ಮೂರು ದಿನಗಳ ಪಾದಯಾತ್ರೆ ದಾರಿಯುದ್ದಕ್ಕೂ ಪಾದಯಾತ್ರಿಕರಿಗೆ ಭಕ್ತರಿಂದ – ಅನ್ನಪ್ರಸಾದ, ನೀರು, ಹಣ್ಣು ಹಾಗೂ ಆರೋಗ್ಯ ಸೇವೆ ವ್ಯವಸ್ಥೆ ಕಲ್ಪಿಸಿದರು.
ಕಡಣಿ ಅ.23




ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಕಡಣಿ ಗ್ರಾಮದಿಂದ ಪ್ರತಿ ವರ್ಷದಂತೆ ಈ ವರ್ಷವೂ ನೂರಕ್ಕೂ ಅಧಿಕ ಅಂಬಾಭವಾನಿ ಭಕ್ತರು ಪಾದಯಾತ್ರೆ ಮೂಲಕ ಮಹಾರಾಷ್ಟ್ರದ ತುಳಜಾಪುರದಲ್ಲಿರುವ ಶ್ರೀ ಅಂಬಾಭವಾನಿ ದೇವಸ್ಥಾನಕ್ಕೆ ತೆರಳುತ್ತಿದ್ದಾರೆ. ಭಕ್ತಿ ಭಾವದಿಂದ ಪಾದಯಾತ್ರೆ ಕೈಗೊಂಡಿರುವ ಭಕ್ತರು ಅಂಬಾಭವಾನಿಯ ದರ್ಶನ ಪಡೆದು ಪುನೀತರಾಗುವ ಸಂಕಲ್ಪದೊಂದಿಗೆ ಪ್ರಯಾಣ ಆರಂಭಿಸಿದ್ದಾರೆ.
ಹೌದು ವೀಕ್ಷಕರೇ, ಕಡಣಿ ಗ್ರಾಮದ ಶ್ರೀದೇವಿ ಕಮಿಟಿಯ ಸದಸ್ಯರು ಹಾಗೂ ಅಂಬಾಭವಾನಿ ಭಕ್ತರು ಶ್ರೀದೇವಿ ಮತ್ತು ಲಕ್ಷ್ಮೀ ದೇವಿಯ ದರ್ಶನ ಪಡೆದು, ಭಕ್ತಿ ಭಾವದಿಂದ ಪಾದಯಾತ್ರೆಯನ್ನು ಪ್ರಾರಂಭಿಸಿದರು.
ಕಡಣಿ ಗ್ರಾಮದಿಂದ ಆರಂಭ ಗೊಂಡ ಈ ಪಾದಯಾತ್ರೆಯು ಮಿರಗಿ, ಉಡಚಣ, ಮಾಶಾಳ ಹಾಗೂ ಅಕ್ಕಲಕೋಟೆ ಮಾರ್ಗವಾಗಿ ತುಳಜಾಪುರಕ್ಕೆ ಸಾಗಲಿದೆ. ಸುಮಾರು ಮೂರು ದಿನಗಳ ಕಾಲ ಪಾದಯಾತ್ರೆ ಕೈಗೊಳ್ಳಲಿರುವ ಭಕ್ತರು ಶನಿವಾರ ತುಳಜಾಪುರದ ಶ್ರೀ ಅಂಬಾಭವಾನಿ ದೇವಸ್ಥಾನವನ್ನು ತಲುಪಲಿದ್ದಾರೆ ಎಂದು ಪಾದಯಾತ್ರಿಗಳು ತಿಳಿಸಿದ್ದಾರೆ.
ಪಾದಯಾತ್ರೆಯಲ್ಲಿ ಸಾಗುವ ಭಕ್ತರಿಗೆ ದಾರಿಯುದ್ದಕ್ಕೂ ವಿವಿಧ ಗ್ರಾಮಗಳ ಅಂಬಾಭವಾನಿ ಭಕ್ತರು ಅನ್ನ ಪ್ರಸಾದ, ಕುಡಿಯುವ ನೀರು ಹಾಗೂ ಹಣ್ಣುಗಳ ವ್ಯವಸ್ಥೆ ಮಾಡುತ್ತಿದ್ದಾರೆ. ಅಲ್ಲದೆ, ಪ್ರತಿ ಹತ್ತು ಕಿಲೋಮೀಟರ್‌ಗಳ ಅಂತರದಲ್ಲಿ ಆರೋಗ್ಯ ತಪಾಸಣಾ ಕೇಂದ್ರಗಳನ್ನು ತೆರೆದು ಉಚಿತ ಆರೋಗ್ಯ ಸೇವೆ ಒದಗಿಸುವ ಮೂಲಕ ಭಕ್ತರ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದಾರೆ.ಅಂಬಾಭವಾನಿಯ ಮೇಲಿನ ಅಪಾರ ಭಕ್ತಿ ಮತ್ತು ಶ್ರದ್ಧೆಯಿಂದ ಪಾದಯಾತ್ರೆ ಕೈಗೊಂಡಿರುವ ಭಕ್ತರು, ದೇವಿಯ ದರ್ಶನ ಪಡೆದು ಸುಖ, ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಲಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗಾಲಿಬಸಾಹೇಬ ನಾಗಾವಿ ದೇವಣಗಾಂವ
