ಕುಸ್ತಿ ಪ್ರಾಚೀನ ಕ್ರೀಡೆ – ಎನ್.ವಿ ನಟೇಶ್.
ತರೀಕೆರೆ ಅ.22




ಕುಸ್ತಿ ಯಂತಹ ಪ್ರಾಚೀನ ಕ್ರೀಡೆಯನ್ನು ತರೀಕೆರೆಯಲ್ಲಿ ನಡೆಸುತ್ತಿರುವುದು ಈ ಸಂಸ್ಕೃತಿಯನ್ನು ಮುಂದುವರಿಸುವಂತಿದೆ ಎಂದು ಉಪ ವಿಭಾಗ ಅಧಿಕಾರಿ ಎನ್ ವಿ ನಟೇಶ್ ಹೇಳಿದರು.
ಅವರು ಗುರುವಾರ ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜ ಮತ್ತು ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘ ಹಾಗೂ ಪುರಸಭೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಎಲ್ಲಾ ಸಮಾಜಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ 101 ನೇ. ವರ್ಷದ ರಾಜ್ಯಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಸ್ಪರ್ಧೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಸ್ತಿ ಪ್ರಾಚೀನ ಕ್ರೀಡೆ ಇದನ್ನು ಬೆಳಸುತ್ತಿರುವುದು ಆರೋಗ್ಯವಂತ ಕ್ರೀಡೆಯಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹಶೀಲ್ದಾರ್ ಎಚ್ ಜಿ ರಶ್ಮಿ ಮಾತನಾಡಿ ಪ್ರಸ್ತುತ ಇಂದಿನ ಯುವ ಜನತೆ ಮೊಬೈಲ್ ಗೇಮ್ ಗಳಿಗೆ ಹೆಚ್ಚು ಗಮನ ಕೊಡುತ್ತಿದ್ದು ಇದರಿಂದ ಅಪಾಯ ಇರುತ್ತದೆ ಆದರೆ ನಮ್ಮ ಪ್ರಾಚೀನ ಕ್ರೀಡೆಯಾದ ಕುಸ್ತಿ ಯಂತಹ ಕ್ರೀಡೆಗಳು ಯುವ ಜನರಿಗೆ ತಲುಪಬೇಕು ಇದರಿಂದ ಯುವ ಜನರ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಕುಸ್ತಿ ಸಂಘದ ಅಧ್ಯಕ್ಷರಾದ ಟಿ ಎಸ್ ರಮೇಶ್ ಮಾತನಾಡಿ ಪಟ್ಟಣದಲ್ಲಿ ನಡೆಯುತ್ತಿರುವ ನೂರ ಒಂದನೇ ವರ್ಷದ ರಾಜ್ಯಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಸ್ಪರ್ಧೆ ಐತಿಹಾಸಿಕ ಪರಂಪರೆ ಹೊಂದಿದೆ ಸರ್ವರ ಸಹಕಾರದಿಂದ ಈ ಕ್ರೀಡಾಕೂಟ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಹೇಳಿದರು.
ನಿವೃತ್ತ ಕೃಷಿ ಅಧಿಕಾರಿಯಾದ ಟಿಎನ್ ಚಿತ್ರಸೇನಾ ಅಖಾಡ ಉದ್ಘಾಟಿಸಿ, ಗರಡಿ ಮನೆಗಳಿಂದ ಯುವಕರು ದುಶ್ಚಟಗಳಿಂದ ದೂರ ಇರುವಂತಹಾಗಿದೆ ಗರಡಿ ಮನೆಗಳು ಅಭಿವೃದ್ಧಿ ಹೊಂದಬೇಕು ಕುಸ್ತಿ ಕ್ರೀಡೆ ಹೆಚ್ಚು ಪ್ರಚಲಿತ ವಾಗಬೇಕು ಈ ಕುಸ್ತಿ ಕ್ರೀಡೆಗೆ ಶಕ್ತಿ ತುಂಬಬೇಕು ಎಂದು ಹೇಳಿದರು.
ಪುರಸಭೆ ಮುಖ್ಯ ಅಧಿಕಾರಿ ಹರೀಶ್ ಮಾತನಾಡಿ ಕುಸ್ತಿಗೆ ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆ ಇದೆ ಕುಸ್ತಿ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲಿ ಎಂದು ಹೇಳಿದರು.
ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘದ ಗೌರವಾಧ್ಯಕ್ಷ ವಗ್ಗಪ್ಪರ ಮಂಜಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಿದರು ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘದ ಉಪಾಧ್ಯಕ್ಷ ಡಾ, ಟಿ ಡಿ ರವಿಕುಮಾರ್ ಪ್ರಧಾನ ಕಾರ್ಯದರ್ಶಿ ಟಿಜಿ ಹರೀಶ್ ಕುಮಾರ್ ಸಹಕಾರದರ್ಶಿ ಎಸ್ ಪ್ರಕಾಶ್ ಖಜಾಂಚಿ ಟಿ ಎನ್ ಸೋಮಶೇಖರಯ್ಯ ಸಂಘದ ನಿರ್ದೇಶಕರು ಮುಖಂಡರಾದ ಜಯಸ್ವಾಮಿ,ಟಿ ಜಿ ಸದಾನಂದ ಪುರಸಭಾ ಮಾಜಿ ಸದಸ್ಯ ಕುಮಾರಪ್ಪ, ಪರಿಸರ ಅಧಿಕಾರಿ ತಹೇರ ತಸ್ನಿಮ್ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್ ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು
