಲಯದ ದುರ್ಗಾವರ ರಸ್ತೆಯಲ್ಲಿರುವ ಕೊರಮ ಜನಾಂಗದ ಇಪ್ಪತ್ತು ಅಲೆಮಾರಿ ಕುಟುಂಬಗಳಿಗೆ ದಿನ ಬಳಕೆಯ ದಿನಸಿ ಕಿಟ್ ವಿತರಿಸಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಶ್ರೀಶಾರದಾಶ್ರಮದ ಸದ್ಭಕ್ತರ ಉದಾರ ಆರ್ಥಿಕ ನೆರವಿನಿಂದ ಆರ್ಥಿಕವಾಗಿ ಹಿಂದುಳುದಿರುವ ಕೊರಮ ಜನಾಂಗದ ಇಪ್ಪತ್ತು ಅಲೆಮಾರಿ ಕುಟುಂಬಗಳಿಗೆ ದಿನಸಿ ವಸ್ತುಗಳಾದ ರಾಗಿ, ಗೋಧಿ, ತೊಗರಿಬೇಳೆ, ಬೆಲ್ಲ, ಎಣ್ಣೆ, ಸೋಪ್, ಬಟ್ಟೆಗಳನ್ನು ವಿತರಿಸಿ ಜೀವ ಶಿವ ಸೇವಾ ಕಾರ್ಯವನ್ನು ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ನೆರವನ್ನು ನೀಡಲಾಗುವುದು ಎಂದರು.

ಬಾಪೂಜಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಾಂಶುಪಾಲರಾದ ಡಾ, ಸಿ.ಟಿ ಬಸವರಾಜಪ್ಪ ಮಾತನಾಡಿ ಶ್ರೀಶಾರದಾಶ್ರಮದ ಸದ್ಭಕ್ತರ ನೆರವಿನಿಂದ ವಿತರಿಸಲಾದ ದಿನಸಿ ವಸ್ತುಗಳನ್ನು ಪೂರ್ಣವಾಗಿ ಸದುಪಯೋಗ ಪಡಿಸಿಕೊಂಡು ಉತ್ತಮ ಆರೋಗ್ಯವಂತರಾಗಿ ಸಾರ್ಥಕ ಜೀವನ ನಡೆಸುವಂತೆ ಹಿತ ವಚನ ಹೇಳಿದರು.

ಕೊರಮ ಜನಾಂಗದ ಅಲೆಮಾರಿಗಳಿಗೆ ದಿವ್ಯತ್ರಯರ ಭಾವ ಚಿತ್ರಗಳನ್ನು ವಿತರಿಸಿದ ಕ್ಷಣಗಳು…🌺💐

ಪ್ರೀತಿಯ ಮಕ್ಕಳಿಗೆ ಪೆನ್ ವಿತರಿಸಿದ ಕ್ಷಣ… 🙏💐

ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಡಾ, ಲಾವಣ್ಯ, ಶ್ರೀಮತಿ ಸರಸ್ವತಿ ಪಾಂಡು, ಗಂಗಾಧರಶೆಟ್ಟಿ, ಪ್ರೇಮಲೀಲಾ, ಗೀತಾ ಪ್ರಕಾಶ್, ನಾಗರಾಜ್, ಅನುಸೂಯ ರಾಘವೇಂದ್ರ, ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ, ಸಂತೋಷ್, ಸುಧಾಮಣಿ, ವಿಶಾಲಾಕ್ಷಿ ಪುಟ್ಟಣ್ಣ, ಅಂಬುಜಾ, ಕವಿತಾ, ಸರಸ್ವತಿ, ಡಾ, ಭೂಮಿಕಾ, ವನಜಾಕ್ಷಿ, ರಶ್ಮಿ ವಸಂತ, ಯಶಸ್ವಿ, ವಿದ್ಯಾ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಹೊನ್ನೂರಪ್ಪ, ಯುವರಾಜ್, ರವಿ, ಭೂತಪ್ಪ, ರಮೇಶ್ ಸೇರಿದಂತೆ ಕೊರಮ ಜನಾಂಗದ ಅಲೆಮಾರಿಗಳು ಉಪಸ್ಥಿತರಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ. ‌ ‌ ‌

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button