ಪರಿಣಾಮಕಾರಿ ಜೀವನ ನಿರ್ವಹಣೆಗೆ ಆಧ್ಯಾತ್ಮಿಕ – ಮಾರ್ಗ ಸಹಕಾರಿ ಡಾ, ಭೂಮಿಕ.

ಚಳ್ಳಕೆರೆ ಮಾ.31

ಪರಿಣಾಮಕಾರಿ ಜೀವನ ನಿರ್ವಹಣೆಗೆ ಆಧ್ಯಾತ್ಮಿಕ ಮಾರ್ಗ ಅತ್ಯಂತ ಸಹಕಾರಿಯಾದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕಿ ಡಾ, ಭೂಮಿಕ ಹೇಳಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಯುವಕ-ಯುವತಿಯರಿಗಾಗಿ ಆಯೋಜಿಸಿದ್ದ ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು “ಪರಿಣಾಮಕಾರಿ ಜೀವನ ನಿರ್ವಹಣೆ” ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.

ಕರ್ಮಯೋಗದ ಮುಖ್ಯ ಉದ್ದೇಶವೇ ಪ್ರತಿಯೊಬ್ಬ ಜೀವರಲ್ಲಿಯೂ ಶಿವನನ್ನು ಕಂಡು ಪೂಜಿಸಿ ಅವರ ಸೇವೆ ಮಾಡುವುದಾಗಿದೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆ ಮತ್ತು ಭಜನೆಯನ್ನು ಯತೀಶ್ ಎಂ ಸಿದ್ಧಾಪುರ ನಡೆಸಿ ಕೊಟ್ಟರೆ ಪೂಜ್ಯ ಮಾತಾಜೀ ತ್ಯಾಗಮಯೀ ಅವರಿಂದ ವಿದ್ಯಾರ್ಥಿಗಳಿಗೆ ಧ್ಯಾನಾಭ್ಯಾಸ ಮಾಡಿಸಿದರು. ತರಗತಿಯಲ್ಲಿ ಶ್ರೀಮತಿ ಸುಧಾಮಣಿ, ಕಾವೇರಿ ಸುರೇಶ್, ಜಯಾದಿತ್ಯ, ಚೇತನ್, ಹೃತಿಕ್, ಸಂತೋಷ್, ಮಾನ್ಯ, ಚಾರ್ಮಿಶ್ರೀ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ಧಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button