ಶ್ರೀನರಹರೇಶ್ವರ ದೇವಸ್ಥಾನದಲ್ಲಿ ಕದಳಿ ವಚನ ಮಂಡಳಿಯಿಂದ – ವಿಶೇಷ ಭಜನೆ.

ಚಳ್ಳಕೆರೆ ಆ.26

ನಗರದ ಹೊರ ವಲಯದ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದ ಶ್ರೀನರಹರೇಶ್ವರ ದೇವಸ್ಥಾನದಲ್ಲಿ “ಶ್ರಾವಣ ಮಾಸದ ಸೋಮವಾರ” ದ ಪ್ರಯುಕ್ತ ಕದಳಿ ವಚನ ಮಹಿಳಾ ಮಂಡಳಿ ಮತ್ತು ಶ್ರೀಮಲ್ಲಿಕಾರ್ಜುನಸ್ವಾಮಿ ಭಜನಾ ಮಂಡಳಿಯಿಂದ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು.

ಭಜನಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ಡಾ, ವೈ.ರಾಜಾರಾಮ್ ಗುರುಗಳು ಭಾಗವತ ಪುರಾಣಕ್ಕೆ ಸಂಬಂಧಿಸಿದ ಮೂರು ಕಥೆಗಳನ್ನು ಹೇಳಿ ಅದರ ತಾತ್ಪರ್ಯದ ಬಗ್ಗೆ ಮಾತನಾಡುತ್ತಾ ಶ್ರೀಕೃಷ್ಣನು ತನ್ನ ಪುತ್ರ ಪ್ರದ್ಯುಮ್ನನಿಗೆ ತಿಳಿಸಿದಂತೆ ನಮ್ಮ ನಿತ್ಯ ಜೀವನದಲ್ಲಿ ಶಾರೀರಿಕ, ವಾಚಿಕ, ಮಾನಸಿಕ ತಪಸ್ಸಿನ ಮೂಲಕ ಮಾಧವತ್ವವನ್ನು ಪಡೆಯಬಹುದು.

ಮಾನವ ಮೊದಲು ಮಾನವೀಯ ಮೌಲ್ಯಗಳನ್ನು ಒಳಗೊಂಡ ಒಳ್ಳೆಯ ಮಾನವನಾಗ ಬೇಕು. ಆರ್ತರಿಗೆ, ಅಶಕ್ತರಿಗೆ ಸೇವೆ ಮಾಡುವ ಪ್ರಯತ್ನ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಸತ್ಸಂಗದ ಕೊನೆಯಲ್ಲಿ ಶ್ರೀನರಹರೇಶ್ವರ ದೇವರಿಗೆ ಮಂಗಳಾರತಿ ಮತ್ತು ವಿಶೇಷ ಅನ್ನಪ್ರಸಾದ ವಿನಿಯೋಗ ನಡೆಯಿತು.

ಭಜನಾ ಕಾರ್ಯಕ್ರಮದಲ್ಲಿ ರಾಜೇಶ್ವರಿ ರಾಜಾರಾಮ್, ಗೀತಾ ನಾಗರಾಜ್, ವನಜಾಕ್ಷಿ, ಗೀತಾ ಪ್ರಕಾಶ್, ತ್ರಿವೇಣಿ, ಸುಲೋಚನಾ, ಗಂಗಾಂಬಿಕೆ, ಪ್ರತಿಭಾ, ಜ್ಯೋತಿ ನಾಗರಾಜ್, ಗೀತಾ ರವೀಂದ್ರನಾಥ, ಮಂಜುಳ,ಮಂಗಳಾ, ಸೌಮ್ಯ, ಜಾನಕಿ, ಲಾವಣ್ಯ, ಲತಾ, ಶರ್ಮಿಳಾ, ಸವಿತಾ, ಬಿ ಸುಮನಾ, ವಿಜಯ, ದಾಕ್ಷಾಯಣಿ, ರಾಮಚಂದ್ರಪ್ಪ, ಧನಂಜಯ, ರೇವಣಸಿದ್ದಯ್ಯ, ಅಶ್ವಿನಿ, ಯತೀಶ್ ಎಂ ಸಿದ್ದಾಪುರ, ಅಂಬಿಕಾ, ಪರಮೇಶ್ವರ್, ಶೈಲಜಾ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button