ಕಲ್ಪತರು ನಾಡು ತುಮಕೂರು ನುಡಿ ಸಡಗರ – ಸಂಭ್ರಮದಿಂದ ಜರುಗಿತು.

ತುಮಕೂರು ಮಾ.30

ಚೇತನ ಫೌಂಡೇಶನ್ ಹಾಗೂ ಗಂಧದಗುಡಿ ಕನ್ನಡ ಸಂಘ ಬೆಂಗಳೂರು ಇವರು ಸಿದ್ದಾರ್ಥ ಕಾಲೇಜು ತುಮಕೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ಉದ್ಘಾಟಕರದ ಹಿರಿಯ ಸಾಹಿತಿ ಡಾ, ಜಯಪ್ಪ ಹೊನ್ನಾಳಿ (ಜಯಕವಿ) ಮಾತನಾಡಿ ಕನ್ನಡ ಭಾಷೆಯ ಪ್ರಗತಿ, ಅದರ ಪರಂಪರೆ ಮತ್ತು ಭವಿಷ್ಯದ ಕುರಿತು ಪ್ರಬುದ್ಧ ಚಿಂತನೆಗಳನ್ನು ಹಂಚಿ ಕೊಳ್ಳುವ ವೇದಿಕೆಯಾಗಿ ಎಂದು ಇದೇ ವೇಳೆ ನುಡಿದರು.

ಈ ಸಂದರ್ಭದಲ್ಲಿ “ಚುಕು ಬುಕು ರೈಲು” ಮಕ್ಕಳ ಕವನ ಸಂಕಲನದ ಲೋಕಾರ್ಪಣೆ ಗೊಂಡಿತು. ಮಕ್ಕಳಲ್ಲಿ ಕನ್ನಡ ಭಾಷೆಯ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ರಚಿಸಲಾದ ಈ ಕೃತಿ ಸಾಹಿತ್ಯಾಸಕ್ತರಲ್ಲಿ ವಿಶೇಷ ಗಮನ ಸೆಳೆಯಿತು. ಡಾ, ಚಂದ್ರಶೇಖರ ಮಾಡಲಗೇರಿ ಪ್ರಸ್ತಾವಿಕವಾಗಿ ಮಾತನಾಡಿದರು.

ಕೃತಿ ಅನಾವರಣ ಮಾಡಿದ ಡಾ, ಪ್ರಕಾಶ ಗ ಖಾಡೆ ಮಾತನಾಡಿ ಕನ್ನಡ ಭಾಷೆ ಮತ್ತು ಸಾಹಿತ್ಯವು ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಶ್ರೀಮಂತ ಪರಂಪರೆ. ಈ ಸಾಹಿತ್ಯವನ್ನು ಬೆಳಸಲು ಅನೇಕ ಕವಿಗಳು ಮತ್ತು ಲೇಖಕರು ಮಹತ್ತರವಾದ ಕೊಡುಗೆ ನೀಡಿದ್ದಾರೆ. ಅವರ ಕೃತಿಗಳು ಕನ್ನಡ ಭಾಷೆಯ ಗೌರವವನ್ನು ಹೆಚ್ಚಿಸಿವೆ.

ಕನ್ನಡ ಸಾಹಿತ್ಯವು ಕೇವಲ ಮನರಂಜನೆಗೆ ಮಾತ್ರವಲ್ಲ, ಸಮಾಜದ ಸಮಸ್ಯೆಗಳು, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುವ ಪ್ರಮುಖ ಸಾಧನವಾಗಿದೆ. ಈ ಕಾರಣದಿಂದಲೇ ಕನ್ನಡ ಸಾಹಿತ್ಯವು ದೇಶದ ಪ್ರಮುಖ ಸಾಹಿತ್ಯಗಳಲ್ಲಿ ಒಂದಾಗಿದೆ. ಇಂತಹ ಮಕ್ಕಳ ಕವನ ಸಂಕಲನ ವಿದ್ಯಾರ್ಥಿ ದೆಸೆಯಿಂದಲೇ ಓದುವ ಹವ್ಯಾಸ ರೂಢಿಸಿ ಕೊಳ್ಳುವುದರಿಂದ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿ ಕೊಳ್ಳಲು ಸಾಧ್ಯ ಎಂದರು.

ಬಿ. ರಂಗಸ್ವಾಮಿ ಘನ ಅಧ್ಯಕ್ಷತೆ ವಹಿಸಿದ್ದರು. ಕವನ ಸಂಕಲನದ ಕೃತಿಕಾರರಾದ ಸಂಗಮನಾಥ ಪಿ ಸಜ್ಜನ, ಬೆಳಕು ಟ್ರಸ್ಟ್ ಅಧ್ಯಕ್ಷ ಅಣ್ಣಪ್ಪ ಮೇಟಿ ಗೌಡ, ಎಲ್ ಐ ಲಕ್ಕಮ್ಮನವರ್, ರಮಾ ಆರ್, ಮಲ್ಲಿಕಾರ್ಜುನ ಹಿರೇಮಠ, ಮಲ್ಲಿಕಾರ್ಜುನ ಸ್ವಾಮಿ, ಬಾವುಟ ಬಸವರಾಜು. ಕೆಎಸ್ ವೀರೇಶ್, ರಾಜೇಂದ್ರ ಕುಮಾರ ಮಠ, ಚಂದ್ರಕಾಂತ್ ಬಿರಾದರ್, ಲೇಖಕ ಡಾ, ಬಿ ತೇಜಸ್ವಿ ಕಿರಣ್, ಜ್ಯೋತಿ ಶ್ರೀನಿವಾಸ್, ಮನೋಹರ ವಾಲಗದ, ಸೇರಿದಂತೆ ಸಿದ್ದಗಂಗಾ ರಾಷ್ಟ್ರೀಯ ಶಿಕ್ಷಣ ಸಿರಿ ಪ್ರಶಸ್ತಿ ಪುರಸ್ಕೃತರು, ಸಿದ್ದಗಂಗಾ ರಾಷ್ಟ್ರೀಯ ಸೇವಾ ಸ್ಪೂರ್ತಿ ಪ್ರಶಸ್ತಿ ಪುರಸ್ಕೃತರು, ವೀರರಾಣಿ ಕಿತ್ತೂರು ಚೆನ್ನಮ್ಮ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು, ಗುಬ್ಬಿ ವೀರಣ್ಣ ರಂಗ ಕಲಾ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು, ಸೇರಿದಂತೆ ನಾಡಿನ ಸಾಹಿತ್ಯ ಅಭಿಮಾನಿಗಳು ಕನ್ನಡ ಆಸಕ್ತರು ಕವಿ ಮನಸುಗಳು ಸೇರಿದಂತೆ ಇತರರು ಸಾರ್ವಜನಿಕರು ಉಪಸ್ಥಿತರಿದ್ದರು.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button