ಚಿತ್ರ ಸಾಹಿತಿ ವಿ.ನಾಗೇಂದ್ರಪ್ರಸಾದ ನಿರ್ದೇಶನದ ‘ಶುಭಲಾಭ’ – ಚಲನ ಚಿತ್ರಕ್ಕೆ ಮುಹೂರ್ತ.
ಬೆಂಗಳೂರು ಅ.21




ರಿಯಾ ಕಂಬೈನ್ಸ್ ಲಾಂಛನದ ಅಡಿಯಲ್ಲಿ ಶ್ರೀಮತಿ ಯಮುನಾ ಪ್ರಸಾದ್ ನಿರ್ಮಿಸುತ್ತಿರುವ ‘ಶುಭಲಾಭ’ ಹೊಸ ಕನ್ನಡ ಚಲನ ಚಿತ್ರದ ಮುಹೂರ್ತ ಸಮಾರಂಭ ಮುದ್ದಿನ ಪಾಳ್ಯದ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ನೆರವೇರಿತು.
ಕನ್ನಡ ಚಿತ್ರರಂಗದ ಹೆಸರಾಂತ ಚಿತ್ರ ಸಾಹಿತಿ ಕವಿರತ್ನ ಡಾ, ವಿ.ನಾಗೇಂದ್ರ ಪ್ರಸಾದ್ ಈ ಬಾರಿ ನಿರ್ದೇಶನದ ಜೊತೆಗೆ ‘ಶುಭಲಾಭ’ಚಿತ್ರದ ಮೂಲಕ ಪುತ್ರ ಉತ್ಸವ್ ಪ್ರಸಾದ್‌ರನ್ನು ಕನ್ನಡ ಚಿತ್ರ ರಂಗಕ್ಕೆ ಪರಿಚಯಿಸ್ತಿರೋದು ವಿಶೇಷ . ವಿಜಯ ದಶಮಿ ಹಬ್ಬದ ಪ್ರಯುಕ್ತ ಉದ್ಯಮಕ್ಕೆ ಶುಭ ಸೂಚಿಸುವ.

ಲಾಭ ನಿರೀಕ್ಷಿಸುವ ಕಾರ್ಯಕ್ಕೆ ನಾಗೇಂದ್ರ ಪ್ರಸಾದ ಚಾಲನೆ ನೀಡಿದ್ದು, ಚಿತ್ರದ ಮುಹೂರ್ತದಲ್ಲಿ ಲವ್ಲೀ ಸ್ಟಾರ್ ಪ್ರೇಮ್ ಆರಂಭ ಫಲಕ ತೋರಿಸಿದರೆ, ಹಿರಿಯ ನಿರ್ದೇಶಕ ಎಸ್. ಮಹೇಂದರ್ ಕ್ಯಾಮೆರಾ ಚಾಲನೆ ಮಾಡುವ ಮೂಲಕ ಚಿತ್ರಕ್ಕೆ ಮತ್ತು ತಂಡಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಚಿತ್ರ ರಂಗದ ಪ್ರಮುಖರು, ಚಿತ್ರ ತಂಡ ಉಪಸ್ಥಿತರಿದ್ದರು.
ಹಿರಿಯ ನಟ ದತ್ತಣ್ಣ ಬಹು ಮುಖ್ಯ ಪಾತ್ರದಲ್ಲಿದ್ದು, ಅವರೊಟ್ಟಿಗೆ ಉತ್ಸವ್ ಪ್ರಸಾದ್ ನಾಯಕ ನಟನಾಗಿ ಮೊದಲ ಸಲ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ವಿಜಯಪುರ, ಬಾದಾಮಿ, ಬಾಗಲಕೋಟೆ, ಸಿಂದಗಿ ಭಾಗದಲ್ಲಿ ನಡೆಯಲಿದ್ದು ಸದ್ಯದಲ್ಲೇ ಚಿತ್ರೀಕರಣಕ್ಕೆ ಚಾಲನೆ ನೀಡಲಾಗುತ್ತಿದೆ.

ಉತ್ತರ ಕರ್ನಾಟಕದ ಸ್ಥಳೀಯ ಅನುಭವಿಕ, ರಂಗಭೂಮಿ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ. ಚಿತ್ರದಲ್ಲಿ ಮೂರು ಹಾಡುಗಳಿವೆ ಎಂದು ಚಿತ್ರ ಸಾಹಿತಿ, ನಿರ್ದೇಶಕ ವಿ.ನಾಗೇಂದ್ರ ಪ್ರಸಾದ ಹೇಳಿದರು.
ಉಪ್ಪಿ, ವಿದ್ಯ ನಾಗೇಶ್ ಛಾಯಾಗ್ರಹಣ, ವಿಜಯಾನಂದ್ ಸಂಭಾಷಣೆ, ವಿ. ಹರಿಕೃಷ್ಣ ಸಂಗೀತ, ಸುರೇಶ್ ಅರಸು ಸಂಕಲನ, ವಿನ್ಯಾಸ ಸಾಕ್ಷಿ ಶಿವು, ಪತ್ರಿಕಾ ಸಂಪರ್ಕ ಪ್ರವೀಣ್ ಏಕಾಂತ್, ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ, ಸಹಾಯಕ ನಿರ್ದೇಶನ ಪವನ್ ರಾವ್, ಚೇತನ್ ಪಡುಕೋಣೆ, ಕಥೆ ಚಿತ್ರಕಥೆ ಸಾಹಿತ್ಯ ನಿರ್ದೇಶನ ಡಾ.ವಿ ನಾಗೇಂದ್ರ ಪ್ರಸಾದ್ ಅವರದಿದ್ದು ನಿರ್ಮಾಣ ನಿರ್ವಹಣೆ ಹರಿಹರನ್ ಬಿಪಿ ಮತ್ತು ಸುನಿಲ್ ಅವರದಿದೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ
