ಕವಿತೆ ಕವಿಯ ಅಂತರಾತ್ಮದ ಅಭಿವ್ಯಕ್ತಿ – ಸಾಹಿತಿ ಎನ್.ಎಂ ರವಿಕುಮಾರ್.
ಕಾನ ಹೊಸಹಳ್ಳಿ ಮಾ.30

ಕವಿತೆ ಕವಿಯ ಅಂತರಾತ್ಮದ ಅಭಿವ್ಯಕ್ತಿ ಎಂದು ಸಾಹಿತಿ ಎನ್.ಎಂ ರವಿಕುಮಾರ್ ಎಂ.ಬಿ ಅಯ್ಯನಹಳ್ಳಿ ಹೇಳಿದರು ಅವರು ಶನಿವಾರ ದಂದುಕನ್ನಡ ಸಾಹಿತ್ಯ ಪರಿಷತ್ತು ಭವನ. ಹೊಸಹಳ್ಳಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು. ಹೋಬಳಿ ಘಟಕ ಹೊಸಹಳ್ಳಿ ವತಿಯಿಂದ ದತ್ತಿ ಉಪನ್ಯಾಸ ಮತ್ತು ಕವಿಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಎನ್.ಎಂ ರವಿಕುಮಾರ್. ಸಾಹಿತಿಗಳು. ಎಂ.ಬಿ ಅಯ್ಯನಹಳ್ಳಿ ರವರು ಮಾತನಾಡುತ್ತಾ “ಕವಿತೆ ಕವಿಯ ಅಂತರಾತ್ಮದ ಅಭಿವ್ಯಕ್ತಿ” ಯಾಗಿರುತ್ತದೆ. ಕವಿ ಹಲವಾರು ಜವಾಬ್ದಾರಿಗಳನ್ನು ಹೊರ ಬೇಕಾಗುತ್ತದೆ. ಸಮಾಜದ ಅಂಕುಡೊಂಕುಗಳು, ಓರೆ ಕೋರೆಗಳನ್ನು ತಿದ್ದಿ ಸನ್ಮಾರ್ಗವನ್ನು ತೋರಿಸುವ ವ್ಯಕ್ತಿ ಯಾಗಿರುತ್ತಾನೆ. ಕವನಗಳು “ಇಂದಿನ ಪೆಡಂಭೂತದಂತೆ ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಚಿಂತಿಸುವಂತಿರ ಬೇಕು” ಎಂದು ನುಡಿದರು. ಉದ್ಘಾಟನೆಯನ್ನು ಶ್ರೀ ಹೆಚ್.ಕೆ ವೆಂಕಟೇಶ್ವರ ರಾವ್ ಕನ್ನಡ ಸಾಹಿತ್ಯ ಪರಿಷತ್ತು ಭವನದ ಸ್ಥಳ ದಾನಿಗಳು ನೆರವೇರಿಸಿದರು.
ಪ್ರಾಸ್ತಾವಿಕ ನುಡಿಯನ್ನು ಶ್ರೀ ಎಸ್.ತಿಪ್ಪೇಸ್ವಾಮಿ. ಅಧ್ಯಕ್ಷರು. ಕನ್ನಡ ಸಾಹಿತ್ಯ ಪರಿಷತ್ತು. ಹೋಬಳಿ ಘಟಕ. ಹೊಸಹಳ್ಳಿ ಇವರು ನುಡಿದರು. ದತ್ತಿ 1. ಶ್ರೀಮತಿ ವೆಂಕಮ್ಮ, ಶ್ರೀ ಹೆಚ್.ಕೆ ರಾಮರಾವ್ ದತ್ತಿ. ದತ್ತಿ ದಾನಿಗಳು ಶ್ರೀ ಹೆಚ್. ಕೆ. ವೆಂಕಟೇಶ್ವರ ರಾವ್. ಹೊಸಹಳ್ಳಿ. ದತ್ತಿ ವಿಷಯ “ಶ್ರೀ ಕುಮಾರವ್ಯಾಸ”. ಉಪನ್ಯಾಸಕರು ಡಾ, ಟಿ.ಓಂಕಾರಪ್ಪ. ವಕೀಲರು ಹುಲಿಕೆರೆ ಇವರು ಮಾತನಾಡುತ್ತ “ಕುವೆಂಪುರವರು ಹೇಳಿದಂತೆ ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು, ಭಾರತ ಕಣ್ಣಿಗೆ ಕಟ್ಟುವುದು “ಇದು ಸರ್ವಕಾಲಿಕ ಸತ್ಯವಾದ ಮಾತು. ಈ “ಗದುಗಿನ ಭಾರತ” ಅಥವಾ ಕರ್ನಾಟ ಭಾರತ ಕಥಾಮಂಜರಿ”. ಸಮಾಜದ ಸಾಮರಸ್ಯ, ಬಾಂಧವ್ಯ ಮುಂತಾದ ಅನೇಕ ನೀತಿಗಳಿಂದ ತುಂಬಿರುವ ಮಹಾನ್ ಗ್ರಂಥವಾಗಿದೆ. “ಎಂದರು.
