ಪವಿತ್ರ ರಂಜಾನ್ ಹಬ್ಬದ ನಿಮಿತ್ತವಾಗಿ – ರಂಜಾನ್ ಕಿಟ್ ವಿತರಣೆ.

ವಿಜಯಪುರ ಮಾ.14

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮುಸ್ಲಿಂ ನೌಕರರ ಕಲ್ಯಾಣ ಸಂಘ (ರಿಜಿಸ್ಟರ್ ನಂ-450/2003) ಬೆಂಗಳೂರು, ಇದರ ಅಡಿಯಲ್ಲಿ ವಿಜಯಪುರ ವೃತ್ತದ ಕವಿಪ್ರನಿನಿ/ಹೆಸ್ಕಾಂ ಮುಸ್ಲಿಂ ನೌಕರರು ಸೇರಿ ಕೊಂಡು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಬಡ ಹಾಗೂ ಅಗತ್ಯವಿರುವ ಕುಟುಂಬಗಳಿಗೆ ಪವಿತ್ರ ರಂಜಾನ್ ತಿಂಗಳ ಅಂಗವಾಗಿ 55 ರಂಜಾನ್ ಕಿಟ್ ಗಳನ್ನು ವಿತರಣೆ ಮಾಡಿದರು.

ರಂಜಾನ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮೇವಾ ಸಂಘದ ಮೂಲ ಧ್ಯೇಯವಾದ ಮಾನವೀಯತೆಯ ಸೇವೆಯತ್ತ ಒಂದು ಹೆಜ್ಜೆ ಸದಾ ಮುಂದೆ ಎಂಬ ಸಂದೇಶವನ್ನು ವಿಜಯಪುರ ವೃತ್ತದ ಎಲ್ಲಾ ಹಿರಿಯ ಮೇವಾ ನಾಯಕರು ಹಾಗೂ ಯುವ ನೌಕರರ ಸಹಾಯ ಮತ್ತು ಸಹಕಾರದಿಂದ ಸಾಧ್ಯವಾಗಿರುತ್ತದೆ ಎಂದು ಮೇವಾ ಸಂಘದ ವಿಜಯಪುರ ವೃತ್ತದ ಸಂಘಟನಾ ಕಾರ್ಯದರ್ಶಿಗಳಾದ ಜನಾಬ್ ಮೈನೂದ್ದೀನ್ ಜಾಗೀರದಾರ ಹಾಗೂ ಕೇಂದ್ರ ಸಮಿತಿ ಸದಸ್ಯರಾದ ಜನಾಬ್ ಇಬ್ರಾಹಿಂ ನಾಯ್ಕೋಡಿ ಅವರು ಮಾತನಾಡಿ ಸಂತೋಷ ವ್ಯಕ್ತಪಡಿಸಿದರು. ಹಾಗೂ ಮೇವಾ ಕೇಂದ್ರ ಸಮಿತಿ ಪರವಾಗಿ ಧನ್ಯವಾದಗಳನ್ನು ಎಲ್ಲಾ ಸದಸ್ಯರಿಗೆ ಸಮರ್ಪಿಸಿದರು.

ನಮ್ಮ ಈ ಅಳಿಲು ಸೇವೆಯನ್ನು ಪರಮದಯಾಮಯನು ಕರುಣಾಮಯಿಯು, “ಸರ್ವಶ್ರೇಷ್ಟನಾದ ಅಲ್ಲಾಹು” ನಮ್ಮ ಪಾಪಗಳನ್ನು ಮನ್ನಿಸಲಿ ಎಂದು ಹಾಗೂ ದಾನ ನೀಡಿದ ಎಲ್ಲಾ ಪ್ರೀತಿಪಾತ್ರರಿಗೆ ಆರೋಗ್ಯ, ಆಯಸ್ಸು, ಸಂಪತ್ತನ್ನು ನೀಡಲಿ ಎಂದು ಜನಾಬ್ ಲತೀಫ್ ಇನಾಮದಾರ ದುವಾ ಮಾಡಿದರು.

ಕಾರ್ಯಕ್ರಮದಲ್ಲಿ ಜನಾಬ್ ವಾಹೀದ್ ಜಾಗೀರದಾರ್ ಕಾರ್ಯನಿರ್ವಾಹಕ ಅಭಿಯಂತರರು, ಜನಾಬ್ ಅಕ್ಬರ್ ಭಾಷಾ ಕುರಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಜನಾಬ್ ಮೆಹಬೂಬ್ ಮನಗೂಳಿ, ಜನಾಬ್ ಶಹಭಾಸ್ ಪಟೇಲ್ ಸಹಾಯಕ ಅಭಿಯಂತರರು, ಜನಾಬ್ ಅಯ್ಯೂಬ್ ಮನಗೂಳಿ ಅಧ್ಯಕ್ಷರು ಸ್ಥಳೀಯ ಸಮಿತಿ ವಿಜಯಪುರ, ಜನಾಬ್ ಎಮ್ ಎಮ್ ಇನಾಮದಾರ್, ಜನಾಬ್ ಎ.ಬಿ ಮುಜಾವರ್, ಜನಾಬ್ ಕಂದಗಲ್ ಸಾಬ್, ಜನಾಬ್ ಇರ್ಫಾನ್ ಪಟೇಲ್ ಜನಾಬ್ ಎನ್ ಡಿ ಮುಲ್ಲಾ, ಜನಾಬ್ ಆರ್ ಕೆ ಮಕಾನದಾರ, ಜನಾಬ್ ಎಚ್ ಎ ನದಾಫ್, ಜನಾಬ್ ಎಂ ಐ ಪಾರಾಸ್, ಜನಾಬ್ ಎಮ್ ಎಮ್ ಇನಾಮದಾರ್, ಜನಾಬ್ ಅಸ್ಲಂ ಬಪ್ಪರಗಿ, ಅಯಾಜ್ ಸಾರವಾಡ, ಲತೀಫ್ ಇನಾಮದಾರ್, ವಿಜಯಪುರ ಜಿಲ್ಲೆಯ ಎಲ್ಲಾ ಮೇವಾ ಸದಸ್ಯರು ಭಾಗವಹಿಸಿದ್ದರು.

ವರದಿ:ಜಿ.ಎನ್ ಬೀರಗೊಂಡ (ಮುತ್ತು)

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button