“ಕನ್ನಡ ಕಂಪು”…..

ಕರುನಾಡ ರಾಜ್ಯೋತ್ಸವವು



ಅನವರತ ಜಗವ ಬೆಳಗುವ ನಂದಾ ದೀಪವು
ಈ ಕರುನಾಡು ಸವಿಕನ್ನಡ ನಾಡು
ಭಾರತಾಂಬೆಯ ಮೆಚ್ಚಿನ ಭುವನೇಶ್ವರಿಯು
ಪಂಪ ಜನ್ನ ರನ್ನರ ಕಾವ್ಯಧಾಮವು
ಶ್ರೀ ಬಸವ ಶರಣರ ಅಕ್ಕನ ವಚನ ಬೆಳಕು
ಬೇಲೂರ ಹಳೇಬೀಡು ಬದಾಮಿ ಕಲಾಕೃತಿ
ಸಿರಿನಾಡು ಸಿರಿ ಗಂಧದ ಹೊನ್ನ ಚಂದದ
ಮಲೆನಾಡು
ಸಾಹಿತ್ಯ ಸಂಸ್ಕೃತಿ ಬಹು ಕಲಾ ಜಗದಿ ಮೆರಗು
ಸೂರ್ಯೋದಯ ಹೊನ್ನ ಕಿರಣ
ಉದಯನಾಡು
ವಿವಿಧತೆಯಲಿ ಏಕತೆಯ ಕುಲವಿಡು
ಕುವೇಂಪು ದರಾ ಬೇಂದ್ರೆ ಮಾಸ್ತಿ ಶಿವರಾಂ
ಕಾರಂತರು ಕುಂದಾ ಜಿಲೇಬಿ ಬುಂದೆಯ
ಮೋತಿಚುರು
ಕರುನಾಡು ಮಹಾಕವಿಗಳ ಕಲಾರಸಿಕರ
ನೆಲೆವಿಡು
ತೆಂಗು ಬಾಳೆ ಜೋಳ ಗೋದಿ ಮಾವು ಸೇಬು
ಹಣ್ಣುಗಳು
ಫಲಪುಷ್ಪ ನಗು ಅರಳುವ ಸುಖ ಶಾಂತಿ
ನೆಲೆವಿಡು
ಕನ್ನಡ ಕಂಪು ಕರುನಾಡ ರಾಜ್ಯೋತ್ಸವವು
ಜಗದಲಿ
ಅನವರತ ಬೆಳಗುವ ನಂದಾ ದೀಪವು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇಶಂಸುದೇವರ ಹಿಪ್ಪರಗಿ
