ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ನಾಯಿಯನ್ನು – ಅಗ್ನಿ ಶಾಮಕ ದಳದ ಸಿಬ್ಬಂದಿಯವರಿಂದ ಜೀವಂತವಾಗಿ ರಕ್ಷಿಸಿದರು.
ಬನ್ನಿಕುಪ್ಪೆ ಮಾ.31

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಹೆಚ್.ಎಸ್.ವಾರ್ಡ್ ನಂ-22 ಬನ್ನಿಕುಪ್ಪೆ ಚಿಕ್ಕಬಳ್ಳಾಪುರದಲ್ಲಿ ಮುನಿಕೃಷ್ಣ ಎಂಬುವವರ ಹೊಲದಲ್ಲಿ ಅಂದಾಜು 30×30 ಅಡಿ ವಿಸ್ತಾರವಾದ 50 ಅಡಿ ಆಳದ ತೇರೆದ ನೀರಿರುವ ಬಾವಿಯಲ್ಲಿ ಆಕಸ್ಮಿಕವಾಗಿ ನಾಯಿಯು ಕಾಲು ಜಾರಿ ಬಿದ್ದಿದ್ದು, ಸದರಿ ಸ್ಥಳೀಯ ನಿವಾಸಿಗಳು ಘಟನೆಯ ವಿಷಯವನ್ನು ಚಿಕ್ಕಬಳ್ಳಾಪುರ ಅಗ್ನಿಶಾಮಕ ಠಾಣೆಯ ನಿಯಂತ್ರಣ ಕೊಠಡಿಗೆ ದೂರವಾಣಿಗೆ ಕರೆ ಮಾಡಿ ತಿಳಿಸಿದರು.
ಕರೆ ಬಂದ ತಕ್ಷಣ ಜಲವಾಹನದೊಂದಿಗೆ ಅಗ್ನಿಶಾಮಕ ತಂಡ ಸ್ಥಳಕ್ಕೆ ದೌಡಾಯಿಸಿ ಕಾರ್ಯವನ್ನು ಸುಮಾರು 50 ಅಡಿ ಆಳದ ಬಾವಿಯಲ್ಲಿ ಹಗ್ಗಗಳ ಹಾಗು ಜಾಳಿಗೆ ಭಲೇ ಸಹಾಯದಿಂದ ಸುಮಾರು 02:20 ಎರಡು ಗಂಟೆ ಇಪ್ಪತ್ತು ನಿಮಿಷಗಳ ಕಾಲ ಶ್ರಮವಹಿಸಿ ಅಧಿಕಾರಿಗಳು ಹಾಗು ಸಿಬ್ಬಂದಿಯವರು ಜಾಳಿಗೆ ಭಲೇ ಹಗ್ಗಗಳ ಸಹಾಯದಿಂದ ಪ್ರಾಣ ರಕ್ಷಣೆಗಾಗಿ ಕೂಗುತ್ತಿದ್ದ ನಾಯಿಯನ್ನು ಜೀವಂತವಾಗಿ ಅಗ್ನಿಶಾಮಕ ಇಲಾಖೆಯ ತಂಡ ರಕ್ಷಣೆ ಮಾಡಿರುತ್ತಾರೆ.

ಈ ಸಮಯ ಪ್ರಜ್ಞೆ ಕಾರ್ಯವನ್ನು ವೀಕ್ಷಿಸಿದ ಬನ್ನಿಕುಪ್ಪೆ ಚಿಕ್ಕಬಳ್ಳಾಪುರದ ಸ್ಥಳೀಯ ನಿವಾಸಿಗಳು ಅಗ್ನಿಶಾಮಕ ತಂಡದ ಕಾರ್ಯ ದಕ್ಷತೆಯನ್ನು ಮೆಚ್ಚಿ ಶ್ಲಾಘಿಸಿ ಹಾಗೂ ಹಸ್ತಲಾಘವ ಮಾಡಿ ನಾಯಿಯ ಪ್ರಾಣ ರಕ್ಷಣೆ ಮಾಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿರವರಾದ ಕರಿಯಣ್ಣ.ಎಸ್ ಕೆರವರ ನೇತ್ರತ್ವದಲ್ಲಿ ಹಾಲಸಿದ್ದ. ವಸಂತ. ಮೇತ್ರಿ. ಅಗ್ನಿಶಾಮಕ ಠಾಣಾಧಿಕಾರಿ, ರವೀಂದ್ರ. ಸಂಗಮ, ನಾಗಪ್ಪ. ಶಿವಾಪುರ, ಅನಿಲ. ಚೋಪಡೆ, ರಾಜು. ಮುರಕುಟ್ಟಿ, ಎಂ.ಸುರೇಶ್ ನಾಯಕ ಹಾಗೂ ಗಣೇಶ. ಬೀರಗೌಡ ಭಾಗವಹಿಸಿದ್ದರು.

