ಕ್ಷೇತ್ರ ಅಭಿವೃದ್ಧಿಗೆ 51.5 ಕೋಟಿ ಶಾಸಕರ ಶ್ರಮ – ಹೆಚ್.ಯು ಫಾರೂಕ್.
ತರೀಕೆರೆ ಆ 26


ಮುಡುಗೋಡು ಸಂತೆ ಮೈದಾನದ ಜಾಗದಲ್ಲಿ 50 ವರ್ಷಗಳಿಂದ ವಾಸ ಮಾಡುತ್ತಿದ್ದ ಕುಟುಂಬಗಳಿಗೆ 94 ಸಿ ಅಡಿಯಲ್ಲಿ ನಿವೇಶನ ಸರ್ಕಾರ ಮಂಜೂರು ಮಾಡಲಾಗಿದೆ ಇದರಲ್ಲಿ ಶಾಸಕರಾಗಲಿ ಅವರ ಹಿಂಬಾಲಕರಾಗಲಿ ಯಾವುದೇ ಹಸ್ತಕ್ಷೇಪ ಮಾಡಿರುವುದಿಲ್ಲ, ಬಿಜೆಪಿ ಯವರು ಈ ಕುರಿತು ಶಾಸಕರ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಸೂಕ್ತವಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಯು ಫಾರೂಕ್ ರವರು ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
ಕ್ಷೇತ್ರದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಿಕೆ ನೀಡುವುದು ಸರಿಯಲ್ಲ, ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ ರವರು ಹಾಗೂ ಮಾಜಿ ಶಾಸಕ ಡಿ.ಎಸ್ ಸುರೇಶ ರವರು ಬಿಜೆಪಿ ಪಕ್ಷದ ಕೆಲವು ಕಾರ್ಯಕರ್ತರು ಶಾಸಕರ ಕುಟುಂಬ ಅಂದರೆ ಪತ್ನಿ ಮಗಳು ಮನೆಗೆ ಬಂದಂತಹ ಅತಿಥಿಗಳಿಗೆ ಸತ್ಕಾರ ಮಾಡಿ ಕಷ್ಟ ಸುಖಗಳನ್ನು ಕೇಳುವುದು ಕುಟುಂಬ ರಾಜಕಾರಣ ಎಂದು ಆರೋಪ ಮಾಡುವುದು ಶಾಸಕರ ಪತ್ನಿ ಮತ್ತು ಮಗಳ ಬಗ್ಗೆ ಮಾತನಾಡುವುದಕ್ಕೆ ಇವರಿಗೆ ಯಾವುದೇ ರೀತಿ ಹಕ್ಕು ಇಲ್ಲ, ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 51.5 ಕೋಟಿ ರೂಪಾಯಿಗಳು ಮತ್ತು ಕೇಂದ್ರ ಸರ್ಕಾರದ 4.34 ಕೋಟಿ ರೂಪಾಯಿ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ದಿ ಪಡಿಸುತ್ತಿದ್ದಾರೆ.
ಹದಗೆಟ್ಟಿರುವ ರಸ್ತೆಗಳ ಕಾಮಗಾರಿಗಳನ್ನು ಮಾಡಿಸಿದ್ದಾರೆ 20 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಎಚ್ ರಸ್ತೆ ಕಾಮಗಾರಿಯು ಉತ್ತಮ ರೀತಿಯಲ್ಲಿ ನಡೆದಿದೆ.
ತರೀಕೆರೆ ಪಟ್ಟಣದ ಮಧ್ಯ ರಸ್ತೆ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿದೆ ಎಂದು ಆರೋಪ ಮಾಡಿರುವುದು ಕ್ಷೇತ್ರದ ಜನತೆ ನೋಡುತ್ತಿರುತ್ತಾರೆ, ಕಳೆದ ಎರಡು ವರ್ಷಗಳಿಂದ ಕಾಮಗಾರಿ ಬರದಿಂದ ಸಾಗಿದೆ, ಉತ್ತಮ ಗುಣಮಟ್ಟವನ್ನು ಕಾಯ್ದಿರಿಸಿದೆ ಎಂದು ಹೇಳಿದರು.
ಕೆಪಿಸಿಸಿ ಸದಸ್ಯರಾದ ಎಚ್ ವಿಶ್ವನಾಥ್ ಮಾತನಾಡಿ ಶಾಸಕರಾದ ಜಿ.ಎಚ್ ಶ್ರೀನಿವಾಸರವರು ಕ್ಷೇತ್ರದ ರೈತರಿಗೆ ಅನುಕೂಲವಾಗುವಂತೆ ಕೃಷಿಗೆ ಹೆಚ್ಚಿನ ಆದ್ಯತೆ ಕೊಟ್ಟು ಕೆರೆಗಳಿಗೆ ನೀರು ತುಂಬಿಸುವುದು ನೀರಾವರಿಗೆ ಹೆಚ್ಚು ಪ್ರಾಮುಖ್ಯತೆ ನೀಡಿರುತ್ತಾರೆ. ಶಾಸಕರ ಅನುಪಸ್ಥಿತಿಯಲ್ಲಿ ಅವರ ಕುಟುಂಬದವರು ಹೆಚ್ಚು ಆಸಕ್ತಿ ವಹಿಸಿ ಜನ ಸಾಮಾನ್ಯರ ಕಲ್ಯಾಣಕ್ಕೆ ಸಮಾಜ ಸೇವೆಗೆ ಮುಂದಾಗಿದ್ದಾರೆ ಅವರನ್ನು ಶ್ಲಾಘಿಸುವಂತಹ ವಿಚಾರವಾಗಿದೆ ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಹೇಮಲತಾ,ಲಕ್ಕವಳ್ಳಿ ಹೋಬಳಿ ಅಧ್ಯಕ್ಷರಾದ ಹೆಚ್ ಎನ್ ಮಂಜುನಾಥ್, ಕಿಸಾನ್ ಶೆಲ್ ಅಧ್ಯಕ್ಶರಾದ ಟಿ ಆರ್ ಗಿರೀಶ್, ಪ್ರಚಾರ ಸಮಿತಿ ಅಧ್ಯಕ್ಷರಾದ ಪರಶುರಾಮ, ಮಾಜಿ ಪುರಸಭಾ ಅಧ್ಯಕ್ಷರಾದ ಪರ್ವೀನ್ ತಾಜ್, ಕೆ.ಡಿ.ಪಿ ಸದಸ್ಯ ಲಕ್ಷ್ಮೀಬಾಯಿ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸೆಲ್ ಅಧ್ಯಕ್ಷರಾದ ಗೌರೀಶ್, ಪುರಸಭಾ ನಾಮಿನಿ ಸದಸ್ಯರಾದ ಆದಿಲ್ ಪಾಷಾ, ರವಿ ಹಾಗೂ ಮುಂತಾದವರು ಮಾತನಾಡಿದರು ಮಾಜಿ ಶಾಸಕ ಡಿ.ಎಸ್ ಸುರೇಶ್ ರವರ ನಡೆಯನ್ನು ಖಂಡಿಸಿದರು.
ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್.ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು
