“ಅಕ್ಟೋಬರ್ 02 ಭಾರತದ ಎರಡು ಕಣ್ಣುಗಳು”…..

ಅಕ್ಟೋಬರ್ 02

ಗಾಂಧಿ ಜಯಂತಿಯು
ಭಾರತೀಯರಿಗೆ ಸನ್ಮತಿಯು
ಸತ್ಯದ ಜ್ಯೋತಿಯು
ಜಗದ ಮತಿಯು
ನೊಂದವರ ಧ್ವನಿಯು
ತ್ಯಾಗದ ಗಣಿಯು
ದರ್ಪದ ಸಂಕೋಲೆಯು
ಬಿಡುಗಡೆಯ ಮಾಲೆಯು
ವಿಶ್ವಕ್ಕೆ ಮಹಾತ್ಮನು
ಜನಮನದ ಆತ್ಮನು
ಮಹಾತ್ಮಾ ಗಾಂಧೀಜಿ ಜನ್ಮದಿನವು
ಭಾರತಾಂಬೆಯ ಸುದಿನವು
ಲಾಲ್ ಬಹದ್ದೂರ್ ಶಾಸ್ತ್ರೀಜಿಯು
ಭಾರತ ಮಾತೆಯ ಮಹಾನ್ ಸಹನೆಯ
ಅಸ್ತ್ರವು
ಜೈಜವಾನ ಜೈಕಿಸಾನ ವಿಶ್ವದೆಲ್ಲೆಡೆ ಬೆಳಗಿದ
ಮಹಾನ್ ಚೇತನವು
ಸರಳೆತೆಯ ಸಾಕಾರಮೂರ್ತಿ ಭಾರತ ಪ್ರಧಾನ
ಮಂತ್ರಿ ಕಿರ್ತಿಯು
ಶ್ವೇತ ಕ್ರಾಂತಿಯ ರೂವಾರಿಯು
ದೇಶ ಕಂಡ ಅಪರೂಪದ ಪ್ರಾಮಾಣಿಕ
ರಾಜಕಾರಿಣಿಯು
ಸರಳ ಸಜ್ಜನಿಕೆಯ ಸ್ವಾಭಿಮಾನಿಯು
ಭಾರತ ಮಾತೆಯ ಪ್ರಜೆಗಳೆಲ್ಲರೂ ಅವರ
ಅಭಿಮಾನಿಗಳು
ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಜನಸಿದ
ದಿನವು ಅಭಿಮಾನದ ಶುಭ ಶತಕೋಟಿ
ನಮನಗಳು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇಶಂಸು ದೇವರ ಹಿಪ್ಪರಗಿ
