ರಾಷ್ಟ್ರ ಕ್ರಾಂತಿ ಎಕ್ಸ್‌ಕ್ಲೂಸಿವ್ ಸಮವಸ್ತ್ರದಲ್ಲೇ ಕುಡಿದು ತೂರಾಡಿದ ಪವರ್‌ಮ್ಯಾನ್ – ಸರ್ಕಾರದ ಆದೇಶಕ್ಕೂ ಕವಡೆ ಕಾಸಿನ ಬೆಲೆ ಇಲ್ಲವೇ.

ಬೆಳವಣಿಕೆ ಮಾ.15

ಸರ್ಕಾರಿ ಕೆಲಸ ಅಂದ್ರೆ ಸಾಕು, ಕೆಲವು ನೌಕರರಿಗೆ ಎಲ್ಲಿಲ್ಲದ ಉದಾಸೀನ. ಇನ್ನು ಕೆಲವರಿಗಂತೂ ಕರ್ತವ್ಯಕ್ಕಿಂತ ಕುಡಿತವೇ ಮುಖ್ಯ ಎಂಬಂತಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ರೋಣ ತಾಲೂಕಿನ ಬೆಳವಣಿಕಿ ಗ್ರಾಮದಲ್ಲಿ ಹೆಸ್ಕಾಂ (HESCOM) ನೌಕರನೊಬ್ಬ ಫುಲ್ ಕುಡಿದು ಸಾರ್ವಜನಿಕರ ಕೆಂಗಣ್ಣಿಗೆ ಗುರಿ ಯಾಗಿದ್ದಾನೆ.

ಏನಿದು ಘಟನೆ..?:-

ಬೆಳವಣಿಕಿ ಗ್ರಾಮದ ಸವಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ತವ್ಯಕ್ಕೆ ನಿಯೋಜನೆ ಗೊಂಡಿರುವ ಕಿರಿಯ ಪವರ್‌ಮ್ಯಾನ್ ಎಸ್. ಬಿ ಹುಬ್ಬಳ್ಳಿ ಎಂಬಾತ, ಕೆ.ಇ.ಬಿ ಸಮವಸ್ತ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ಮದ್ಯ ಸೇವಿಸಿ ಗ್ರಾಮದಲ್ಲಿ ಅಲೆದಾಡುತ್ತಿದ್ದಾನೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಕೈಯಲ್ಲಿ ಸರ್ಕಾರಿ ಆದೇಶದ ಪತ್ರಗಳನ್ನು ಹಿಡಿದು ಕೊಂಡು, ಕುಡಿದ ಅಮಲಿನಲ್ಲಿ ತೂರಾಡುತ್ತಿರುವ ಈತನ ವರ್ತನೆ ಕಂಡು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

ಈಗಾಗಲೇ ನೋಟಿಸ್ ನೀಡಿದ್ದರೂ ಬದಲಾಗದ ನೌಕರವಿದ್ಯುತ್ ಸರಬರಾಜಿನಂತಹ ಅಪಾಯಕಾರಿ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಸದಾ ಎಚ್ಚರದಿಂದಿರ ಬೇಕು.

ಆದರೆ, ಈ ಎಸ್.ಬಿ ಹುಬ್ಬಳ್ಳಿ ಎಂಬಾತ ತನ್ನ ದೈನಂದಿನ ಕೆಲಸಗಳಲ್ಲಿ ಸುಧಾರಣೆ ಕಾಣದ ಕಾರಣ ಮತ್ತು ಕಾರಣ ಕೇಳುವ ನೋಟಿಸ್‌ಗಳಿಗೆ ಸರಿಯಾದ ಉತ್ತರ ನೀಡದ ಕಾರಣ, ಈತನನ್ನು ಸ್ಥಳಾಂತರ ಮಾಡಲಾಗಿತ್ತು.

ಆದರೂ ತನ್ನ ಚಾಳಿ ಬಿಡದ ಈ ಪವರ್‌ಮ್ಯಾನ್ ಈಗ ಜನ ವಸತಿ ಪ್ರದೇಶದಲ್ಲಿ ಕುಡಿದು ಸಾರ್ವಜನಿಕರ ಶಾಂತಿ ಭಂಗ ಉಂಟು ಮಾಡುತ್ತಿದ್ದಾನೆ.

ಅಪಾಯಕ್ಕೆ ಆಹ್ವಾನ ನೀಡುತ್ತಿದ್ದಾರಾ ಅಧಿಕಾರಿಗಳು..?:-

ವಿದ್ಯುತ್ ಲೈನ್‌ಗಳಲ್ಲಿ ಕೆಲಸ ಮಾಡುವಾಗ ಮದ್ಯಪಾನ ಮಾಡುವುದು ತನಗಷ್ಟೇ ಅಲ್ಲದೆ ಸಾರ್ವಜನಿಕರ ಜೀವಕ್ಕೂ ಕುತ್ತು ತರುವ ವಿಷಯ. ಇಷ್ಟೆಲ್ಲಾ ಹೈಡ್ರಾಮಾ ನಡೆಯುತ್ತಿದ್ದರೂ ಮೇಲಧಿಕಾರಿಗಳು ಯಾಕೆ ಸುಮ್ಮನಿದ್ದಾರೆ? ಇಂತಹ ಬೇಜವಾಬ್ದಾರಿ ನೌಕರನನ್ನು ಕೂಡಲೇ ಅಮಾನತು (Suspend) ಮಾಡಬೇಕು ಎಂದು ಸ್ಥಳೀಯರು ‘ರಾಷ್ಟ್ರ ಕ್ರಾಂತಿ ನ್ಯೂಸ್’ ಮೂಲಕ ಆಗ್ರಹಿಸಿದ್ದಾರೆ.

ಇನ್ನಾದರೂ ಸಂಬಂಧಪಟ್ಟ ಹೆಸ್ಕಾಂ ಅಧಿಕಾರಿಗಳು ಎಚ್ಚೆತ್ತು ಕೊಂಡು, ಈ ಕುಡುಕ ಪವರ್‌ ಮ್ಯಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರಾ? ಕಾಯ್ದು ನೋಡ ಬೇಕಿದೆ…

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button