ದತ್ತಿ 2, ಶ್ರೀ ಉಜ್ಜಪ್ಪನಹಳ್ಳಿ ಸಿದ್ದ ರಾಮಪ್ಪ ಮತ್ತು ಶ್ರೀಮತಿ ಮಾಯಮ್ಮ ದತ್ತಿ. ದತ್ತಿ ದಾನಿಗಳು ಶ್ರೀ ಉಜ್ಜಪ್ಪನಹಳ್ಳಿ ನಾಗೇಶ್ ಮತ್ತು ಯು. ಎನ್ . ಶಿಲ್ಪ. ಹೊಸಹಳ್ಳಿ. ದತ್ತಿ ವಿಷಯ: ಚುಟುಕು ಸಾಹಿತ್ಯ. ಉಪನ್ಯಾಸಕರು ಶ್ರೀ ಶಾಮಸುಂದರ ಸಫಾರೆ. ನಿವೃತ್ತ ಬಡ್ತಿ ಮುಖ್ಯ ಗುರುಗಳು. ಇವರು ಮಾತನಾಡುತ್ತಾ “ಚುಟುಕು ಸಾಹಿತ್ಯ ಚಿಕ್ಕ ಕವಿತೆಗಳ ರೀತಿಯಲ್ಲಿ ಕಂಡರೂ ಕರಿಯನ್ನು ಕನ್ನಡಿಯಲ್ಲಿ ತೋರಿಸುವ ಚಾಣಾಕ್ಷತನ ಆಗಿದೆ. ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರಿಂದ ಹಿಡಿದು ಇಂದಿನ ಆಧುನಿಕ ಕಾಲದಲ್ಲಿಯೂ ಎಲ್ಲರಿಗೂ ಪ್ರಿಯವಾದ ಸಾಹಿತ್ಯವಾಗಿದೆ. ಶ್ರೀ ದುಂಡಿರಾಜ್, ಇಟಗಿ ಈರಣ್ಣ ಇನ್ನು ಅನೇಕ ಚುಟುಕು ಸಾಹಿತಿಗಳನ್ನು ಇಲ್ಲಿ ಹೆಸರಿಸ ಬಹುದಾಗಿದೆ. ಚುಟುಕು ಸಾಹಿತ್ಯ ದೊಡ್ಡ ದೊಡ್ಡ ಕೃತಿಗಳ ಆಶಯಗಳನ್ನು ಕೆಲವೇ ಸಾಲುಗಳಲ್ಲಿ ಎಲ್ಲರ ಮನ ಮುಟ್ಟುವಂತೆ ರಚಿತವಾದ ಸಾಹಿತ್ಯವಾಗಿದೆ” ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಯು. ಜಗನ್ನಾಥ್ ಹಿರಿಯ ಸಾಹಿತಿಗಳು. ಹೊಸಹಳ್ಳಿ. ಶ್ರೀ ಜಿ.ಚಂದ್ರಪ್ಪ. ನಿವೃತ್ತ ಪ್ರೌಢ ಶಾಲಾ ಮುಖ್ಯ ಗುರುಗಳು. ಹೊಸಹಳ್ಳಿ. ಇವರು ಕನ್ನಡ ಸಾಹಿತ್ಯ ಪರಿಷತ್ತು. ಹಾಗೂ ಕನ್ನಡ ಸಾಹಿತ್ಯದ ಮಹತ್ವದ ಬಗ್ಗೆ ಮಾತನಾಡಿದರು. ಶ್ರೀ ವಸಂತ ಸಜ್ಜನ್ ನಿವೃತ್ತ ಉಪನ್ಯಾಸಕರು. ಹುಲಿಕೆರೆ. ಶ್ರೀ ಕೆ.