ಭಕ್ತರ‌ ಹಸಿವು ನೀಗಿಸಲು ಮಾತೃಶ್ರೀ ಪ್ರಸಾದ ನಿಲಯ ನಿರ್ಮಾಣ – ಪೂಜ್ಯ ವೈ ರಾಜಾರಾಮ್ ಗುರುಗಳು.

ಚಳ್ಳಕೆರೆ ಅ.22

ಶ್ರೀನರಹರಿ ಸದ್ಗುರು ಆಶ್ರಮಕ್ಕೆ ಪ್ರತಿನಿತ್ಯ ಬರುವ ಭಕ್ತರು ಖಾಲಿ ಹೊಟ್ಟೆಯಲ್ಲಿ ಹಿಂತಿರುಗಿ ಹೋಗ ಬಾರದೆಂಬ ಸದುದ್ದೇಶದಿಂದ ಮಾತೃಶ್ರೀ ನಾಗವೇಣಾಮ್ಮ ಪ್ರಸಾದ ನಿಲಯ ಮತ್ತು ಆಧ್ಯಾತ್ಮಿಕ ಜ್ಞಾನದ ಹಸಿವು ನೀಗಿಸಲು ಸಿಂಹಾದ್ರಿ ಸಭಾ ಭವನವನ್ನು ನಿರ್ಮಾಣ ಮಾಡಲಾಗಿದೆ ಎಂದು ಚಳ್ಳಕೆರೆಯ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ಡಾ‌, ವೈ ರಾಜಾರಾಮ್ ಗುರುಗಳು ಅಭಿಪ್ರಾಯ ಪಟ್ಟರು‌.

ನಗರದ ಹೊರ ವಲಯದ ನರಹರಿ ನಗರದ ಆಶ್ರಮದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ “ಮಾತೃಶ್ರೀ ಪ್ರಸಾದ ನಿಲಯ” ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಸಾಗರದ ತ್ಯಾಗರ್ತಿಯ ಭಾರತೀ ತೀರ್ಥ ಸ್ವಾಮೀಜಿ, ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ, ಶಾಂತಾರಾಂ ಸ್ವಾಮಿಗಳು, ಬಿ.ಸಿ ಸಂಜೀವಮೂರ್ತಿ ಭಾಗವಹಿಸಿ ಮಾತನಾಡಿದರು.

ವೇದ ವಿದ್ವಾಂಸ ನಾಗಶಯನ ಗೌತಮ್ ಮತ್ತು ಹೇಮಂತ್ ಗೌತಮ್ ನೇತೃತ್ವದಲ್ಲಿ ಹೋಮಾದಿ ಕಾರ್ಯಕ್ರಮಗಳು ಸಾಂಗವಾಗಿ ನಡೆದವು.

ಕಾರ್ಯಕ್ರಮದಲ್ಲಿ ಪೂಜ್ಯ ಏಕಾಂತರಾಂ,ಡಾ, ವೈ ನರಹರಿ, ಮಾತೃಶ್ರೀ ವಿಜಯಲಕ್ಷ್ಮೀ, ರಾಜೇಶ್ವರಿ, ಸುಬ್ರಹ್ಮಣ್ಯ, ಏಳುಕೋಟಿ ರಾವ್, ಪದ್ಮಶ್ರೀ, ರವಿ, ಚೇತನ್, ಈಶ್ವರಗೆರೆ ರಂಗನಾಥ, ಬಿ.ಸಿ ವೆಂಕಟೇಶಮೂರ್ತಿ, ಸತೀಶ್ ಕುಮಾರ್, ರಾಮಚಂದ್ರಪ್ಪ, ಮಲ್ಲಿಕಾರ್ಜುನಪ್ಪ, ರೇವಣಸಿದ್ಧಯ್ಯ, ಧನಂಜಯ, ಹೆಚ್, ಲಕ್ಷ್ಮೀದೇವಮ್ಮ, ರಂಗಮ್ಮ, ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ,ಜಿ ಯಶೋಧಾ ಪ್ರಕಾಶ್, ವನಜಾಕ್ಷಿ, ಎಂ ಗೀತಾ ನಾಗರಾಜ್, ಶುಭಾ, ರುಕ್ಮಿಣಿ, ಮಧುಮತಿ, ಪ್ರೇಮಲೀಲಾ, ಸರಸ್ವತಿ, ಸುಶೀಲಮ್ಮ ಅಯ್ಯಪ್ಪ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ನರಹರಿ ಸಾಂಪ್ರದಾಯದ ಸದ್ಭಕ್ತರು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button