ಮಹಿಷಾಸುರ ಸಂಹಾರಿಣಿ ಚಾಮುಂಡೇಶ್ವರಿ – ಶಿವಮಾಲಾ ಜೈರಾಮ್ ಅಭಿಮತ.

ಚಳ್ಳಕೆರೆ ಅ.23

ಚಾಮುಂಡೇಶ್ವರಿಯು ದುಷ್ಟ ಮಹಿಷಾಸುರನನ್ನು ಸಂಹಾರಿಸಿ ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಮಾಡುತ್ತಾಳೆ ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯೆ ಹಾಗೂ ಶಿಕ್ಷಕಿ ಶ್ರೀಮತಿ ಶಿವಮಾಲಾ‌ ಜೈರಾಮ್ ಅಭಿಪ್ರಾಯಪಟ್ಟರು.

ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ “ನವರಾತ್ರಿ” ಯ ಪ್ರಯುಕ್ತ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಅವರು “ಮಹಿಷಾಸುರ ಮರ್ದಿನಿ ಚಾಮುಂಡೇಶ್ವರಿ” ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದರು.

ರಂಭಾ ಮತ್ತು ಮಹಿಷಿಯ ಮಗನಾದ ಮಹಿಷಾಸುರನನ್ನು ತಾಯಿ ಜಗನ್ಮಾತೆಯು ಚಾಮುಂಡೇಶ್ವರಿ-ದುರ್ಗೆಯ ಅವತಾರದಲ್ಲಿ ಸಂಹರಿಸಿ ಮಹಿಷಾಸುರ ಮರ್ದಿನಿಯಾಗಿ ಪ್ರಖ್ಯಾತಳಾಗುತ್ತಾಳೆ ಎಂದು ಅವರು ಹೇಳಿದರು.

ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ಮತ್ತು ಜಗನ್ಮಾತೆಯ ನಾಮಸ್ಮರಣೆ, ಎಂ ಗೀತಾ ಪ್ರಕಾಶ್ ಅವರಿಂದ ಶ್ರೀ ಶಂಕರಾಚಾರ್ಯ ವಿರಚಿತ ಶ್ರೀ ಸೌಂದರ್ಯ ಲಹರಿಯ ಪಾರಾಯಣ, ಭಜನೆ, ನಾಗರತ್ನಮ್ಮ, ಯತೀಶ್ ಎಂ ಸಿದ್ದಾಪುರ ಅವರಿಂದ ವಿಶೇಷ ದೇವಿ ಭಜನೆ, ಆರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು.

ವಿಶೇಷ ಸತ್ಸಂಗದಲ್ಲಿ ಹೆಚ್ ಲಕ್ಷ್ಮೀದೇವಮ್ಮ, ರಂಗಮ್ಮ, ಎಂ ಲಕ್ಷ್ಮೀದೇವಮ್ಮ, ಮಂಜುಳಾ ವಿಜಯ್, ಸರಸ್ವತಿ, ಪ್ರೇಮಾ, ರಾಘವೇಂದ್ರ ಪಾಲ್ಗೊಂಡಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button