ಸುಭಾಷ್ ಚಂದ್ರ. ಸಹ ಕಾರ್ಯದರ್ಶಿಗಳು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ. ಕೂಡ್ಲಿಗಿ. ಶ್ರೀ ಸಾ.ಮಸಂಗಮೇಶ್ವರಯ್ಯ. ಅಧ್ಯಕ್ಷರು. ಶರಣ ಸಾಹಿತ್ಯ ಪರಿಷತ್ತು. ತಾಲೂಕು ಘಟಕ. ಕೂಡ್ಲಿಗಿ. ಶ್ರೀ ಕಲ್ಲೇಶಪ್ಪ ನಿವೃತ್ತ ಶಿಕ್ಷಕರು. ಸಿದ್ದಾಪುರ. ಎಂ.ಓ ಮಂಜುನಾಥ . ಸಂಘಟನಾ ಕಾರ್ಯದರ್ಶಿಗಳು. ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಹೊಸಹಳ್ಳಿ ಜಾನಪದ ಕಲಾವಿದರಾದ ಶ್ರೀ ಹೆಚ್.ಜಿ ಶರಣಪ್ಪ ಇತರರು ಉಪಸ್ಥಿತರಿದ್ದರು.
ಕವಿ ಗೋಷ್ಠಿ ಕಾರ್ಯಕ್ರಮದಲ್ಲಿ ಡಾ, ಎ. ಕರಿಬಸಪ್ಪನವರ “ಶಾಂತಿ ಬೇಕು, ಯುದ್ಧ ಸಾಕು” ಕೆ.ಕರಿಬಸಣ್ಣ ರವರ “ನಾಡಿನ ಮುದ್ದು ಮಕ್ಕಳಿರಾ” ಶ್ರೀ ಕೆ.ಎಂ ಮಧುಸೂದನ್ ರವರ “ಅನ್ನದಾತ” ಶ್ರೀ ಕುಮಾರಸ್ವಾಮಿ ರವರ” ಕೋಗಿಲೆಯ ಮೌನ, ಗಾನಯಾನ” ಶ್ರೀಮತಿ ತಿಪ್ಪೀರಮ್ಮ ರವರ” ನಮ್ಮ ನಾಡಿನ ಸೈನಿಕರು” ಡಾ, ಉಮಾ ರವರ “ಅಪ್ಪ” ಶ್ರೀ ಸುರೇಶ್ ದಳವಾಯಿ ರವರ “ಶಾಲೆಯ ಗಂಟೆ” ಶ್ರೀ ಶಿವ ಪ್ರಕಾಶ್ ಕೊಟ್ಟೂರ್ ರವರ” ಮಟಕ ಜಟಕಾ” ಶ್ರೀ ಕೆ.ಎಸ್ ವೀರೇಶ್ ರವರ” ಎಲ್ಲೋ ಹುಡುಕಿದೆ ದೇವರನು” ಶ್ರೀ ಎಸ್. ತಿಪ್ಪೇಸ್ವಾಮಿ (ಹೊ.ಸ.ತಿ) ರವರ” ಭ್ರಷ್ಟಾಚಾರದ ಭೂತ. ಕವಿತೆಗಳು ಎಲ್ಲರ ಗಮನ ಸೆಳೆದವು. ಪ್ರಾರ್ಥನೆ ಶ್ರೀಮತಿ ತಿಪ್ಪೀರಮ್ಮ, ಸ್ವಾಗತ ಶ್ರೀ ಕೆ.ಕರಿಬಸಣ್ಣ. ನಿರೂಪಣೆ. ಶ್ರೀ. ಕೆ.ಎಸ್ ವೀರೇಶ್. ಮಾಡಿದರು ಎಂದು ವರದಿಯಾಗಿದೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

