ಶ್ರೀನರಹರಿ ಸದ್ಗುರು ಆಶ್ರಮದಲ್ಲಿ ನಿತ್ಯಾನ್ನ – ದಾಸೋಹ ಕಾರ್ಯಕ್ರಮಕ್ಕೆ ಚಾಲನೆ.

ಚಳ್ಳಕೆರೆ ಏ.01

ನಗರದ ಹೊರ ವಲಯದ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದಲ್ಲಿ ಮಾತೃಶ್ರೀ ನಾಗವೇಣಮ್ಮನವರ ಜನ್ಮ ಶತಮಾನೋತ್ಸವ ಪ್ರಾರಂಭದ ಪ್ರಯುಕ್ತ ನಿತ್ಯಾನ್ನ ದಾಸೋಹ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಡಾ, ವೈ ರಾಜಾರಾಮ್ ಗುರುಗಳು ಗುರುತಾಯಿ ಮಾತೃಶ್ರೀ ನಾಗವೇಣಮ್ಮನವರ ಜನ್ಮ ಶತಮಾನೋತ್ಸವದ ಪ್ರಾರಂಭದ ಹಿನ್ನೆಲೆಯಲ್ಲಿ ನರಹರಿ ನಗರದ ಆಶ್ರಮದಲ್ಲಿ ಪ್ರತಿನಿತ್ಯ ಮಧ್ಯಾಹ್ನ 12.30 ರಿಂದ 2 ಗಂಟೆಯ ವರೆಗೆ ಅನ್ನದಾಸೋಹ ನಡೆಯಲಿದ್ದು ಆಶ್ರಮದ ಭಕ್ತರು ಮತ್ತು ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಳ್ಳುವಂತೆ ಮನವಿ ಮಾಡಿದರು.

ಮುಖ್ಯ ಅತಿಥಿಗಳಾಗಿ ಶ್ರೀನರಹರಿ ಸದ್ಗುರು ಆಶ್ರಮದ ಉಪಾಧ್ಯಕ್ಷರಾದ ಮಾಕಂ ಶ್ರೀನಿವಾಸಲು, ಪೂಜ್ಯ ವೈ ನರಹರಿ ಗುರುಗಳು, ಬೆಂಗಳೂರಿನ ಐ.ಐ.ಎಂ ನ ನಿವೃತ್ತ ಪ್ರೊಫೆಸರ್ ಡಾ, ಬಿ.ಶೇಖರ್, ಪ್ರಗತಿಪರ ಬೇಸಾಯಗಾರರಾದ ಕುಂಕಲ ಕೃಷ್ಣಯ್ಯ, ನಿವೃತ್ತ ತಹಶೀಲ್ದಾರ್ ಎನ್.ರಘುಮೂರ್ತಿ,ಈಶ್ವರಗೆರೆಯ ರಂಗನಾಥ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದ ಪ್ರಾರ್ಥನೆಯನ್ನು ಸುಹಾಸ್, ವೈಭವ ಮಾಡಿದರೆ ನಿರೂಪಣೆಯನ್ನು ರವಿಶಂಕರ್ ಮಾಡಿದರು. ಸ್ವಾಗತವನ್ನು ರಾಮಚಂದ್ರಪ್ಪ ನಡೆಸಿಕೊಟ್ಟರೆ ವಂದನಾರ್ಪಣೆಯನ್ನು ಶಿಕ್ಷಕರಾದ ಮಲ್ಲಿಕಾರ್ಜುನಪ್ಪ ನಡೆಸಿ ಕೊಟ್ಟರು.

ಈ ಸಂದರ್ಭದಲ್ಲಿ ಪೂಜ್ಯ ವೈ ಏಕಾಂತ ರಾಮ್, ರಾಜೇಶ್ವರಿ, ಲಾವಣ್ಯ, ಪದ್ಮಶ್ರೀ, ಯಾದಾಟಿ ಚೇತನ್, ದೇವರಾಜರೆಡ್ಡಿ, ರೇವಣಸಿದ್ದಪ್ಪ , ಯತೀಶ್ ಎಂ ಸಿದ್ಧಾಪುರ, ಸರಸ್ವತಿ ಗೋವಿಂದರಾಜು, ಪ್ರೇಮಲೀಲಾ, ಗಂಗಾಧರಶೆಟ್ಟಿ, ನಾಗಲಕ್ಷ್ಮೀ, ಶಾಂತಮ್ಮ, ನಗರಂಗೆರೆ ಮಹೇಶ್ ಸೇರಿದಂತೆ ನರಹರಿ ಸದ್ಗುರು ಆಶ್ರಮದ ಸದ್ಭಕ್ತರು ಉಪಸ್ಥಿತರಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button