“ಅಮೋಘ” ಚಲನ ಚಿತ್ರದ – ಹಾಡು ಬಿಡುಗಡೆ.

ಮೈಸೂರ ಆ.24

ಮೈಸೂರಿನ ರಾಜರಾಜೇಶ್ವರಿ ನಗರದಲ್ಲಿನ “ಶ್ರೀ ಆರ್ಟ್ ಇವೆಂಟ್ಸ್ ಮ್ಯಾನೇಜ್‌ಮೆಂಟ್” ಅವರ “ಶ್ರೀ ಆರ್ಟ್ ಫಿಲಿಂಸ್” ವತಿಯಿಂದ ಗಡಿನಾಡ ಹುಲಿ ಫಿಲ್ಮ್ ಬ್ಯಾನರಿನಲ್ಲಿ ‘ಅಮೋಘ’ ಹೊಸ ಕನ್ನಡ ಚಲನ ಚಿತ್ರದ ‘ಹೊತ್ತಳು ನನ್ನ ಭಾರ’ ತಾಯಿ ಕುರಿತಾದ ಹಾಡು ಬಿಡುಗಡೆ ಮಾಡಲಾಯಿತು.

ಮೈಸೂರು, ಬೆಂಗಳೂರು, ಮಡಿಕೇರಿ ಮತ್ತು ಮಂಗಳೂರು ಸುತ್ತಮುತ್ತ ಚಲನ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ನಾಲ್ಕು ಹಾಡುಗಳು, ಒಂದು ಸಾಹಸ ದೃಶ್ಯ ಕೂಡ ಚಿತ್ರದಲ್ಲಿದೆ.

ಗಡಿನಾಡ ಹುಲಿ ಪುನೀತ್ ಕುಮಾರ್ ಕೆ.ಎನ್ ನಿರ್ದೇಶಿಸಿ, ನಿರ್ಮಾಣದಲ್ಲಿ ಲಿಖಿತಕುಮಾರ್ ಶ್ರೀಧರ್ ಪ್ರಸ್ತುತ ಪಡಿಸಿದ ‘ಹೊತ್ತಳು ನನ್ನ ಭಾರ’ ಇದೀಗ ಎಲ್ಲಡೆ ಮೆಚ್ಚುಗೆ ಗಳಿಸಿದೆ.

ತಾರಾಗಣದಲ್ಲಿ ಮಿಶೆಲ್ ಸೆಕ್ವೇರಾ, ಗಡಿನಾಡಹುಲಿ ಪುನಿತ ಕುಮಾರ, ಕೆ.ಎನ್.ರೇಷ್ಮಾ, ಪ್ರತಿಭಾ ಶೆಟ್ಟಿ, ಈಶ್ವರ ಶೆಟ್ಟಿ, ಸಂತೋಷ ಗೋಪಾಲ ರೆಡ್ಡಿ, ಧನುಷ್ ಎಸ್.ಕೆ.ಮೈಸೂರ, ಕಲ್ಕಿ, ಮಾಸ್ಟರ್ ಪ್ರೀತಮ್, ಮಾಸ್ಟರ್ ಲಿಶಾಶ್ರೀ, ಶ್ರೀನಿವಾಸ ಮೂರ್ತಿ, ಶ್ವೇತ ಲಿಖಿತ್ ಮೊದಲಾದವರಿದ್ದಾರೆ.

ಶ್ರೀ ಹರ್ಷ ಶ್ರೀಧರ್(ಆಕಾಶ) ಛಾಯಾಗ್ರಹಣದ ಜೊತೆಗೆ ಸಂಕಲನವಿದೆ , ಧನುಷ್ ಡಿ.ಕೆ.ಎಸ್ ಸಂಗೀತ ಸಂಯೋಜನೆ , ಭವತಾರಣಿ ಕೆ.ಎನ್ ಹಿನ್ನೆಲೆ ಗಾಯಕರಾಗಿದ್ದಾರೆ.

ಎಸ್ ಎಫ್ ಎಕ್ಸ್ ಮನುರೈ, ರೆಕಾರ್ಡಿಂಗ್ ಮತ್ತು ಮಾಸ್ಟರಿಂಗ್ ಎಂ ರಾವ್ ಸ್ಟುಡಿಯೋ ಮೈಸೂರು, ಕಲಾನಿರ್ದೇಶನ ಚಂದನ ಕುಮಾರ್, ಪಿ.ಆರ್.ಓ ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ, ಸಹ ನಿರ್ದೇಶನ ವಸಂತಕುಮಾರ ಎಸ್.ಎನ್ ಅವರದಿದೆ.

ಅತ್ಯಂತ ಭಾವ ಪೂರ್ಣವಾದ ತಾಯಿಯ ಬಲಿದಾನ ಮತ್ತು ತ್ಯಾಗವನ್ನು ಬಿಂಬಿಸುವ ಈ ಹಾಡನ್ನು ಗಂಟೆಗೆ “ಶ್ರೀ ಆರ್ಟ್ ಫಿಲಿಂಸ್” ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಲಿದ್ದು ವೀಕ್ಷಕರು ವೀಕ್ಷಿಸಿ ಚಿತ್ರತಂಡವನ್ನು ಪ್ರೋತ್ಸಾಹಿಸಬೇಕು ಎಂದಿದ್ದಾರೆ.

ರಾಜ್ಯ ಮಟ್ಟದ ವಿಶೇಷ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button