‘ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿ’ ಹಾಗೂ – ‘ಟ್ಯಾಲೆಂಟ್ ಅವಾರ್ಡ್ ಸ್ಕಾಲರ್ಶಿಪ್’ ಪ್ರಧಾನ ಸಮಾರಂಭ.
ಮುದ್ದೇಬಿಹಾಳ ಮಾ.30

“ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಾಲಕರು ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರುವುದನ್ನು ಕೈ ಬಿಡಬೇಕು. ಮಕ್ಕಳನ್ನು ಕೇವಲ ಅಂಕ ತುಂಬುವ ಚೀಲವನ್ನಾಗಿ ಮಾಡುವ ಮನೋಭಾವದಿಂದ ಹೊರಬಂದು, ಅವರಲ್ಲಿ ಜ್ಞಾನ ಮತ್ತು ಸಾಧನೆಯ ಹಸಿವನ್ನು ಬೆಳೆಸಬೇಕು,” ಎಂದು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕರಾದ ಡಾ. ಎಂ.ಎಂ ಬೆಲಗಲ್ಲ ಅವರು ಮಾರ್ಮಿಕವಾಗಿ ನುಡಿದರು.
ಇಲ್ಲಿನ ತಂಗಡಗಿ ರಸ್ತೆಯ ಶಿವಾಚಾರ್ಯ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಭಾನುವಾರ ಸ್ವಾಮಿ ವಿವೇಕಾನಂದ ಇಂಟರ್ನ್ಯಾಷನಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ವತಿಯಿಂದ ಹಮ್ಮಿಕೊಂಡಿದ್ದ ‘ಚಾಲೆಂಜ್ ನವೋದಯ ಕೋಚಿಂಗ್ ಕ್ಲಾಸಸ್’, ‘ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿ’ ಹಾಗೂ ‘ಟ್ಯಾಲೆಂಟ್ ಅವಾರ್ಡ್ ಸ್ಕಾಲರ್ಶಿಪ್’ ಪ್ರಧಾನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.
ಅಂಕಕ್ಕಿಂತ ಜ್ಞಾನಕ್ಕೆ ಆದ್ಯತೆ:-
ನವೋದಯ, ಸೈನಿಕ (RMSC), ಆಳ್ವಾಸ್ ಹಾಗೂ ಮೊರಾರ್ಜಿ ಶಾಲೆಗಳ ಪ್ರವೇಶ ಪರೀಕ್ಷೆಗಳಲ್ಲಿ ನೂರಕ್ಕೆ ನೂರು ಅಂಕ ಗಳಿಸಿದರೂ ಸೀಟುಗಳ ಲಭ್ಯತೆ ಮಿತವಾಗಿರುತ್ತದೆ. ಆದ್ದರಿಂದ ಪಾಲಕರು ಕೇವಲ ಫಲಿತಾಂಶದ ಹಿಂದೆ ಬೀಳದೆ, ಮಕ್ಕಳಲ್ಲಿ ಕೌಶಲ್ಯ ಮತ್ತು ಜ್ಞಾನ ವೃದ್ಧಿಗೆ ಸಹಕರಿಸ ಬೇಕು. ಸಂಸ್ಕಾರಯುತ ಶಿಕ್ಷಣದೊಂದಿಗೆ ತಂದೆ-ತಾಯಿಯನ್ನು ಗೌರವಿಸುವುದನ್ನು ಕಲಿಯಬೇಕು ಎಂದು ಅವರು ಕಿವಿಮಾತು ಹೇಳಿದರು.
ಲಕ್ಷಾಂತರ ರೂಪಾಯಿ ಸ್ಕಾಲರ್ಶಿಪ್ ಘೋಷಣೆ:-
ಪಶು ವೈದ್ಯರಾದ ಡಾ, ಸುರೇಶ್ ಭಜಂತ್ರಿ ಮಾತನಾಡಿ, ವಿದ್ಯಾರ್ಥಿಗಳು ಗುರಿ ಮುಟ್ಟುವ ಕಡೆಗೆ ದೃಢವಾದ ಯೋಜನೆಯನ್ನು ಹೊಂದಿರಬೇಕು ಎಂದರು. ಎಸ್.ಎನ್.ಡಿ. ಶಾಲೆಯ ಅಧ್ಯಕ್ಷರಾದ ಮಂಜುನಾಥ ಕೊಪ್ಪ ಮಾತನಾಡಿ, ಬಡ ಮತ್ತು ಪ್ರತಿಭಾವಂತ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು ನಮ್ಮ ಸಂಸ್ಥೆಯ ಆಶಯ. ಇದಕ್ಕಾಗಿ ಐದು ಲಕ್ಷ ರೂಪಾಯಿಗಳ ಸ್ಕಾಲರ್ಶಿಪ್ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ನಮಗೆ ಹಣದ ಉಳಿತಾಯಕ್ಕಿಂತ ದೇಶದ ಬದಲಾವಣೆ ಮುಖ್ಯವಾಗಿದೆ ಎಂದು ತಿಳಿಸಿದರು.
ದಿವ್ಯ ಸಾನಿಧ್ಯ:-
ಶರಣಸೋಮನಾಳದ ಬಸವಲೀಗೇಶ್ವರ ಮಠದ ಪರಮ ಪೂಜ್ಯ ಷ.ಬ್ರ. ಶ್ರೀ ಶಿವಪುತ್ರ ಮಹಾಸ್ವಾಮಿಗಳು, ಕವಡಿಮಟ್ಟಿ ಹಿರೇಮಠದ ಶ್ರೀ ಬಸವಪ್ರಭು ಮಹಾ ಸ್ವಾಮಿಗಳು ಹಾಗೂ ದುರ್ಗಾದೇವಿ ಆಶ್ರಮದ ಉಪಾಸಕರಾದ ಶ್ರೀ ಲಾಲಲಿಂಗೇಶ್ವರ ಶರಣರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಾಧಕರಿಗೆ ಪ್ರಶಸ್ತಿ ಗೌರವ:-
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ‘ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಪ್ರಮುಖ ಪುರಸ್ಕೃತರು:-
ಹೋರಾಟ ಕ್ಷೇತ್ರದಲ್ಲಿ ಪ್ರಶಾಂತ್ ಕಾಳೆ, ಮಾಧ್ಯಮ ಕ್ಷೇತ್ರದಲ್ಲಿ ಪತ್ರಕರ್ತ ಬಸವರಾಜ ಈ. ಕುಂಬಾರ (ಚವನಭಾವಿ), ದೇಶ ಸೇವೆಯಲ್ಲಿ ಸೈನಿಕ ಬಸವರಾಜ ಎಸ್. ಶಿಕ್ಷಣ ಕ್ಷೇತ್ರದ ಪುರಸ್ಕೃತರು: ಪಿ.ಪಿ ಮುರಡಿ, ಡಾ, ಎಸ್.ಎಸ್ ಒಡೆಯರ್, ಬಸಮ್ಮ ಪಟ್ಟಣಶೆಟ್ಟಿ, ಶಾಂತಾ ಎಚ್, ಶಾಮಿಮಬಾನು ತೆಲಸಂಗ, ಮಹಮ್ಮದಯೂಸುಫ್ ಅವಟಿ, ಅರವಿಂದ್ ಬಿರಾದಾರ, ಜಿ.ವಿ ಹಾದಿಮನಿ, ಚಾಮುಂಡೇಶ್ವರಿ ಹಿರೇಮಠ, ಬಸವರಾಜ ಕಾಳಪ್ಪನವರ, ಎಂ.ವೈ ಕಳ್ಳಿಮನಿ, ಶರಣಮ್ಮ ಬಿರಾದಾರ, ಅಂಬಿಕಾ ಕಾರಕೊಪ್ಪಗೋಳ, ದೀಪಾ ಕೇಶ್ವಾಪೂರ, ರವಿ ಲಮಾಣಿ, ಬಸವರಾಜ್ ಮೂಲಿಮನಿ, ಆಯೇಷಾ ನದಾಫ್, ಕೆ.ಎಂ. ಲಮಾಣಿ, ಪಿ.ಎಂ ಕೊಪ್ಪದ.
ಟ್ಯಾಲೆಂಟ್ ಅವಾರ್ಡ್ ವಿಜೇತರು:-
ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 200 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು.
4 ನೇ. ತರಗತಿ:-
ಸಾನಿಧ್ಯಾ (ಪ್ರಥಮ), ಬೃಂದಾ ಅಲ್ಲಾಪುರ ಹಾಗೂ ಅಭಿಜ್ಞಾ (ದ್ವಿತೀಯ), ಅನ್ವಿತಾ ರಕ್ಕಸಗಿ (ತೃತೀಯ).
5 ನೇ. ತರಗತಿ:-
ಸಾಕ್ಷಿ ವಡಗೇರಿ (ಪ್ರಥಮ), ಶಶಾಂಕ್ ಪಾಟೀಲ್ (ದ್ವಿತೀಯ), ವೀರೇಶ್ ಜಾಲಹಳ್ಳಿ (ತೃತೀಯ).ವೇದಿಕೆಯಲ್ಲಿ ಎಸ್.ಎನ್.ಡಿ. ನ್ಯಾಷನಲ್ ಶಾಲೆ ಅಧ್ಯಕ್ಷ ಎಂ.ಎಸ್. ಕೊಪ್ಪ, ನಿವೃತ್ತ ಪ್ರಾಧ್ಯಾಪಕ ಎಸ್.ಎಸ್. ಹೂಗಾರ, ಇಸ್ಮಾಯಿಲ್ ಮನಿಯಾರ, ಚಾಲೆಂಜ್ ನವೋದಯ ಕೋಚಿಂಗ್ ಶಾಲೆ ಅಧ್ಯಕ್ಷ ವೀರೇಶ ಹವಾಲ್ದಾರ, ಮುಖ್ಯಗುರು ವಿಜಯಲಕ್ಷ್ಮಿ ಹವಾಲ್ದಾರ ಹಾಗೂ ವೀರೇಶ ಗುರುಮಠ ಉಪಸ್ಥಿತರಿದ್ದರು. ಇಸ್ಮಾಯಿಲ್ ಮನಿಹಾರ ಕಾರ್ಯಕ್ರಮ ನಿರೂಪಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಬಸವರಾಜ. ಸಂಕನಾಳ ಮುದ್ದೇಬಿಹಾಳ

