ಚಿನ್ನದ ಪದಕ ಕುಸ್ತಿಗಳನ್ನ ಮಾಡಿಸುತ್ತಿದ್ದೇನೆ. – ಟಿ.ಎಸ್ ರಮೇಶ್.

ತರೀಕೆರೆ ಅ.24

ರಾಜ್ಯದ ಮೂಲೆ ಮೂಲೆಗಳಿಂದ ಕುಸ್ತಿ ಪೈಲ್ವಾನರು ಎರಡನೇ ದಿನದ ಹಿಂದಿನ ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘದ ಅಧ್ಯಕ್ಷರಾದ ಟಿ ಎಸ್ ರಮೇಶ್ ರವರು ಹೇಳಿದರು.

ಅವರು ಇಂದು ಪಟ್ಟಣದ ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ್ದ 101 ನೇ. ವರ್ಷದ ರಾಜ್ಯಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಸ್ಪರ್ಧೆಯ ವೇದಿಕೆಯಲ್ಲಿ ಮಾತನಾಡಿದರು. ದಾನಿಗಳು ಕೊಟ್ಟಿರುವ 60 ಚಿನ್ನದ ಪದಕದ ಕುಸ್ತಿಗಳನ್ನು ಮಾಡಿಸುತ್ತಿದ್ದೇನೆ ಎಂದು ಹೇಳಿದರು.

ಮೈಸೂರು ದಸರಾ ಕುಸ್ತಿಯಲ್ಲಿ ಟೋಪಿ ಮತ್ತು ಬಹುಮಾನ ಪಡೆದ ಪ್ರದೀಪ್ ಸೀತಾಪುರ ತರೀಕೆರೆ…..

ಉಪಾಧ್ಯಕ್ಷರಾದ ಡಾ, ಟಿ ಡಿ ರವಿಕುಮಾರ್ ಮಾತನಾಡಿ ಮಹಾರಾಷ್ಟ್ರದಿಂದ ಬಹಳಷ್ಟು ಜನ ಕುಸ್ತಿ ಪೈಲ್ವಾನರು ಭಾಗವಹಿಸಿದ್ದಾರೆ, ಲಯನ್ಸ್ ಕ್ಲಬ್ ನ ಟಿ ವಿ ಪ್ರದೀಪ್ ಕುಮಾರ್ ಕೊಟ್ಟಂತಹ ಚಿನ್ನದ ಪದಕದ ಕುಸ್ತಿಯಲ್ಲಿ ಮಹಾರಾಷ್ಟ್ರದ ಸಾಂಗ್ಲಿಯಿಂದ ಆಗಮಿಸಿದ್ದ ವಿಶ್ವಜಿತ್ ಪಂಡಿತ್ ಸಾಂಗ್ಲಿ ರವರು ಗೆದ್ದಿದ್ದಾರೆ.

ಮಾಜಿ ಪೈಲ್ವಾನ್ ತರೀಕೆರೆ ಎನ್ ವೆಂಕಟೇಶ್ ಮತ್ತು ಪತ್ರಕರ್ತ ಡಿಎಸ್ಎಸ್ ರಾಜ್ಯ ಸಂಚಾಲಕ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು…..

ನಂತರ ಡಾ, ಹರ್ಷ ರವರು ನೀಡಿದ ಚಿನ್ನದ ಪದಕದ ಕುಸ್ತಿಯಲ್ಲಿ ದಾವಣಗೆರೆ ಯ ಅರ್ಜುನ್ ಗೆದ್ದಿದ್ದು ನೆನ್ನೆ ಮೊದಲ ದಿನ ಒಟ್ಟು 137 ಜೋಡಿ ಕುಸ್ತಿಗಳನ್ನು ಟಿ ಎಸ್ ಮೋಹನ್ ಕುಮಾರ್ ರವರು ನೀಡಿದ ಸ್ಟೀಲ್ ಪಾತ್ರೆಗಳ ಕುಸ್ತಿಗಳು ನಡೆಸಲಾಯಿತು ಎಂದು ಹೇಳಿದರು.

ಕುಸ್ತಿ ಸಂಘದ ಖಜಾಂಚಿಯಾದ ಟಿ ಎನ್ ಸೋಮಶೇಖರಯ್ಯ ನವರು ಮಾತನಾಡಿ ಎರಡನೇ ದಿನವಾದ ಇಂದು 150 ಕುಸ್ತಿಗಳನ್ನ ಮಾಡಿಸಲಾಗಿದೆ ಎಂದು ಹೇಳಿದರು. ನಿರ್ದೇಶಕರಾದ ಟಿ ಜಿ ಹರೀಶ್ ಕುಮಾರ್, ಟಿ ಎಸ್ ಪ್ರಕಾಶ್, ಟಿ ಜಿ ಶಶಾಂಕ್, ಟಿ ಎನ್ ಶಿವಣ್ಣ, ಟಿ ಎಸ್ ಶ್ರೀಧರ, ಟಿ ಜೆ ಮಧು, ಪ್ರಕಾಶ್ ಮುಂತಾದವರು ಕುಸ್ತಿ ಜೋಡಣೆ ಮಾಡಿಸಿದರು.

ಇದೇ ಸಂದರ್ಭದಲ್ಲಿ ತರೀಕೆರೆ ಸೀತಾಪುರದ ಪೈಲ್ವಾನ್ ಪ್ರದೀಪ್ ಮೈಸೂರಿನಲ್ಲಿ ನಡೆದ ಕುಸ್ತಿಯಲ್ಲಿ ಭಾಗವಹಿಸಿ ಟ್ರೋಪಿ ಮತ್ತು 5,000 ರೂ ನಗದು ಬಹುಮಾನ ಪಡೆದು ತರೀಕೆರೆಗೆ ಕೀರ್ತಿ ತಂದ ಬಗ್ಗೆ ಮಾನ್ಯ ಅಧ್ಯಕ್ಷರಾದ ಟಿ ಎಸ್ ರಮೇಶ್ ರವರು ಮಾಹಿತಿ ನೀಡಿದರು.

ಜಿಲ್ಲಾ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button