ಶಾರದಾಮಾತೆಯವರು ಶಿಷ್ಯರು ಮತ್ತು ಭಕ್ತರ ಮೇಲೆ ಹರಿಸುತ್ತಿದ್ದ ಮಾತೃ ಪ್ರೇಮ ಅನಂತವಾದದ್ದು – ಜಿ.ಯಶೋಧಾ ಪ್ರಕಾಶ್.
ಚಳ್ಳಕೆರೆ ಮಾ.14

ಶ್ರೀಮಾತೆ ಶಾರದಾದೇವಿಯವರು ಸಂನ್ಯಾಸಿ ಶಿಷ್ಯರು ಮತ್ತು ಭಕ್ತರ ಮೇಲೆ ಹರಿಸುತ್ತಿದ್ದ ಮಾತೃ ಪ್ರೇಮ ಮತ್ತು ಅವರಿಗೆ ನೀಡುತ್ತಿದ್ದ ಮಾರ್ಗದರ್ಶನ ಅತ್ಯಂತ ಅದ್ಭುತವಾದದ್ದು ಎಂದು ಚಳ್ಳಕೆರೆಯ ಶಿವ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ತಿಳಿಸಿದರು.

ಶಿವ ನಗರದ ತಮ್ಮ ಜಿ.ವಿ.ಎಸ್ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ ಮಾತನಾಡುತ್ತಿದ್ದರು.

ಈ ಸತ್ಸಂಗದ ಪ್ರಯುಕ್ತ ಸದ್ಭಕ್ತರು ಮತ್ತು ಯತೀಶ್ ಎಂ ಸಿದ್ದಾಪುರ ಅವರಿಂದ ವಿಶೇಷ ಭಜನೆ, ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಕಲಿಕಾ ತರಗತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.

ಕಾರ್ಯಕ್ರಮದಲ್ಲಿ ಶ್ರೀಮತಿ ಶಾಂತಮ್ಮ ಶಾಂತವೀರಪ್ಪ, ರಶ್ಮಿ ರಮೇಶ್, ವಿಜಯಲಕ್ಷ್ಮೀ, ದ್ರಾಕ್ಷಾಯಣಿ, ಜಯಮ್ಮ, ಸುಧಾಮಣಿ, ಸೌಮ್ಯ ಪ್ರಸಾದ್, ವೀರಮ್ಮ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಕವಿತಾ, ನಾಗರತ್ನಮ್ಮ, ಶಾರದಾಮ್ಮ, ಸಂಗೀತ ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

