ಶ್ರೀರಾಮಕೃಷ್ಣರ ಮೇಲಣ ಶಾರದಾಮಾತೆಯವರ ಪತಿ ಭಕ್ತಿ ಅನುಪಮವಾದದ್ದು – ಯತೀಶ್ ಎಂ ಸಿದ್ದಾಪುರ.
ಚಳ್ಳಕೆರೆ ಅ.21




ಶ್ರೀರಾಮಕೃಷ್ಣರ ಮೇಲೆ ಶ್ರೀಮಾತೆ ಶಾರದಾದೇವಿಯವರು ಹೊಂದಿದ್ದ ಪತಿಭಕ್ತಿಯು ಅನುಪಮವಾದದ್ದು ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯೆ ಹಾಗೂ ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ ತಿಳಿಸಿದರು.

ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ “ಶ್ರೀಮಾತೆ-ಶ್ರೀರಾಮಕೃಷ್ಣ ರೂಪವೆರಡು ಶಕ್ತಿಯೊಂದು” ಎಂಬ ಅಧ್ಯಾಯವನ್ನು ಓದುತ್ತಾ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹೆಚ್ ಲಕ್ಷ್ಮೀದೇವಮ್ಮ, ಎಂ ಲಕ್ಷ್ಮೀದೇವಮ್ಮ, ಪ್ರೇಮಾ, ನಾಗರತ್ನಮ್ಮ, ರಂಗಮ್ಮ, ಸರಸ್ವತಿ, ಗೀತಾ ನಾಗರಾಜ್, ಗೀತಾ ಪ್ರಕಾಶ್, ಜಿ.ಯಶೋಧಾ ಪ್ರಕಾಶ್, ದಾಕ್ಷಾಯಣಿ, ರಾಘವೇಂದ್ರ, ಸೌಮ್ಯ ಹಾಜರಿದ್ದರು.
ವರದಿ-ಯತೀಶ್
